ಮಾಸ್ಕ್‌ ಧರಿಸದೇ ಇದ್ದಿದ್ದಕ್ಕೆ ಕಾನ್ಪುರದಲ್ಲಿ ಮೇಕೆ ಬಂಧನ!

ಜನರು ಮಾಸ್ಕ್‌ ಧರಿಸದಿದ್ದರೆ ಪೊಲೀಸರು ದಂಡ| ಮಾಸ್ಕ್‌ ಧರಿಸದೇ ಇದ್ದಿದ್ದಕ್ಕೆ ಕಾನ್ಪುರದಲ್ಲಿ ಮೇಕೆ ಬಂಧನ!| ಮೇಕೆಯನ್ನು ರಸ್ತೆಯಲ್ಲಿ ಬಿಡದಂತೆ ಎಚ್ಚರಿಕೆ

Goat arrested for not wearing mask in Uttar Pradesh

ಕಾನ್ಪುರ(ಜು.28): ಜನರು ಮಾಸ್ಕ್‌ ಧರಿಸದಿದ್ದರೆ ಪೊಲೀಸರು ದಂಡ ವಿಧಿಸುವುದು ಮಾಮೂಲಿ. ಆದರೆ, ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಬೆಕನ್‌ಗಂಜ್‌ ಪ್ರದೇಶದಲ್ಲಿ ಮಾಸ್ಕ್‌ ಹಾಕದಿದ್ದ ಕಾರಣಕ್ಕೆ ಪೊಲೀಸರು ಮೇಕೆಯನ್ನು ಬಂಧಿಸಿರುವ ವಿಚಿತ್ರ ಘಟನೆಯೊಂದು ನಡೆದಿದೆ.

ಬೆಂಗಳೂರಲ್ಲಿ ಮಾಸ್ಕ್ ಧರಿಸದವರಿಂದ 1.5 ಕೋಟಿ ದಂಡ ವಸೂಲಿ

ಪೊಲೀಸರ ಪ್ರಕಾರ, ರಸ್ತೆಯಲ್ಲಿ ಯುವಕನೊಬ್ಬ ಮಾಸ್ಕ್‌ ಧರಿಸದೆ ಮೇಕೆಯನ್ನು ಹೊಡೆದುಕೊಂಡು ಹೋಗುತ್ತಿದ್ದ. ಪೊಲೀಸ್‌ ಜೀಪ್‌ ಕಂಡೊಡನೆ ಆತ ಅಲ್ಲಿಂದ ಓಡಿ ಹೋದ. ಹೀಗಾಗಿ ಮೇಕೆಯನ್ನು ಠಾಣೆಗೆ ಕರೆತರಬೇಕಾಯಿತು ಎಂದು ಹೇಳಿದ್ದಾರೆ.

ಬಳಿಕ ಮೇಕೆಯ ಮಾಲೀಕ ಠಾಣೆಗೆ ಬಂದು ಕ್ಷಮೆ ಕೇಳಿದ್ದರಿಂದ ಪೊಲೀಸರು ಮೇಕೆಯನ್ನು ಬಿಟ್ಟು ಕಳುಹಿಸಿದ್ದಾರೆ. ಜೊತೆಗೆ ಮೇಕೆಯನ್ನು ರಸ್ತೆಯಲ್ಲಿ ಬಿಡದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ.

Latest Videos
Follow Us:
Download App:
  • android
  • ios