ಬೇಡಿಕೆ ಪೂರೈಸದಿದ್ದರೆ ಇಲ್ಲಿ ದೇವರು ಕೂಡ ಕಟಕಟೆಯಲ್ಲಿ ನಿಲ್ಲಬೇಕು, ತಪ್ಪಿದ್ದರೆ ಗಡೀಪಾರು ಶಿಕ್ಷೆ!
ಇಲ್ಲಿ ದೇವರ ಬಳಿ ಹರಕೆ ಸೇರಿದಂತೆ ಯಾವುದೇ ಬೇಡಿಕೆ ಇಟ್ಟರೂ ದೇವರು ಪೂರೈಸಲೇಬೇಕು. ಇಲ್ಲಿದ್ದರೆ ಪ್ರತಿ ವರ್ಷ ನಡೆಯುವ ಅದಾಲತ್‌ನಲ್ಲಿ ದೇವರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಬುಡಕಟ್ಟ ಸಮುದಾಯದ ವಿಶೇಷ ಸಂಪ್ರದಾಯ ಹಾಗೂ ಆಚರಣೆ ಇಲ್ಲಿದೆ.
ಚತ್ತೀಸಘಡ(ಸೆ.08) ನಿಯಮ ಎಲ್ಲರಿಗೂ ಒಂದೆ. ಇದಕ್ಕೆ ಆರಾಧಿಸುವ ದೇವರು ಕೂಡ ಹೊರತಾಗಿಲ್ಲ. ಆಗಿದ್ದೆಲ್ಲವೂ ಒಳ್ಳೆಯದ್ದಕ್ಕಾಗಿ ಎಂದು ತಮ್ಮನ್ನು ತಾವು ಸಮಾಧಾನ ಪಡುವ ಜಾಯಮಾನ ಇಲ್ಲಿಲ್ಲ. ಎಲ್ಲದ್ದಕ್ಕೂ ಉತ್ತರ ಬೇಕು. ಸಮಸ್ಯೆ ಇತ್ಯರ್ಥವಾಗಬೇಕು. ಆಗದಿದ್ದಲ್ಲಿ ದೇವರಿಗೂ ಶಿಕ್ಷೆ ತಪ್ಪಿದ್ದಲ್ಲ. ಅರೇ ಇದೇನಿದು ಅಂತೀರಾ? ಹೌದು ಬುಡಕಟ್ಟು ಸಮುದಾಯದಲ್ಲೊಂದು ವಿಶೇಷ ಆಚರಣೆ ಇದೆ. ಇಲ್ಲಿ ಭಕ್ತರು ಯಾವುದೇ ಬೇಡಿಕೆ, ಮನವಿ, ಸಮಸ್ಯೆ ದೇವರ ಬಳಿ ಹೇಳಿಕೊಂಡ ಬಳಿಕ ಒಂದು ವರ್ಷ ಸಮಯವಿದೆ. ಈ ಸಮಯದಲ್ಲಿ ದೇವರು ಭಕ್ತರ ಬೇಡಿಕೆಯನ್ನು ಅಥವಾ ಸಮಸ್ಯೆಯನ್ನು ಇತ್ಯರ್ಥ ಮಾಡಬೇಕು. ಮಾಡದಿದ್ದಲ್ಲಿ ವರ್ಷದ ಜಾತ್ರೆಯಲ್ಲಿ ನಡೆಯು ದೇವರ ಅದಾಲತ್‌ನಲ್ಲಿ ದೇವರಿಗೆ ಶಿಕ್ಷೆ ವಿಧಿಸಲಾಗುತ್ತದೆ, ದೇವರನ್ನೇ ಗಡೀಪಾರು ಮಾಡಲಾಗುತ್ತದೆ. ಈ ವಿಶೇಷ ಹಾಗೂ ಕುತೂಹಲಕರ ಆಚರಣೆ ಚತ್ತೀಸಘಡದ ಬಸ್ತಾರ್ ಪ್ರದೇಶ ಬಡಕಟ್ಟು ಸಮುದಾಯದಲ್ಲಿ ಆಚರಣೆಯಲ್ಲಿದೆ.
