Asianet Suvarna News Asianet Suvarna News

13 ಗಣ್ಯರ ಭದ್ರತೆ ಅರೆ​ಸೇನಾ ಪಡೆಗೆ: NSG ಕಮಾಂಡೋ​ಗ​ಳಿ​ಗೆ ಮುಕ್ತಿ?

ಎನ್‌​ಎ​ಸ್‌ಜಿ ಕಮಾಂಡೋ​ಗ​ಳಿ​ಗೆ ವಿಐಪಿ ಭದ್ರ​ತೆ​ಯಿಂದ ಮುಕ್ತಿ?| 13 ಗಣ್ಯರ ಭದ್ರತೆ ಅರೆ​ಸೇನಾ ಪಡೆಗ​ಳಿ​ಗೆ ವಹಿ​ಸಲು ಚಿಂತ​ನೆ| ಉಗ್ರರ ನಿಗ್ರ​ಹಕ್ಕೆ ಎನ್‌​ಎ​ಸ್‌ಜಿ ಇನ್ನು ಮೀಸಲು ಸಂಭ​ವ

Government decides to withdraw NSG from VIP security duties
Author
Bangalore, First Published Jan 13, 2020, 10:55 AM IST
  • Facebook
  • Twitter
  • Whatsapp

ನವ​ದೆ​ಹ​ಲಿ[ಜ.13]: 2008ರಲ್ಲಿ ಮುಂಬೈ ಮೇಲೆ ದಾಳಿ ನಡೆ​ಸಿದ್ದ ಲಷ್ಕರ್‌ ಎ ತೊಯ್ಬಾ ಉಗ್ರ​ರನ್ನು ಸಂಹಾರ ಮಾಡಿದ ಖ್ಯಾತಿಯ ರಾಷ್ಟ್ರೀಯ ಭದ್ರತಾ ಪಡೆ (ಎ​ನ್‌​ಎ​ಸ್‌​ಜಿ) ಯೋಧ​ರಿಗೆ ವಿಐ​ಪಿ​ಗಳ ಭದ್ರ​ತೆ​ಯಿಂದ ಮುಕ್ತಿ​ ಕೊಡಿ​ಸಲು ಕೇಂದ್ರ ಸರ್ಕಾರ ಮುಂದಾ​ಗಿದೆ. ದೇಶದ ಗಣ್ಯಾ​ತಿ​ಗಣ್ಯ ವ್ಯಕ್ತಿ​ಗ​ಳ ಭದ್ರತಾ ಹೊಣೆ​ಯ​ನ್ನು ಎನ್‌​ಎ​ಸ್‌ಜಿ ಬದ​ಲಿಗೆ ಸಿಆ​ರ್‌​ಪಿ​ಎಫ್‌ ಹಾಗೂ ಸಿಐ​ಎ​ಸ್‌​ಎ​ಫ್‌​ನಂತಹ ಅರೆ​ಸೇನಾ ಪಡೆ​ಗ​ಳಿಗೆ ವಹಿ​ಸಲು ಸರ್ಕಾರ ಚಿಂತನೆ ನಡೆ​ಸಿ​ದೆ.

ಭಯೋ​ತ್ಪಾ​ದನೆ ಹಾಗೂ ವಿಮಾನ ಅಪ​ಹ​ರಣ ಪ್ರಕ​ರ​ಣ​ಗಳ ನಿಗ್ರ​ಹ​ದ ಮುಖ್ಯ ಉದ್ದೇ​ಶ​ದೊಂದಿಗೆ 1984ರಲ್ಲಿ ಎನ್‌​ಎ​ಸ್‌​ಜಿ​ಯನ್ನು ರಚನೆ ಮಾಡ​ಲಾ​ಗಿತ್ತು. ಆದರೆ ನಂತ​ರದ ದಿನ​ಗ​ಳಲ್ಲಿ ಸರ್ಕಾ​ರ​ಗಳು ಈ ಮೂಲ ಉದ್ದೇ​ಶ​ವನ್ನು ಮರೆತು, ‘ಬ್ಲ್ಯಾಕ್‌ ಕ್ಯಾಟ್‌’ ಎಂದೇ ಹೆಸ​ರು​ವಾ​ಸಿ​ಯಾ​ಗಿ​ರುವ ಎನ್‌​ಎ​ಸ್‌ಜಿ ಯೋಧ​ರನ್ನು ವಿಐ​ಪಿ​ಗಳ ಭದ್ರ​ತೆಗೆ ನಿಯೋ​ಜಿ​ಸುವ ಪರಿ​ಪಾಠ ಆರಂಭಿ​ಸಿ​ದರು.

