* ಖ್ಯಾತ ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಸೋಗಿನಲ್ಲಿ ಹಣ ವಸೂಲಿ* ಟಿಕೆಟ್‌ ಕೊಡಿಸುವುದಾಗಿ ಹಣ ವಸೂಲಿ: ನಕಲಿ ಪ್ರಶಾಂತ್‌ ಕಿಶೋರ್‌ ಸೆರೆ!* ಪಂಜಾಬ್‌ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ

ಅಮೃತಸರ(ಮೇ.16): ಖ್ಯಾತ ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌ ಸೋಗಿನಲ್ಲಿ ಪಂಜಾಬ್‌, ಬಿಹಾರ, ಹರಾರ‍ಯಣ, ರಾಜಸ್ಥಾನ ಮತ್ತು ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್‌ ಸೇರಿ ಇನ್ನಿತರ ಪಕ್ಷಗಳ ಟಿಕೆಟ್‌ ಆಕಾಂಕ್ಷಿತರಿಗೆ ಕೋಟ್ಯಂತರ ರು. ವಂಚಿಸುತ್ತಿದ್ದ ಜಾಲವೊಂದನ್ನು ಪಂಜಾಬ್‌ನ ಲೂಧಿಯಾನ ಪೊಲೀಸರು ಭೇದಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಪ್ರಕರಣದ ಇಬ್ಬರು ಶಂಕಿತರಾದ ರಾಕೇಶ್‌ ಕುಮಾರ್‌ ಭಾಸಿನ್‌ ಮತ್ತು ರಜತ್‌ ಕುಮಾರ್‌ರನ್ನು ಬಂಧಿಸಲಾಗಿದ್ದು, ಈ ಪ್ರಕರಣದ ಕಿಂಗ್‌ಪಿನ್‌ ಎನ್ನಲಾದ ಆರೋಪಿ ಗೌರವ್‌ ಶರ್ಮಾ ಪರಾರಿಯಾಗಿದ್ದಾನೆ ಎಂದಿದ್ದಾರೆ ಪೊಲೀಸರು.

ಪಂಜಾಬ್‌ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿತರನ್ನೇ ಗುರಿಯಾಗಿಸಿಕೊಂಡು ಈ ಗ್ಯಾಂಗ್‌ ಒಬ್ಬ ಆಕಾಂಕ್ಷಿಯಿಂದ 5 ಕೋಟಿ ರು. ಹಣ ಪೀಕುತಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.

ಈ ಪ್ರಕರಣದ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದಾಗ ಬಂಧಿತ ಶಂಕಿತರಾದ ರಾಕೇಶ್‌ ಕುಮಾರ್‌ ಭಾಸಿನ್‌ ಮತ್ತು ರಜತ್‌ ಕುಮಾರ್‌ ಹಾಗೂ ಪರಾರಿಯಾದ ಗೌರವ್‌ ಶರ್ಮಾ ಎಂಬುವರು ತಾವು ಪ್ರಶಾಂತ್‌ ಕಿಶೋರ್‌ ಅವರ ಸೋಗಲ್ಲಿ ಹಲವು ಕಾಂಗ್ರೆಸ್‌ ಆಕಾಂಕ್ಷಿತರಿಗೆ ಟಿಕೆಟ್‌ ನೀಡುವ ವಾಗ್ದಾನದೊಂದಿಗೆ 5 ಕೋಟಿ ರು. ಪಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.