ವಿಶ್ವಸಂಸ್ಥೆ ನೀತಿ ನಿರ್ಧಾರ ಕೈಗೊಳ್ಳುವ ಜಾಗತಿಕ ಸಂಸ್ಥೆಗಳಲ್ಲಿ ಗ್ಲೋಬಲ್‌ ಸೌತ್‌ ಎಂದು ಕರೆಯಲಾಗುವ ದೇಶಗಳಿಗೆ ಸ್ಥಾನ ಕಲ್ಪಿಸುವ ಕುರಿತು ಬಲವಾದ ವಾದ ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ನಾವಿಲ್ಲದ ಜಾಗತಿಕ ಸಂಘಟನೆಗಳು ನೆಟ್ವರ್ಕ್‌ ಇಲ್ಲದ ಸಿಮ್‌ ಇರುವ ಮೊಬೈಲ್‌ನಂತೆ ಎಂದು ವ್ಯಂಗ್ಯ

ರಿಯೋ ಡಿ ಜನೈರೋ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ನೀತಿ ನಿರ್ಧಾರ ಕೈಗೊಳ್ಳುವ ಜಾಗತಿಕ ಸಂಸ್ಥೆಗಳಲ್ಲಿ ಗ್ಲೋಬಲ್‌ ಸೌತ್‌ ಎಂದು ಕರೆಯಲಾಗುವ ದೇಶಗಳಿಗೆ ಸ್ಥಾನ ಕಲ್ಪಿಸುವ ಕುರಿತು ಬಲವಾದ ವಾದ ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ನಾವಿಲ್ಲದ ಜಾಗತಿಕ ಸಂಘಟನೆಗಳು ನೆಟ್ವರ್ಕ್‌ ಇಲ್ಲದ ಸಿಮ್‌ ಇರುವ ಮೊಬೈಲ್‌ನಂತೆ ಎಂದು ವ್ಯಂಗ್ಯವಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ಭಾನುವಾರ ಆರಂಭವಾದ ಬ್ರಿಕ್ಸ್‌ ದೇಶಗಳ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಗ್ಲೋಬಲ್ ಸೌತ್‌ ದೇಶಗಳು ಸದಾ ದ್ವಿಮುಖ ನೀತಿಯ ಬಲಿಪಶಗಳಾಗಿವೆ ಮತ್ತು ಜಾಗತಿಕ ಆರ್ಥಿಕತೆಗೆ ಪ್ರಮುಖ ಪಾಲು ನೀಡುವ ದೇಶಗಳನ್ನು ನೀತಿ ನಿರ್ಧಾರ ಕೈಗೊಳ್ಳುವ ಪ್ರಮುಖ ಸಂಸ್ಥೆಗಳಿಂದ ಹೊರಗಿಡಲಾಗಿದೆ. ಹೀಗಾಗಿ ಭದ್ರತಾ ಮಂಡಳಿ ಸೇರಿದಂತೆ ಮಹತ್ವದ ಸಂಘಟನೆಗಳಲ್ಲಿ ತ್ವರಿತವಾಗಿ ಬದಲಾವಣೆ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ್ದಾರೆ.

ಮನಕುಲದ ಮೂರನೇ ಎರಡು ಭಾಗಕಕ್ಕೆ 20ನೇ ಶತಮಾನದಲ್ಲಿ ರಚಿಸಲಾದ ಜಾಗತಿಕ ಸಂಸ್ಥೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಗ್ಲೋಬಲ್‌ ಸೌತ್‌ ಇಲ್ಲದ ಇಂಥ ಸಂಸ್ಥೆಗಳು ಸಿಮ್‌ ಕಾರ್ಡ್‌ ಇರುವ ಆದರೆ ನೆಟ್‌ವರ್ಕ್‌ ಇಲ್ಲದ ಮೊಬೈಲ್‌ನಂತೆ ಎಂದು ವ್ಯಂಗ್ಯವಾಡಿದ್ದಾರೆ.

ಗ್ಲೋಬಲ್‌ ಸೌತ್‌:

ಕೈಗಾರಿಕಾಕರಣಗೊಂಡ ದೇಶಗಳ ದಕ್ಷಿಣಕ್ಕೆ ಬರುವ, ಕೈಗಾರಿಕಾವಾಗಿ ಮತ್ತು ಆರ್ಥಿಕವಾಗಿ ಕಡಿಮೆ ಶಕ್ತಿ ಹೊಂದಿರುವ ದೇಶಗಳನ್ನು ಗ್ಲೋಬಲ್‌ ಸೌತ್‌ ಎನ್ನಲಾಗುತ್ತದೆ.

ಟ್ರಿನಿಡಾಡ್ ಮತ್ತು ಟೊಬಾಗೊ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ

5 ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ರಿನಿಡಾಡ್ ಮತ್ತು ಟೊಬಾಗೊ ದೇಶ ಶುಕ್ರವಾರ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿಗೆ ದೊರೆತ 25ನೇ ಅಂತಾರಾಷ್ಟ್ರೀಯ ಗೌರವ.

ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಅವರು ಮೋದಿಗೆ ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ದಿ ಆರ್ಡರ್‌ ಆಫ್‌ ದಿ ರಿಪಬ್ಲಿಕ್‌ ಆಫ್‌ ಟ್ರಿನಿಡಾಡ್‌ ಮತ್ತು ಟೊಬಾಗೊ’ ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿ ಪಡೆದು ಬಳಿಕ ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದು, ‘140 ಕೋಟಿ ಭಾರತೀಯರ ಪರವಾಗಿ ನಾನು ಅದನ್ನು ಸ್ವೀಕರಿಸುತ್ತೇನೆ’ ಎಂದಿದ್ದಾರೆ. ಗುರುವಾರವಷ್ಟೇ ಘಾನಾ ಸರ್ಕಾರ ಮೋದಿಗೆ ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿ ‘ದಿ ಆಫೀಸರ್‌ ಆಫ್‌ ದಿ ಆರ್ಡರ್‌ ಆಫ್‌ ದಿ ಸ್ಟಾರ್‌ ಆಫ್‌ ಘಾನಾ’ ನೀಡಿ ಗೌರವಿಸಲಾಗಿತ್ತು.