Gold Hands To Thimmappa: ಅನಾಮಧೇಯ ಭಕ್ತನಿಂದ ತಿರುಪತಿ ವೆಂಕಟರಣನಿಗೆ ಚಿನ್ನದ ಕೈ ಕಾಣಿಕೆ

  • ತಿರುಪತಿ ತಿಮ್ಮಪ್ಪನಿಗೆ ಚಿನ್ನದ ವೈಭೋಗ
  • 3 ಕೋಟಿ ಮೌಲ್ಯದ ಚಿನ್ನ ಕಾಣಿಕೆ ನೀಡಿದ ಅನಾಮಧೇಯ ಭಕ್ತ
  • 5.3 ಕೆಜಿ ತೂಕವಿರುವ ವಜ್ರ ಖಚಿತ ಚಿನ್ನದ ಕೈಗವಸು
gold ornaments worth 3 crore donated to Indias richest temple tirupati akb

ತಿರುಪತಿ(ಡಿ.11)ಕೊರೋನಾದಿಂದಾಗಿ ಆರ್ಥಿಕ ಹಿಂಜರಿತದ ನಡುವೆಯೂ ದೇಗುಲಗಳಿಗೆ ಬರುವ ದಾನಗಳಿಗೇನು ಕಡಿಮೆಯಾಗಿಲ್ಲ. ದೇಶದ ಅತ್ಯಂತ ಶ್ರೀಮಂತ ದೇಗುಲ ಎನಿಸಿರುವ ಆಂಧ್ರಪ್ರದೇಶ(Andhra Pradesh)ದ ತಿರುಪತಿ ತಿಮ್ಮಪ್ಪ ದೇಗುಲಕ್ಕೆ ಅನಾಮಧೇಯ ಭಕ್ತರೊಬ್ಬರು ಸುಮಾರು 3 ಕೋಟಿ ಮೌಲ್ಯದ ಆಭರಣವನ್ನು ದಾನವಾಗಿ ನೀಡಿದ್ದಾರೆ. ವೆಂಕಟೇಶ್ವರ ಸ್ವಾಮಿಯ ಅಂಗೈಯನ್ನು ಅಲಂಕರಿಸುವ ಸಲುವಾಗಿ ಸುಮಾರು 5.3 ಕೆಜಿ ತೂಕವಿರುವ ಅಂದಾಜು 3 ಕೋಟಿ ಮೌಲ್ಯದ ರತ್ನ ಖಚಿತವಾದ ಚಿನ್ನದ ಕೈಗವಸು ವರದ ಹಸ್ತವನ್ನು ದಾನವಾಗಿ ನೀಡಲಾಗಿದೆ. ದಾನಿ ನೀಡಿದವರ ಹೆಸರನ್ನು ರಹಸ್ಯವಾಗಿ ಇಡಲಾಗಿದೆ. ಶುಕ್ರವಾರದಂದು ವಿಐಪಿ ದರ್ಶನದ ವೇಳೆ ಭಕ್ತರೊಬ್ಬರು ಈ ವಜ್ರ ಖಚಿತ ಚಿನ್ನದ ಕೈಗವಸುಗಳನ್ನು ದಾನವಾಗಿ ನೀಡಿದ್ದಾರೆ. 

