Asianet Suvarna News Asianet Suvarna News

ಸ್ವಾತಂತ್ರ್ಯ ದಿನಾಚರಣೆಗೆ ಗುಡ್ ನ್ಯೂಸ್, ಟೊಮೆಟೋ ಪ್ರತಿ ಕೆಜಿ ಬೆಲೆ 50 ರೂಪಾಯಿ ಮಾತ್ರ!

ಆಗಸ್ಟ್ 15ರಿಂದ ಟೊಮೆಟೊ ಪ್ರತಿ ಕೆಜಿ ಬೆಲೆ 50 ರೂಪಾಯಿ ಮಾತ್ರ.ಸಗಟು ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಇಳಿಕೆಯಾಗಿರುವ ಕಾರಣ ಕೇಂದ್ರ ಸರ್ಕಾರ ಇದೀಗ ಟೊಮೆಟೊ ಬೆಲೆ ಇಳಿಕೆ ಮಾಡಿದೆ.

Government directed to sell Tomatoes at retail price of RS 50 per kg 15 august ckm
Author
First Published Aug 14, 2023, 6:54 PM IST | Last Updated Aug 14, 2023, 6:54 PM IST

ನವದೆಹಲಿ(ಆ.14) ಭಾರತದಲ್ಲಿ ಇದೇ ಮೊದಲ ಬಾರಿಗೆ ಟೊಮೆಟೊ ಬೆಲೆ 200ರ ಗಡಿ ತಲುಪಿ ದಾಖಲೆ ಬರೆದಿತ್ತು.ಕಳೆದೆರಡು ತಿಂಗಳಿಂದ ಏರಿಕೆಯ ಹಾದಿಯಲ್ಲೇ ಇದ್ದ ಟೊಮೆಟೋ ಬೆಲೆ ಇಳಿಕೆಯತ್ತ ಸಾಗುತ್ತಿದೆ. ಇದಾದ ಬಳಿಕ ಟೊಮೆಟೊ ಬೆಲೆ ಇಳಿಕೆಯಾದರೂ 100ರ ಅಸುಪಾಸಿನಲ್ಲಿದೆ. ಇದೀಗ ಕೇಂದ್ರ ಸರ್ಕಾರ ಸ್ವಾತಂತ್ರ್ಯ ದಿನಾಚರಣೆಗೆ ಸಿಹಿ ಸುದ್ದಿ ನೀಡಿದೆ. ಟೊಮೆಟೋ ಬೆಲೆ ಪ್ರತಿ ಕೆಜಿಗೆ 50 ರೂಪಾಯಿ ಎಂದು ನಿಗದಿಪಡಿಸಿದೆ. ಮಾರುಗಟ್ಟೆಯಲ್ಲಿ ಟೊಮೆಟೊ ಬೆಲೆ ಇಳಿಕೆಯಾಗಿದೆ. ಹೀಗಾಗಿ ಪ್ರತಿ ಕೆಜಿಗೆ 50 ರೂಪಾಯಿ ಬೆಲೆಯನ್ನು ಸರ್ಕಾರ ನಿಗದಿ ಮಾಡಿದೆ.

ಹಣದುಬ್ಬರ ಇಳಿಯದ ಕಾರಣ ರೇಪೋ ಬಡ್ಡಿದರವನ್ನು ಶೇ.6.5ರಲ್ಲೇ ಮುಂದುವರಿಸುವುದಾಗಿ ಆರ್‌ಸಿಬಿ ಘೋಷಿಸಿತ್ತು. ಇದರ ಬೆನ್ನಲ್ಲೇ ಆಗಸ್ಟ್ ತಿಂಗಳಲ್ಲಿ ಟೊಮೆಟೊ ಬೆಲೆ ಏರಿಕೆಯಾಗುವ ಆತಂಕ ಎದುರಾಗಿತ್ತು. ಆದರೆ ಆಗಸ್ಟ್ ತಿಂಗಳ ಆರಂಭದಿಂದಲೇ ಟೊಮೆಟೋ ಬೆಲೆ ಇಳಿಕೆಯಾಗಲು ಆರಂಭಿಸಿತ್ತು. ಇದೀಗ 70 ರೂಪಾಯಿಂದ 50 ರೂಪಾಯಿಗೆ ಇಳಿಕೆಯಾಗಿದೆ.

