Asianet Suvarna News Asianet Suvarna News

ಡಿಸಿ ಕಚೇರಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುವ ಗುಮಾಸ್ತನ ಬಳಿ ಇದೆ 9 ಕಾರು, ಐಷಾರಾಮಿ ಮನೆ

ಉತ್ತರ ಪ್ರದೇಶದ ಗೋಂಡಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಂತೋಷ್‌ ಕುಮಾರ್‌ ಜೈಸ್ವಾಲ್ ಎಂಬಾತನ ಬಳಿ ಐಷಾರಾಮಿ ಬಂಗಲೆ, 9 ದುಬಾರಿ ಮೌಲ್ಯದ ಕಾರುಗಳು ಪತ್ತೆಯಾಗಿದ್ದು ಆತನ ಸಂಪಾದನೆಯ ಮಾರ್ಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

Gonda DC office cleaning staff owns Luxury house, 9 cars akb
Author
First Published Aug 19, 2024, 10:20 AM IST | Last Updated Aug 19, 2024, 10:35 AM IST

ಲಖನೌ: ಉತ್ತರ ಪ್ರದೇಶದ ಗೋಂಡಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಂತೋಷ್‌ ಕುಮಾರ್‌ ಜೈಸ್ವಾಲ್ ಎಂಬಾತನ ಬಳಿ ಐಷಾರಾಮಿ ಬಂಗಲೆ, 9 ದುಬಾರಿ ಮೌಲ್ಯದ ಕಾರುಗಳು ಪತ್ತೆಯಾಗಿದ್ದು ಆತನ ಸಂಪಾದನೆಯ ಮಾರ್ಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಕಮಿಷನರ್ ಕಚೇರಿಯಲ್ಲಿ ಗುಮಾಸ್ತನ ಕೆಲಸ ಮಾಡುತ್ತಿರುವ ಸಂತೋಷ್‌ ವಿರುದ್ಧ ಅಕ್ರಮದ ದೂರು ಕೇಳಿ ಬಂದಿತ್ತು. ಸರ್ಕಾರಿ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಆತನನ್ನು ಅಮಾನತುಗೊಳಿಸಿ ಆತನ ವಿರುದ್ಧ ತನಿಖೆಗೆ ಆದೇಶಿಸಿದ್ದರು. ತನಿಖೆಗೆ ಇಳಿದ ಅಧಿಕಾರಿಗಳಿಗೆ ಜೈಸ್ವಾಲ್‌ ಬಳಿ ವೇಳೆ ಪತ್ತೆಯಾದ ಸಂಪತ್ತಿನ ರಾಶಿ ದಂಗಾಗಿಸಿದೆ.

ಕಚೇರಿಯಲ್ಲಿ ಕೆಲಸದ ವೇಳೆ ಸಂತೋಷ್‌, ಫೈಲ್‌ಗಳನ್ನು ತಿರುಚುವ, ಕಡತ ದುರುಪಯೋಗದ ಕೆಲಸ ಮಾಡಿ ಹಲವು ವರ್ಷಗಳಿಂದ ಭಾರೀ ಹಣ ಸಂಪಾದನೆ ಮಾಡಿದ್ದ ಎಂಬುದು ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆ ವೇಳೆ ಐಷಾರಾಮಿ ಮನೆ, 9 ಕಾರು ಹಾಗೂ ಈತನ ಬ್ಯಾಂಕ್‌ ಖಾತೆಯಲ್ಲಿ ಭಾರೀ ಹಣ ಪತ್ತೆಯಾಗಿದೆ.

ಭಾರತದ ಅತ್ಯಂತ ಸಿರಿವಂತ ನಟಿಯಾಗಿದ್ದ ಇವರ ಬಳಿ ಇದ್ದಿದ್ದು ನೂರಾರು ಕೆಜಿ ಚಿನ್ನ, ಬೆಳ್ಳಿ!

ಬಿಬಿಎಂಪಿ ಚೀಫ್ ಇಂಜಿನಿಯರ್ ಮನೆ ಸೇರಿ ಏಕಕಾಲಕ್ಕೆ ರಾಜ್ಯದ 60 ಕಡೆ ಲೋಕಾಯುಕ್ತ ದಾಳಿ!

Latest Videos
Follow Us:
Download App:
  • android
  • ios