ತಿರುಮಲದ ರಂಗನೈಕುಲ ಮಂಡಪಂ(Ranganaikula Mandapam)ನಲ್ಲಿ ತಿರುಮಲ ದೇವಸ್ಥಾನಂನ ಅಧಿಕಾರಿಗಳಿಗೆ ಹಸ್ತಗಳನ್ನು ನೀಡಲಾಗಿದ್ದು, ದಾನ ನೀಡಿದವರ ವಿವರವನ್ನು ರಹಸ್ಯವಾಗಿ ಇಡಲಾಗಿದೆ. ಮೂಲಗಳ ಪ್ರಕಾರ ದಾನ ನೀಡಿದವರು ನಗರವೊಂದರಲ್ಲಿ ವ್ಯಾಪಾರಿ ಎನ್ನಲಾಗಿದೆ. ತಮ್ಮ ಕುಟುಂಬ ಸದಸ್ಯರೊಂದಿಗೆ ಬಂದು ಕಟಿ ಹಸ್ತ ಹಾಗೂ ವರದ ಹಸ್ತ ಎಂದು ಕರೆಯುವ ಕಾಣಿಕೆಯನ್ನು ತಿರುಪತಿ ತಿರುಮಲ ದೇವಸ್ಥಾನದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎಂ. ವೆಂಕಟ ಧರ್ಮ ರೆಡ್ಡಿ(Venkata Dharma Reddy) ಅವರಿಗೆ ಹಸ್ತಾಂತರಿಸಿದರು ಎಂದು ದೇವಸ್ಥಾನದ  ಅಧಿಕಾರಿಗಳು ಹೇಳಿದರು. ವೆಂಕಟೇಶ್ವರನಿಗೆ ಕಾಣಿಕೆಯಾಗಿ ನೀಡಿರುವ ಈ ಚಿನ್ನ ವಜ್ರದ ಹಸ್ತಗಳನ್ನು ನಾನು ಭಕ್ತಿಯಿಂದ ನೀಡುತ್ತಿದ್ದೇನೆ, ಅದಕ್ಕೆ ಪ್ರಚಾರ ಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. 

Landslides on Tirumala ghat: ಜಸ್ಟ್ ಮಿಸ್, 20 ಮಂದಿ ಪ್ರಣಾಪಾಯದಿಂದ ಬಚಾವ್

ಇತ್ತೀಚೆಗೆ ನವೆಂಬರ್ 18 ರಂದು ಭಾರಿ ಮಳೆಯಿಂದಾಗಿ ತಿರುಪತಿಯ ಬೆಟ್ಟದಲ್ಲಿ ಭೂ ಕುಸಿತವುಂಟಾಗಿತ್ತು.  ಮಳೆಯಿಂದಾಗಿ ತಿರುಪತಿ ಘಾಟ್‌ನ ರಸ್ತೆಗಳನ್ನು ಎರಡು ದಿನಗಳ ಮಟ್ಟಿಗೆ ಮುಚ್ಚಲಾಗಿತ್ತು. ಬಳಿಕ ದುರಸ್ತಿಗೊಳಿಸಿ ಕೆಲವು ದಿನಗಳ ನಂತರ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ತಿರುಪತಿಯಲ್ಲಿ 25 ವರ್ಷಗಳಲ್ಲೇ ಬಂದ ಅತ್ಯಧಿಕ ಮಳೆ ಇದಾಗಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ವಿಶ್ವದ ಅತ್ಯಂತ ಸಿರಿವಂತ ದೇವರಾದ ತಿರುಪತಿ ತಿಮ್ಮಪ್ಪನಿಗೂ (Tirupathi) ಸಂಕಷ್ಟ ತಂದಿಟ್ಟಿತ್ತು. ತಿರುಮಲ, ತಿರುಪತಿ ಸೇರಿದಂತೆ ಚಿತ್ತೂರು (Chittur) ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿತ್ತು, ಎಲ್ಲೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು  ದೇಗುಲ (Temple) ನಗರದ ತಿರುಪತಿಯಲ್ಲಿ ಇಂಥ ಮಳೆ  ಈ ಹಿಂದೆ 1996ರಲ್ಲಿ ಘಟಿಸಿತ್ತು ಆದಾದ ಬಳಿ ಈ ರೀತಿಯಾಗಿದ್ದು ಇದೇ ಮೊದಲು ಎನ್ನಲಾಗುತ್ತಿದೆ.