ಭಂಗರಮ್ ದೇವಿ ದೇವಸ್ಥಾನದಲ್ಲಿ ಈ ವಿಶೇಷ ಆಚರಣೆ ಜಾರಿಯಲ್ಲಿದೆ. ಇಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಭಾಡೋ ಜಾತ್ರೆ ನಡೆಯಲಿದೆ. ಮೂರು ದಿನಗಳ ಕಾಲ ಈ ಜಾತ್ರೆ ನಡೆಯಲಿದೆ. ಈ ಪೈಕಿ ಕೊನೆಯ ದಿನ ಅದಾಲತ್ ನಡೆಯಲಿದೆ. ಶೇಕಡಾ 70 ರಷ್ಟು ಜನಸಂಖ್ಯೆ ಹೊಂದಿರು ಬಸ್ತಾರ್‌ನ ಬುಡುಕಟ್ಟು ಸಮುದಾಯದ ಮಂದಿಗೆ ಈ ಭಂಗರಮ್ ದೇವಿ ಅತ್ಯಂತ ಪ್ರಮುಖ ಹಾಗೂ ನಂಬಿಕೆಯ ದೇವಿ. ಜಾತ್ರೆಯ ಕೊನೆಯ ದಿನ ನಡೆಯುವ ಅದಾಲತ್ ಭಂಗರಂ ದೇವಿ ಅಧ್ಯಕ್ಷತೆಯಲ್ಲಿ ನಡೆಯುತ್ತದೆ.
ನಿಮ್ಮನೆಗೆ ಲಕ್ಷ್ಮಿ ಬರಬೇಕಾ? ಪರ್ಸಲ್ಲಿ ದುಡ್ಡು ತುಂಬಿರಬೇಕು ಅಂದ್ರೆ ಹೀಗ್ ಮಾಡಿ
ಈ ಅದಾಲತ್‌ನಲ್ಲಿ ಭಕ್ತರು ತಾವು ಇಟ್ಟ ಬೇಡಿಕೆ ಹಾಗೂ ಅದು ಪೂರೈಕೆ ಅಥವಾ ಇತ್ಯರ್ಥವಾಗದ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಇದಕ್ಕೆ ಭಕ್ತರು ಸಾಕ್ಷಿಗಳನ್ನು ತರುತ್ತಾರೆ. ತಮ್ಮ ಹರಕೆ ಹೇಳಿದ ಘಟನೆ, ಮನವಿ, ಬೇಡಿಕೆಗಳು, ಹರಕೆಗಾಗಿ ಬಿಟ್ಟಿರುವ ಕೋಳಿಗಳನ್ನು ಇಲ್ಲಿಗೆ ತರಲಾಗುತ್ತದೆ. ದೇವರ ಮೇಲೆ ಆರೋಪ ಮಾಡಲಾಗುತ್ತದೆ. ಭಕ್ತರ ಆರೋಪಗಳನ್ನು ಕೇಳಿಸಿಕೊಂಡು ಪರಿಶೀಲನೆ ನಡೆಯಲಿದೆ. ಬಳಿಕ ದೇವರು ಭಕ್ತರ ಬೇಡಿಕೆ ಪೂರೈಸಿದ್ದರೆ, ಸಮಸ್ಯೆ ಇತ್ಯರ್ಥ ಮಾಡದಿದ್ದರೆ ದೇವರನ್ನು ಗಡೀಪಾರು ಮಾಡಲಾಗುತ್ತದೆ.
ಶಿಕ್ಷೆಯ ಅಡಿಯಲ್ಲಿ ಭಗರಂ ದೇವಿ ದೇವಸ್ಥಾನದಲ್ಲಿ ಯಾವ ದೇವರು ಬೇಡಿಕೆ, ಮನವಿ ಪೂರೈಸಿದ ದೇವರು ಅನ್ನೋ ತಪ್ಪು ಸಾಬೀತಾಗಿದ್ದರೆ, ಆ ದೇವರ ಆಭರಣಗಳನ್ನು ತೆಗೆದು ಊರಿನಿಂದ ಹೊರಗೆ ಮರದ ಕೆಳಗಡೆ ಇಡಲಾಗುತ್ತದೆ. ಇಂತಹ ದೇವರಿಗೆ ಬಳಿಕ ಪೂಜೆ ಇರುವುದಿಲ್ಲ. ಇದು ಈ ಬುಡಕಟ್ಟು ಸಮುದಾಯದ ಆಚರಣೆ ಹಾಗೂ ಪದ್ಧತಿ.
ಇಲ್ಲಿ ಭಕ್ತರ ಬೇಡಿಕೆ ಈಡೇರಿಸುವ ದೇವರಿಗೆ ಮಾತ್ರ ಪೂಜೆ. ಹೀಗಾಗಿ ಪ್ರತಿ ವರ್ಷ ದೇವರೇ ಅದಾಲತ್ ಕಟಕಟೆಯಲ್ಲಿ ನಿಲ್ಲಬೇಕು. ಭಕ್ತರ ಬೇಡಿಕೆ ಈಡೇರಿಸದ ದೇವರು ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇರುವ ಏಕೈಕ ದೇವಸ್ಥಾನ ಇದು.
ನಿಮ್ಮನೆಗೆ ಲಕ್ಷ್ಮಿ ಬರಬೇಕಾ? ಪರ್ಸಲ್ಲಿ ದುಡ್ಡು ತುಂಬಿರಬೇಕು ಅಂದ್ರೆ ಹೀಗ್ ಮಾಡಿ