Asianet Suvarna News Asianet Suvarna News

ಕಿರಣ್‌ ಬೇಡಿ ಗೋಬ್ಯಾಕ್: ಗವರ್ನರ್‌ ವಿರುದ್ಧವೇ ಮುಖ್ಯಮಂತ್ರಿ ಧರಣಿ!

ಗವರ್ನರ್‌ ವಿರುದ್ಧವೇ ಮುಖ್ಯಮಂತ್ರಿ ಧರಣಿ!| ಕಿರಣ್‌ ಬೇಡಿ ಗೋಬ್ಯಾಕ್‌: ಪುದುಚೇರಿ ಸಿಎಂ

Go Back Bedi Puducherry CM agitation against Lt Governor enters third day pod
Author
Bangalore, First Published Jan 11, 2021, 7:38 AM IST

ಪುದುಚೇರಿ(ಜ.11): ಪುದುಚೇರಿ ಉಪರಾಜ್ಯಪಾಲೆ ಕಿರಣ್‌ ಬೇಡಿ ವಜಾಕ್ಕೆ ಆಗ್ರಹಿಸಿ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸಾಮಿ ಬೀದಿಗೆ ಇಳಿದಿದ್ದಾರೆ.

ಬೇಡಿ ಅವರ ವಜಾಕ್ಕೆ ಆಗ್ರಹಿಸಿ ರಾಜ್ಯಪಾಲರ ಅಧಿಕೃತ ನಿವಾಸವಾದ ‘ರಾಜನಿವಾಸ’ದ ಎದುರು 3 ದಿನದಿಂದ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳು ಪ್ರತಿಭಟನೆಗೆ ನಡೆಸುತ್ತಿವೆ. ಶನಿವಾರ ರಾತ್ರಿ ಪ್ರತಿಭಟನಾ ಸ್ಥಳದಲ್ಲೇ ಮಲಗಿದ್ದ ನಾರಾಯಣಸಾಮಿ, ಭಾನುವಾರವೂ ಪ್ರತಿಭಟನೆಯಲ್ಲಿ ಭಾಗಿಯಾದರು.

‘ಬೇಡಿ.. ಗೋ ಬ್ಯಾಕ್‌’ ಎಂಬ ಫಲಕ ಹಿಡಿದು ಗಮನ ಸೆಳೆದರು. ಇವರಿಗೆ ಸಚಿವ, ಶಾಸಕರೂ ಸಾಥ್‌ ನೀಡಿದರು. ಈ ಕಾರಣದಿಂದ ರಾಜನಿವಾಸಕ್ಕೆ ಕೇಂದ್ರೀಯ ಪಡೆಗಳಿಂದ ಭದ್ರತೆ ಒದಗಿಸಲಾಗಿದೆ.

‘ಪುದುಚೇರಿಯ ಅಭಿವೃದ್ಧಿ ಯೋಜನೆಗಳು ಮತ್ತು ಕಾರ‍್ಯಗಳಿಗೆ ಕಿರಣ್‌ ಬೇಡಿ ಅಡ್ಡಗಾಲು ಹಾಕುತ್ತಿದ್ದಾರೆ’ ಎಂಬುದು ಆಡಳಿತಾರೂಢ ಪಕ್ಷದ ಆರೋಪ. ಆದರೆ, ಬಿಜೆಪಿ ಹಾಗೂ ಅಣ್ಣಾಡಿಎಂಕೆ ಈ ಪ್ರತಿಭಟನೆಯನ್ನು ಖಂಡಿಸಿವೆ.

2016ರಲ್ಲಿ ಕಿರಣ್‌ ಬೇಡಿ ಅವರು ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಕವಾದಾಗಿನಿಂದಲೂ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವೆ ಮನಸ್ತಾಪ, ಜಟಾಪಟಿ ನಡೆದೇ ಇದೆ. ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿರುವಾಗಲೇ ಘಟಾನುಘಟಿ ನಾಯಕರಿಬ್ಬರ ನಡುವಿನ ವೈಮನಸ್ಸು ತಾರಕಕ್ಕೇರಿದೆ.

Follow Us:
Download App:
  • android
  • ios