ಹಿಜಾಬ್ ವಿವಾದಕ್ಕೆ ಮಿಸ್ ಯೂನಿವರ್ಸ್ ಸುಂದರಿ ಹರ್ನಾಜ್ ಸಂಧು ಪ್ರತಿಕ್ರಿಯೆ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ, ಇದು ಸರಿಯಲ್ಲ ಮಹಿಳೆಯರ ಸಾಧನೆಗೆ ಅಡ್ಡಿಯಾಗಬೇಡಿ, ರೆಕ್ಕೆ ತುಂಡು ಮಾಡಬೇಡಿ
ಮುಂಬೈ(ಮಾ.27): ಹಿಜಾಬ್ ವಿವಾದ ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣಗಳಿಲ್ಲ. ಒಂದೆಡೆ ಹೋರಾಟ ತೀವ್ರಗೊಳ್ಳುತ್ತಿದ್ದರೆ, ಮತ್ತೊಂದೆಡೆ ರಾಜಕೀಯ ನಾಯಕರು, ಸೆಲೆಬ್ರೆಟಿಗಳು ಪರ ವಿರೋಧ ಹೇಳಿಕೆಯಿಂದ ಹಿಜಾಬ್ ಮತ್ತಷ್ಟು ಕಾವು ಪಡೆದುಕೊಳ್ಳುತ್ತಿದೆ. ಇದೀಗ ಮಿಸ್ ಯೂನಿವರ್ಸ್ ಸುಂದರಿ ಹರ್ನಾಜ್ ಸಂಧು ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳೆಯರನ್ನು ಟಾರ್ಗೆಟ್ ಮಾಡಬೇಡಿ. ಮಹಿಳೆಯರು ಅವರ ಇಷ್ಟದಂತೆ ಇರಲು ಬಿಡಿ ಎಂದು ಮನವಿ ಮಾಡಿದ್ದಾರೆ.
ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ ಸಂಧು, ಪ್ರತಿ ಬಾರಿ ಮಹಿಳೆಯರನ್ನೇ ಯಾಕೆ ಟಾರ್ಗೆಟ್ ಮಾಡುತ್ತೀರಿ? ಈಗ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ. ಹಿಜಾಬ್ ವಿಚಾರದಲ್ಲೂ ಮಹಿಳೆಯರನ್ನು ಗುರಿಯಾಗಿಸಲಾಗುತ್ತದೆ. ಮಹಿಳೆಯರನ್ನು ಅವರಿಷ್ಟಕ್ಕೆ ಬಿಟ್ಟು ಬಿಡಿ, ಅವರ ಸಾಧನೆ ಮಾಡಲು, ತಮ್ಮ ಗುರಿ ಸಾಧಿಸಲು ಈ ರೀತಿಯ ಕಾರಣಗಳನ್ನು ನೀಡಿ ಅಡ್ಡಿಯಾಗಬೇಡಿ. ಆಕೆ ಸ್ವಚ್ಚಂದವಾಗಿ ಹಾರಾಡಲಿ. ಇದರ ನಡುವೆ ಆಕೆಯ ರೆಕ್ಕೆ ಕಟ್ ಮಾಡವು ಸಾಹಸಕ್ಕೆ ಇಳಿಯಬೇಡಿ ಎಂದು ಹಿಜಾಬ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಕೊನೆಗೂ ಮನದಾಳ ಬಿಚ್ಚಿಟ್ಟ ಭುವನ ಸುಂದರಿ.. ಪ್ರಿಯಾಂಕಾ ಬಗ್ಗೆ ಒಂದೇ ಮಾತು!
ಹಿಜಾಬ್ ಕುರಿತು ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಆಯೋಜಕರು ತಡೆದು ರಾಜಕೀಯ ಪ್ರಶ್ನೆಗಳನ್ನು ಕೇಳಬೇಡಿ. ಇದರ ಬದಲು ಸಂಧು ಇತರರಿಗೆ ಸ್ಪೂರ್ತಿ ಹೇಗೆ, ಆಕೆಯ ಕಠಿಣ ಹಾದಿ ಇತರರಿಗೆ ಹೇಗೆ ಮಾದರಿಯಾಗಿದೆ ಅನ್ನೋ ಕುರಿತು ಕೇಳಿ ಎಂದಿದ್ದಾರೆ. ಇದಕ್ಕೆ ನಿಮ್ಮ ಕೆಲಸ ನೀವು ಮಾಡಿ, ಹಿಜಾಬ್ ಕುರಿತು ಸಂಧು ಪ್ರತಿಕ್ರಿಯೆ ನೀಡಲಿ. ಇದರ ನಡುವೆ ನಿಮ್ಮ ಮಾತು ಯಾಕೆ ಎಂದು ಪತ್ರಕರ್ತ ಪ್ರಶ್ನಿಸಿದ್ದಾನೆ.
