Asianet Suvarna News Asianet Suvarna News

26 ಬೆರಳುಗಳಿರುವ ಹೆಣ್ಣು ಮಗು ಜನನ: ಲಕ್ಷ್ಮಿಯ ಪ್ರತಿರೂಪವೆಂದ ಕುಟುಂಬ

26 ಬೆರಳುಗಳನ್ನು ಹೊಂದಿರುವ ಹೆಣ್ಣು ಮಗುವೊಂದು ರಾಜಸ್ಥಾನದಲ್ಲಿ ಜನಿಸಿದ್ದು, ಮಗುವಿನ ಕುಟುಂಬದವು ಆಕೆ ದೇವಿಯ ಪ್ರತೀಕವೆಂದು ನಂಬಿದ್ದಾರೆ.  ರಾಜಸ್ಥಾನದ ಡೀಗ್‌ ಜಿಲ್ಲೆಯಲ್ಲಿ ಈ ರೀತಿ 26 ಬೆರಳುಗಳನ್ನು ಹೊಂದಿದ್ದ ಅಪರೂಪದ ಮಗು ಜನಿಸಿದೆ.

girl child born with 26 fingers in Rajasthan family belives godess lakshmi born in their house akb
Author
First Published Sep 20, 2023, 10:24 AM IST | Last Updated Sep 20, 2023, 10:24 AM IST

ರಾಜಸ್ತಾನ: 26 ಬೆರಳುಗಳನ್ನು ಹೊಂದಿರುವ ಹೆಣ್ಣು ಮಗುವೊಂದು ರಾಜಸ್ಥಾನದಲ್ಲಿ ಜನಿಸಿದ್ದು, ಮಗುವಿನ ಕುಟುಂಬದವು ಆಕೆ ದೇವಿಯ ಪ್ರತೀಕವೆಂದು ನಂಬಿದ್ದಾರೆ.  ರಾಜಸ್ಥಾನದ ಡೀಗ್‌ ಜಿಲ್ಲೆಯಲ್ಲಿ ಈ ರೀತಿ 26 ಬೆರಳುಗಳನ್ನು ಹೊಂದಿದ್ದ ಅಪರೂಪದ ಮಗು ಜನಿಸಿದೆ. ಈ ಮಗುವಿನ ಕೈ ಕಾಲುಗಳ ಬೆರಳುಗಳನ್ನು ಲೆಕ್ಕ ಹಾಕಿದಾಗ ಒಟ್ಟು 26 ಬೆರಳುಗಳಿರುವುದು ಬೆಳಕಿಗೆ ಬಂದಿದೆ. 

ಡೀಗ್ (Deeg)ಜಿಲ್ಲೆಯ ಭರತ್‌ಪುರದಲ್ಲಿ ಈ ಮಗು ಜನಿಸಿದ್ದು, ಪ್ರತಿ ಕೈನಲ್ಲಿ ಹೆಚ್ಚುವರಿ ಎರಡು ಬೆರಳುಗಳಿದ್ದು  ಹಾಗೂ ಕಾಲಿನಲ್ಲಿ ಒಂದು ಹೆಚ್ಚುವರಿ ಬೆರಳಿದ್ದು ಎಲ್ಲವೂ ಸೇರಿ ಒಟ್ಟು 26 ಬೆರಳುಗಳಿವೆ ಎಂದು ವೈದ್ಯರು ಹೇಳಿದ್ದಾರೆ.

ಈ ಹೆಚ್ಚುವರಿ ಬೆರಳುಗಳು ಅನುವಂಶೀಯ ಅಸ್ವಸ್ಥತೆಯಿಂದ ಬಂದಿದೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಈ ಹೆಚ್ಚುವರಿ ಬೆರಳುಗಳಿಂದ ಮಗುವಿನ ಆರೋಗ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ವೈದ್ಯೆ ಡಾ. ಸೋನಿ ಹೇಳಿದ್ದಾರೆ.  ಕಮನ್‌ನಲ್ಲಿರು ಸಮುದಾಯ ಆಸ್ಪತ್ರೆಯಲ್ಲಿ ಈ ವಿಶೇಷ ಮಗು ಜನಿಸಿದ್ದು, ಈಗ ಮಗುವಿಗಿರುವ ಈ ಹೆಚ್ಚುವರಿ ಬೆರಳುಗಳಿಂದ ಕುಟುಂಬದವರು ಮಗುವಿಗೆ ಆಧ್ಯಾತ್ಮಿಕ ಆಯಾಮ ನೀಡಿದ್ದಾರೆ. ತಾವು ಪೂಜಿಸುವ ದೋಲಗರ್ ದೇವಿಯ ( Dholagarh Devi) ಕೃಪೆ ಇದು ಎಂದು ಕುಟುಂಬದವರು ಹೇಳುತ್ತಿದ್ದಾರೆ. 

ದೈವನರ್ತಕರು, ಅಪ್ಪು, ಕನ್ನಡಿಗರಿಗೆ ಸೈಮಾ ಪ್ರಶಸ್ತಿ ಅರ್ಪಿಸಿದ ರಿಷಭ್‌: ವೈಟ್ & ವೈಟ್ ಧಿರಿಸಿನಲ್ಲಿ ಮಿಂಚಿದ ಲೀಲಾ

ಭಾನುವಾರ ರಾತ್ರಿ ಕಮನ್ ಸಮುದಾಯ ಆಸ್ಪತ್ರೆಯಲ್ಲಿ ಸರ್ಜು ದೇವಿ (Sarju Devi) ಎಂಬುವವರಿಗೆ ಈ ಮಗು ಜನಿಸಿದೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯ ಸೋನಿ ದೀಪಕ್ (Dr. Soni.Deepak) ಹೇಳಿದ್ದಾರೆ. ಈ ಮಗುವಿನ ಆಗಮನದಿಂದ ನಮ್ಮ ಮನೆಗೆ ಲಕ್ಷ್ಮಿ ಬಂದಂತಾಗಿದೆ ಎಂದು ಮಗುವಿನ ಚಿಕ್ಕಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಈಕೆಯ ದೇವತೆಯಂತೆ ನಮ್ಮ ಮನೆಗೆ ಬಂದಿದ್ದಾಳೆ. ನಮ್ಮ ಮನೆಯಲ್ಲಿ ಲಕ್ಷ್ಮಿಯ ಜನನವಾಗಿರುವುದಕ್ಕೆ ನಾವು ಪುಣ್ಯ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ. 

ಹುಡುಗರೇ ಈ ಹಕ್ಕಿ ಮುಂದೆ ನೀವ್ಯಾವ ಲೆಕ್ಕ: ಮನದರಸಿಯ ಒಲಿಸಿಕೊಳ್ಳಲು ಪಡ್ತಿರುವ ಪಾಡು ನೋಡಿ : ವೀಡಿಯೋ

Latest Videos
Follow Us:
Download App:
  • android
  • ios