Asianet Suvarna News Asianet Suvarna News

ಗೌಪ್ಯ ವರದಿ ಸೋರಿಕೆ: CCI ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ Google!

* ಭಾರತೀಯ ಸ್ಪರ್ಧಾ ಆಯೋಗದಿಂದ ವಿಶ್ವಾಸದ್ರೋಹದ ಕೆಲಸದ ಆರೋಪ

* ಸಿಸಿಐ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಗೂಗಲ್

* ಭಾರತೀಯ ಸ್ಪರ್ಧಾ ಆಯೋಗದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ 

* ಗೂಗಲ್ ಆರೋಪ ಸುಳ್ಳೆದ ಸಿಸಿಐ

Google files writ with Delhi HC against CCI after leak of confidential report pod
Author
Bangalore, First Published Sep 24, 2021, 4:57 PM IST
  • Facebook
  • Twitter
  • Whatsapp

ನವದೆಹಲಿ(ಸೆ.24): ಭಾರತೀಯ ಸ್ಪರ್ಧಾ ಆಯೋಗ(Competition Commission of India) ವಿಶ್ವಾಸದ್ರೋಹದ ಕೆಲಸ ಮಾಡಿದ್ದು, ತನಗೆ ಸಂಬಂಧಿಸಿದ ಗೌಪ್ಯ ವರದಿಗಳನ್ನು(Confidential Information) ಸೋರಿಕೆ ಮಾಡಿದೆ ಎಂದು ಆರೋಪಿಸಿ ಗೂಗಲ್‌(Google) ಸಂಸ್ಥೆ ದೆಹಲಿ ಕೋರ್ಟ್‌(Delhi Court) ಮೆಟ್ಟಿಲೇರಿದೆ. ರಿಟ್‌ ಅರ್ಜಿ ಸಲ್ಲಿಸಿರುವ ಗೂಗಲ್ ಸಿಸಿಐ ಈ ಕೃತ್ಯ ತನಗೆ ಹಾಗೂ ತನ್ನ ಪಾಲುದಾರ ಸಂಸ್ಥೆಗಳಿಗೆ ಕೆಡುಕಾಗುವಂತಿದೆ, ಹೀಗಾಗಿ ಭಾರತೀಯ ಸ್ಪರ್ಧಾ ಆಯೋಗದ(CCI) ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದೆ.

ಏನಿದು ಪ್ರಕರಣ?

2019ರಲ್ಲಿ ಗೂಗಲ್‌(Google) ಸ್ಪರ್ಧಾ ನಿಯಮಗಳನ್ನು ಮೀರುತ್ತಿದೆ ಎಂದು ಶಂಕಿಸಿದ್ದ ಸಿಸಿಐ, ಅದರ ವಿರುದ್ಧ ವಿವರವಾದ ತನಿಖೆ ನಡೆಸುವಂತೆ ಆದೇಶಿಸಿತ್ತು. ಈ ತನಿಖೆಯಡಿ ಆ್ಯಂಡ್ರಾಯ್ಡ್‌ ಸಂಸ್ಥೆಗೆ ಸಂಬಂಧಿಸಿದ ವ್ಯವಹಾರದಲ್ಲಿ ಗೂಗಲ್‌ ಅವ್ಯವಹಾರ ನಡೆಸುತ್ತಿದೆ ಎಂದು ಕಳೆದ ವಾರವಷ್ಟೇ ಸಿಸಿಐ ಡಿಜಿ ಮಾಹಿತಿ ಕಲೆಹಾಕಿದ್ದರು. ಆದರೆ ಅಷ್ಟರಲ್ಲೇ ಈ ವರದಿ ಬಹಿರಂಗವಾಗಿದೆ ಹಾಗೂ ಮಾಧ್ಯಮಗಳಿಗೆ ದೊರಕಿದೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ತನಿಖೆ ಹಂತದಲ್ಲಿದ್ದಾಗ ಪ್ರಕರಣಕ್ಕೆ ಸಂಬಂಧ ಗೌಪ್ಯವಾಗಿರಬೇಕಿದ್ದ ಸೂಕ್ಷ್ಮ ವರದಿ ಡಿಜಿ ಬಹಿರಂಗಪಡಿಸಿದ್ದಾರೆ. ಈ ಮೂಲಕ ತನ್ನ ಅಧಿಕಾರವನ್ನು ದುರುಪಯೋಗಪಡಿಸುತ್ತಿದೆ. ಇಂತಹ ತನಿಖಾ ವರದಿ ಕಾಪಾಡುವುದು ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ತನಿಖೆಗಳ ಮೂಲಭೂತ ಕರ್ತವ್ಯವಾಗಿದೆ. ಹೀಗಿರುವಾಗ ನಾವು ನ್ಯಾಯಸಮ್ಮತವಾಗಿ ನಮ್ಮ ಹಕ್ಕು ಪಡೆಯಲು ಹಾಗೂ ಇನ್ಮುಂದೆ ಇಂತಹ ಲೋಪ ಹಾಗೂ ಕಾನೂನು ಬಾಹಿರ ಕೆಲಸ ನಡೆಯದಂತೆ ನೋಡಿಕೊಳ್ಳಲು ಕೋರ್ಟ್ ಮೆಟ್ಟಿಲೇರಿದ್ದೇವೆ ಎಂದು ಗೂಗಲ್‌(Google) ವಕ್ತಾರ ತಿಳಿಸಿದ್ದಾರೆ

ಅಲ್ಲದೇ ಸಂಸ್ಥೆಗೆ ಸಂಬಂಧಿಸಿದ ಇತರ ಗೌಪ್ಯ ಮಾಹಿತಿಗಳನ್ನು ಭಾರತೀಯ ಸ್ಪರ್ಧಾ ಆಯೋಗ(CCI) ಬಹಿರಂಗಪಡಿಸದಂತೆ ಎಚ್ಚರವಹಿಸುವ ಗುರಿ ಹೊಂದಿದ್ದೇವೆ ಎಂದಿದ್ದಾರೆ. ಜೊತೆಗೆ ಸಂಸ್ಥೆ ತನಿಖಾ ಆ ವರದಿಯನ್ನು ಪಡೆದಿಲ್ಲ ಹಾಗೂ ಯಾವುದೇ ಪರಿಶೀಲನೆ ನಡೆಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಅತ್ತ ಸಿಸಿಐ ಪರ ವಕೀಲ, ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಮಣ್, ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಅಮೆರಿಕ ಮೂಲದ ದೈತ್ಯ ಟೆಕ್‌ ಸಂಸ್ಥೆ ತನಿಖಾ ಪ್ರಕ್ರಿಯೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದೆ. ಈ ಬಗ್ಗೆ ಯಾವುದೇ ಸಾಕ್ಷ್ಯಾಧಾರವಿಲ್ಲದೆ ಸರ್ಕಾರಿ ಪ್ರಾಧಿಕಾರಕ್ಕೆ ಸವಾಲು ಹಾಕುತ್ತಿದ್ದಾರೆ ಎಂದಿದ್ದಾರೆ.

Follow Us:
Download App:
  • android
  • ios