ಪತ್ರಕರ್ತನ ಪ್ರಶ್ನೆಗೆ ಉತ್ತರಿಸುತ್ತಾ, ಮಹಿಳೆಯರನ್ನು ಟಾರ್ಗೆಟ್ ಮಾಡುವುದು ಮುಂದವರಿದಿದೆ. ಈಗ ನನ್ನನ್ನೂ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹಿಜಾಬ್ ಕುರಿತು ಪ್ರತಿಕ್ರಿಯಿಸಿದ್ದಾರೆ. ಸಂಧು ಪ್ರತಿಕ್ರಿಯೆಗೆ ಪರ ವಿರೋಧಗಳು ವ್ಯಕ್ತವಾಗಿದೆ. ಮಹಿಳೆಯನ್ನು ಎಲ್ಲೂ ಕಟ್ಟಿ ಹಾಕಿಲ್ಲ. ಕೇವಲ ಶಾಲಾ ತರಗತಿಯಲ್ಲಿ ಶಾಲೆಯ ಸಮವಸ್ತ್ರ ಕಡ್ಡಾಯವಿದ್ದರೆ ಅದನ್ನು ಪಾಲಿಸಬೇಕು. ತರಗತಿ ಒಳಗಡೆ ಹಿಜಾಬ್ ಹಾಕುವಂತಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಹೇಳಿದ್ದರೆ ಅದನ್ನು ಪಾಲಿಸಬೇಕು. ಹೀಗಾಗಿ ಇಲ್ಲಿ ಮಹಿಳೆಯರನ್ನು ನಿರ್ಬಂಧಿಸಿಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ವಯಸ್ಸಾದ ಶ್ರೀಮಂತ ಬೇಡ, ಬಡವನ ಡೇಟ್ ಮಾಡ್ತಾರಂತೆ ಭುವನ ಸುಂದರಿ ಹರ್ನಾಝ್
ಹಿಜಾಬ್ ವಿವಾದ ತುರ್ತು ವಿಚಾರಣೆಗೆ ಸುಪ್ರೀಂ ನಕಾರ
ತರಗತಿಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂಬ ಉಡುಪಿ ವಿದ್ಯಾರ್ಥಿನಿಯರ ಅರ್ಜಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂಬ ಬೇಡಿಕೆಯನ್ನು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಪೀಠ ತಳ್ಳಿಹಾಕಿದೆ.ಪರೀಕ್ಷೆ ಹತ್ತಿರ ಬರುತ್ತಿದೆ, ಹೀಗಾಗಿ ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕು ಎಂಬ ವಿದ್ಯಾರ್ಥಿನಿಯರ ಪರ ವಕೀಲ ದೇವದತ್ ಕಾಮತ್ ಅವರ ಮನವಿಯನ್ನು ‘ಪರೀಕ್ಷೆಗೂ ಇದಕ್ಕೂ ಸಂಬಂಧವಿಲ್ಲ’ ಎಂದು ಹೇಳುವ ಮೂಲಕ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾ.ಕೃಷ್ಣ ಮುರಾರಿ ಅವರ ಪೀಠ ಸಾರಾಸಗಟಾಗಿ ತಿರಸ್ಕರಿಸಿದೆ.
ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಹಿಜಾಬ್ ಬಗ್ಗೆ ಹೈಕೋರ್ಚ್ ತೀರ್ಪನ್ನು ಸರ್ಕಾರ ಹಾಗೂ ಕೆಲವು ಕಾಲೇಜುಗಳು ದುರುಪಯೋಗಪಡಿಸುತ್ತಿವೆ ಎಂದು ಆರೋಪಿಸಿ ಶುಕ್ರವಾರ ಮಂಗಳೂರಿನಲ್ಲಿ ಹಿಜಾಬ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.ಮಂಗಳೂರಿನ ಕ್ಲಾಕ್ ಟವರ್ ಸರ್ಕಲ್ ಬಳಿ ಮಂಗಳೂರು ವಿವಿ ಸಮನ್ವಯ ಸಮಿತಿ ಹೆಸರಲ್ಲಿ ಪ್ರತಿಭಟನೆ ನಡೆಸಲಾಗಿದೆ. ಈ ಪ್ರತಿಭಟನೆಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪೊಲೀಸ್ ಅನುಮತಿ ಪಡೆದು ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದ್ದು, ಬಳಿಕ ಏಕಾಏಕಿ ರಸ್ತೆ ತಡೆಗೆ ಮುಂದಾದರು. ಆಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.