ರಕ್ಷಣಾ ಸಚಿವ ರಾಜ​ನಾಥ ಸಿಂಗ್‌, ಉತ್ತ​ರ​ಪ್ರ​ದೇಶ ಮುಖ್ಯ​ಮಂತ್ರಿ ಯೋಗಿ ಆದಿ​ತ್ಯ​ನಾಥ್‌, ಮಾಜಿ ಮುಖ್ಯ​ಮಂತ್ರಿ​ಗ​ಳಾದ ಮಾಯಾ​ವತಿ, ಮುಲಾಯಂ ಸಿಂಗ್‌ ಯಾದವ್‌, ಚಂದ್ರ​ಬಾಬು ನಾಯ್ಡು, ಪ್ರಕಾಶ್‌ ಸಿಂಗ್‌ ಬಾದಲ್‌, ಫಾರೂಕ್‌ ಅಬ್ದುಲ್ಲಾ, ಅಸ್ಸಾಂ ಮುಖ್ಯ​ಮಂತ್ರಿ ಸರ್ಬಾ​ನಂದ ಸೋನೋ​ವಲ್‌, ಬಿಜೆಪಿ ನಾಯಕ ಎಲ್‌.ಕೆ. ಅಡ್ವಾಣಿ ಸೇರಿ 13 ಮಂದಿ ಸದ್ಯ ಎನ್‌​ಎ​ಸ್‌ಜಿ ಭದ್ರತೆ ಪಡೆ​ಯು​ತ್ತಿ​ದ್ದಾ​ರೆ.

ಅರೆಸೇನಾ ಪಡೆ ವಿಲೀನಕ್ಕೆ ಕೇಂದ್ರ ಸರ್ಕಾರ ಚಿಂತನೆ!

ಈ ನಾಯ​ಕರ ಭದ್ರ​ತೆ​ಯನ್ನು ಅರೆ​ಸೇ​ನಾ​ಪ​ಡೆಗಳಿಗೆ ವಹಿ​ಸಿ​ದರೆ ಸುಮಾ​ರು 450 ಕಮಾಂಡೋ​ಗಳು ಭದ್ರತಾ ಜವಾ​ಬ್ದಾ​ರಿ​ಯಿಂದ ಮುಕ್ತ​ರಾ​ಗು​ತ್ತಾರೆ. ಎನ್‌​ಎ​ಸ್‌​ಜಿ​ಯನ್ನು ಅದು ಸ್ಥಾಪ​ನೆ​ಯಾದ ನೈಜ ಉದ್ದೇ​ಶಕ್ಕೆ ಬಳ​ಸುವ ಉದ್ದೇ​ಶ​ದಿಂದಲೇ ವಿಐಪಿ ಭದ್ರತಾ ಜವಾ​ಬ್ದಾ​ರಿ​ಯನ್ನು ಆ ಪಡೆ​ಯಿಂದ ವರ್ಗಾ​ಯಿ​ಸಲು ಕೇಂದ್ರ ಸರ್ಕಾರ ಚಿಂತನೆ ನಡೆ​ಸಿದೆ ಎಂದು ಹಿರಿಯ ಅಧಿ​ಕಾ​ರಿ​ಯೊ​ಬ್ಬರು ತಿಳಿ​ಸಿ​ದ್ದಾ​ರೆ.

2008ರ ನವೆಂಬ​ರ್‌​ನಲ್ಲಿ ನಡೆದ ಮುಂಬೈ ದಾಳಿ ವೇಳೆ ಕಾರ್ಯಾ​ಚ​ರ​ಣೆಗೆ 400 ಕಮಾಂಡೋ​ಗ​ಳನ್ನು ನಿಯೋ​ಜಿ​ಸ​ಲಾ​ಗಿತ್ತು. ಒಂದೇ ಬಾರಿ ಹಲವು ಕಡೆ ಉಗ್ರರ ದಾಳಿ ನಡೆ​ದರೆ ಎನ್‌​ಎ​ಸ್‌ಜಿ ಕಮಾಂಡೋ​ಗಳು ಹೆಚ್ಚಿನ ಸಂಖ್ಯೆ​ಯಲ್ಲಿ ಬೇಕಾ​ಗು​ತ್ತಾರೆ. ಆದರೆ ಕಮಾಂಡೋ​ಗಳು ಸೀಮಿತ ಸಂಖ್ಯೆ​ಯ​ಲ್ಲಿ​ರುವ ಕಾರಣ ಸರ್ಕಾರ ವಿಐಪಿ ಭದ್ರ​ತೆ​ಯಿಂದ ಅವ​ರಿಗೆ ಮುಕ್ತಿ ಕೊಡಿ​ಸು​ತ್ತಿದೆ ಎಂದು ವಿವ​ರಿ​ಸಿ​ದ್ದಾ​ರೆ.

Follow Us:
Download App:
  • android
  • ios