Chikkaballapur: ಮಾರುಕಟ್ಟೆಯಲ್ಲಿ ಟೊಮೆಟೋ ದರ ಭಾರೀ ಕುಸಿತ: ಬೆಳೆಗಾರರಲ್ಲಿ ತೀವ್ರ ನಿರಾಸೆ

ಹಣದುಬ್ಬರ, ಬೆಲೆ ಏರಿಕೆ ಮತ್ತು ಬೇಡಿಕೆಗಳನ್ನು ಪೂರೈಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಟೊಮೆಟೋ ಬೆಲೆ ನಿಯಂತ್ರಣಕ್ಕಾಗಿ ದೇಶಕ್ಕೆ ನೇಪಾಳದಿಂದ ಟೊಮೆಟೋ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದರು. ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಸರ್ಕಾರದ ಪರ ಮಾತನಾಡಿದ ನಿರ್ಮಲಾ ಮೊಜಾಂಬಿಕ್‌ನಿಂದ ತೊಗರಿ ಬೇಳೆ, ಮ್ಯಾನ್ಮಾರ್‌ನಿಂದ ಉದ್ದಿನ ಬೇಳೆ ಆಮದು ಮಾಡಿಕೊಳ್ಳಲಾಗುವುದು. ಈಗಾಗಲೇ ಸುಮಾರು 3 ಲಕ್ಷ ಟನ್‌ ಈರುಳ್ಳಿಯನ್ನು ಸಂಗ್ರಹಿಸಲಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಟೊಮೆಟೋಗಳನ್ನು ಖರೀದಿಸಿ ಉತ್ತರ ಭಾರತದ ಇತರ ರಾಜ್ಯಗಳಲ್ಲಿ ಎನ್‌ಎಎಫ್‌ಇಡಿ ಮೂಲಕ ವಿತರಿಸಲಾಗುತ್ತಿದೆ. ಈವರೆಗೆ ಎನ್‌ಎಎಫ್‌ಇಡಿ 8.84 ಲಕ್ಷ ಕೇಜಿ ಟೊಮೆಟೋಗಳನ್ನು ವಿತರಿಸಿದೆ. ಆಂಧ್ರಪ್ರದೇಶ ಮತ್ತು ಕರ್ನಾಟಕಗಳಲ್ಲಿ ಟೊಮೆಟೋ ಸಗಟು ದರ ಕಡಿಮೆಯಾಗುತ್ತಿದೆ ಎಂದರು.

ಟೊಮೆಟೋ ದರ ಮಾರುಕಟ್ಟೆಯಲ್ಲಿ ಕುಸಿಯಲಾರಂಭಿಸಿರುವ ಬೆನ್ನಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಕೂಡ 1 ಕೆ.ಜಿ. ಟೊಮೆಟೋ ದರ 40ರಿಂದ 50 ರು.ಗಳಿಗೆ ಕುಸಿದಿದೆ. ಗುಣಮಟ್ಟದ ಟೊಮೆಟೋ 60 ರು.ಗಳಿಗೆ ಮಾರಾಟವಾಗುತ್ತಿದೆ.  ಶುಭ ಸಮಾರಂಭ, ಮದುವೆ,ಮುಂಜಿ, ನಾಮಕಾರಣ ಮತ್ತಿತರ ಶುಭ ಕಾರ್ಯಗಳು ಜತೆಗೆ ವೆಂಕಟೇಶ್ವರನಿಗೆ ಪ್ರಿಯವಾದ ಶ್ರಾವಣ ಶನಿವಾರಗಳು, ವರಲಕ್ಷ್ಮೀ ಹಬ್ಬ, ಗಣೇಶ ಚತುರ್ಥಿ ಸೇರಿದಂತೆ ಹೀಗೆ ಸಾಲು ಸಾಲು ಹಬ್ಬಗಳ ಆಗಮನ ಆಗಲಿದ್ದು ಇದೀಗ ಟೊಮೆಟೋ ದರ ಕುಸಿತ ಒಂದು ರೀತಿ ಗ್ರಾಹಕರ ಮೊಗದಲ್ಲಿ ಸಂತಸ ತರಿಸಿದೆ. ಆದರೆ ದಿಢೀರ್‌ ಬೆಲೆ ಏರಿಕೆಗೊಂಡು ಅದೃಷ್ಠದ ಬಾಗಿಲು ತೆರೆದು ಟೊಮೆಟೋ ಮಾರಾಟದಿಂದ ಲಕ್ಷ ಲಕ್ಷ ಹಣ ಸಂಪಾದಿಸಿದ ರೈತರಲ್ಲಿ ಸಹಜವಾಗಿಯೆ ಬೆಲೆ ಕುಸಿತ ಬೇಸರ ಮೂಡಿಸಿದೆ.

 

ಎಸ್ಸೆಸ್ಸೆಲ್ಸಿ ಓದಿ 1 ಕೋಟಿ ರೂ. ಗಳಿಸಿದ ಚಾಮರಾಜನಗರ ಟೊಮೆಟೊ ಬೆಳೆಗಾರರು: ರೈತರಿಗೆ ಹೆಣ್ಣು ಕೊಡುವಂತೆ ಮನವಿ

ಟೊಮೆಟೋ ಬೆಲೆ ಇಳಿಕೆಯಾಗುತ್ತಿದ್ದಂತೆ ಈರುಳ್ಳಿ ಬೆಲೆ ಏರಿಕೆಯಾಗಲು ಆರಂಭವಾಗಿದ್ದು, ದೇಶದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾದ ಮಹಾರಾಷ್ಟ್ರದ ಲಸಗಾಂವ್‌ ಎಪಿಎಂಸಿಯಲ್ಲಿ 1 ವಾರದಲ್ಲಿ ಈರುಳ್ಳಿ ಬೆಲೆ ಶೇ.48ರಷ್ಟುಏರಿಕೆಯಾಗಿದೆ. ಒಂದು ಕ್ಟಿಂಟಾಲ್‌ ಈರುಳ್ಳಿ ಬೆಲೆ 1,550ರಿಂದ 2,300ಕ್ಕೆ ಹೆಚ್ಚಳವಾಗಿದೆ. ಕಳೆದ 8 ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಸಗಟು ಮಾರಾಟ ಬೆಲೆ ಏರಿಕೆಯಾಗಿದೆ. 

Latest Videos
Follow Us:
Download App:
  • android
  • ios