Rain| ತಿರುಪತಿ ಡ್ಯಾಂನಲ್ಲಿ ಬಿರುಕು : ಸುರಕ್ಷಿತ ಸ್ಥಳಗಳಿಗೆ ತೆರಳಲು ಜನರಿಗೆ ಸೂಚನೆ

ತಿರುಮಲ (Tirumala) ಬೆಟ್ಟಕ್ಕೆ ಹೊಂದಿಕೊಂಡಿರುವ ಎಲ್ಲಾ ನಾಲ್ಕು ಪವಿತ್ರ ಮಾಡಾ ಬೀದಿಗಳು ಮತ್ತು ವೈಕುಂಠ ಕ್ಯೂ ಕಾಂಪ್ಲೆಕ್ಸ್‌ ಕೂಡಾ ಪೂರ್ಣ ಜಲಾವೃತವಾಗಿತ್ತು. ತಿರುಮಲದ ಜಪಾಲಿ ಆಂಜನೇಯ ದೇಗುಲ (Japali anjaneya temple) ಕೂಡಾ ನೀರಿನಲ್ಲಿ ಮುಳುಗಿತ್ತು. ಭಾರೀ ಮಳೆಯ ಪರಿಣಾಮ ತಿಮ್ಮಪ್ಪನ ದರ್ಶನವನ್ನು   ಸ್ಥಗಿತಗೊಳಿಸಿದ್ದರಿಂದ, ದೇವರ ದರ್ಶನಕ್ಕೆ ಆಗಮಿಸಿದ್ದ ಸಾಕಷ್ಟು ಜನ ಬೆಟ್ಟದ ಮೇಲೆಯೇ ಸಿಕ್ಕಿಬಿದ್ದಿದ್ದರು.

ಡಿಸೆಂಬರ್‌ನಲ್ಲಿಯೂ ಇಲ್ಲಿ ಭೂ ಕುಸಿತ ವುಂಟಾಗಿ ಬಸ್ಸಿನಲ್ಲಿದ್ದ 20 ಪ್ರಯಾಣಿಕರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು. ಬುಧವಾರ ಬೆಳಗ್ಗೆ ಬಸ್ಸೊಂದು ಬೆಟ್ಟಏರುತ್ತಿದ್ದ ವೇಳೆ, ಏಕಾಏಕಿ ಬಂಡೆಯೊಂದು ಬೆಟ್ಟದಿಂದ ಕೆಳಗೆ ಉರುಳಿದೆ. ಇದನ್ನು ಚಾಲಕ ತಕ್ಷಣವೇ ಗಮನಿಸಿ ಬಸ್ಸನ್ನು ನಿಲ್ಲಿಸಿದ ಕಾರಣ, ಬಸ್ಸಿನಲ್ಲಿದ್ದ 20 ಜನರು ಪ್ರಾಣಾಪಾಯದಿಂದ ಪಾರಾಗಿದ್ದರೆ. ತಿರುಪತಿ ಬೆಟ್ಟದ 2ನೇ ಘಾಟ್‌ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಸಂಚಾರವನ್ನು ಬಂದ್‌ ಮಾಡಲಾಗಿತ್ತು. ಸುಮಾರು ಅಡಿ ಎತ್ತರದಿಂದ ಬಂಡೆಗಳು ಉರುಳಿ ಬಿದ್ದ ಪರಿಣಾಮ ಹಲವು ಕಾರುಗಳು ಸೇರಿ ರಸ್ತೆಗಳು ಹಾನಿಗೊಳಗಾಗಿದ್ದವು.  ನಂತರ ವಾಹನಗಳನ್ನು ಅಂತಿಮವಾಗಿ ಲಿಂಕ್ ರಸ್ತೆಯ ಉದ್ದಕ್ಕೂ ಪರ್ಯಾಯ ಮಾರ್ಗಗಳ ಮೂಲಕ ನಿಧಾನವಾಗಿ ತಿರುಗಿಸಲಾಯಿತು. ಬೆಟ್ಟಗಳಿಂದ ಘಾಟ್ ರಸ್ತೆಗೆ ಬಂಡೆಗಳು ಬಿದ್ದಿದ್ದು, ರಸ್ತೆ ಹಲವು ಕಡೆ ಹಾಳಾಗಿದೆ.

Latest Videos
Follow Us:
Download App:
  • android
  • ios