ನವದೆಹಲಿಯ ಕುತುಬ್‌ ಮಿನಾರ್‌ನೊಳಗಿದ್ದ ಗಣೇಶ ಮೂರ್ತಿ ‘ಬಂಧಮುಕ್ತ’ವಾಗಿದ್ದು, ಎಎಸ್‌ಐ ಕಬ್ಬಿಣದ ಜಾಲರಿಯನ್ನು ತೆಗೆದಿದೆ. ಆದರೆ, ಪೂಜೆಗೆ ಅವಕಾಶ ನೀಡಿಲ್ಲ. 

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ಕುತುಬ್‌ ಮಿನಾರ್‌ನ (Qutub Minar) ಖುವ್ವತ್‌ ಉಲ್‌ ಇಸ್ಲಾಂ (Kuwwat ul Islam) ಮಸೀದಿಯೊಳಗಿದ್ದ 2 ಗಣೇಶ ವಿಗ್ರಹಗಳು ಜನರಿಗೆ ಕಾಣದಂತೆ ಅಡ್ಡಿಯಾಗಿದ್ದ ಕಬ್ಬಿಣದ ಜಾಲರಿಯನ್ನು (Iron Mesh) ಪುರಾತತ್ವ ಇಲಾಖೆ (Archeological Survey) ಅಧಿಕಾರಿಗಳು ತೆಗೆದಿರಿಸಿದ್ದಾರೆ. ಹೀಗಾಗಿ ಇದೀಗ ಗಣೇಶ ವಿಗ್ರಹಗಳು ಎಲ್ಲರಿಗೂ ಕಾಣುವಂತಾಗಿದೆ. ಈ ಕಬ್ಬಿಣದ ಜಾಲರಿಯನ್ನು ತೆಗೆಯುವಂತೆ ವಿಎಚ್‌ಪಿ (VHP) ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಬಹಳ ಕಾಲದಿಂದ ಆಗ್ರಹ ಮಾಡುತ್ತಲೇ ಬಂದಿದ್ದವು.

ಕೆಲ ವರ್ಷಗಳ ಹಿಂದೆ ಉಲ್ಟಾಗಣೇಶ (Ulta Ganesh) ಎಂದು ಹೇಳಲಾಗುವ ವಿಗ್ರಹ ಮತ್ತು ಇನ್ನೊಂದು ಗಣೇಶ ವಿಗ್ರಹವನ್ನು ಕಬ್ಬಿಣದ ಜಾಲರಿಯಿಂದ ಮುಚ್ಚಲಾಗಿತ್ತು. ಇದೀಗ ಕಬ್ಬಿಣದ ಜಾಲರಿ ತೆಗೆದು, ಮೂರ್ತಿಗಳನ್ನು ಸ್ವಚ್ಛಗೊಳಿಸಿ ಅದನ್ನು ಗುಂಡು ನಿರೋಧಕ ಗಾಜಿನ ಬಾಕ್ಸ್‌ನಲ್ಲಿ ಇಟ್ಟು ಜನರ ದರ್ಶನಕ್ಕೆ ಇಡಲಾಗಿದೆ. ಆದರೆ ಇದರ ಪೂಜೆಗೆ (Puja) ಅವಕಾಶ ನೀಡಿಲ್ಲ.

ಇದನ್ನು ಓದಿ: Qutub Minar Hearing:'800 ವರ್ಷದಿಂದ ಪೂಜೆ ಇಲ್ಲದೇ ದೇವತೆಗಳಿದ್ದಾರೆ, ಮುಂದೆಯೂ ಹಾಗೇ ಇರಲು ಬಿಡಿ'

ಮಮ್ಲುಕ್‌ ರಾಜಮನೆತನ ಸ್ಥಾಪಕನಾಗಿದ್ದ ಖುತುಬ್ಬುದ್ದೀನ್‌ ಐಬಕ್‌ (Qutubuddin Aibak) , ಮಸೀದಿ ನಿರ್ಮಿಸುವ ಸಲುವಾಗಿ 27 ಹಿಂದೂ ಮತ್ತು ಜೈನ ದೇಗುಲಗಳನ್ನು ಧ್ವಂಸಗೊಳಿಸಿದ್ದ. ಅಲ್ಲಿರುವ ಗಣೇಶ ವಿಗ್ರಹಗಳು ಧ್ವಂಸಗೊಂಡ ದೇಗುಲದ ಭಾಗಗಳು ಎಂಬುದು ಹಿಂದೂ ಸಂಘಟನೆಗಳ ವಾದ.

ವಿಗ್ರಹವು ತಲೆಕೆಳಗಾದ ಸ್ಥಿತಿಯಲ್ಲಿದೆ ಎಂದು ನಂಬಲಾಗಿತ್ತು. ಆದರೆ ಈಗ ಮೂರ್ತಿ ನೆಟ್ಟಗಿರುವುದು ಗೋಚರಿಸುತ್ತಿದೆ. ಆದರೆ, ಪ್ರವಾಸಿಗರಿಗೆ ದೇವರಿಗೆ ಪೂಜೆ ಸಲ್ಲಿಸಲು ಎಎಸ್‌ಐ ಅನುಮತಿ ನೀಡಿಲ್ಲ. ಕುತುಬುದ್ದೀನ್ ಐಬಕ್ ಮಸೀದಿಯನ್ನು ನಿರ್ಮಿಸುವ ಸಲುವಾಗಿ 27 ಹಿಂದೂ ಮತ್ತು ಜೈನ ದೇವಾಲಯಗಳನ್ನು ನಾಶಪಡಿಸಿದ್ದಾನೆ ಎಂದು ಹಲವಾರು ಹಿಂದೂ ಗುಂಪುಗಳು ಹೇಳಿಕೊಂಡಿವೆ.

ಇದನ್ನೂ ಓದಿ: ಕುತುಬ್ ಮಿನಾರ್‌ನಲ್ಲಿ ಪೂಜಾ ಹಕ್ಕು ನೀಡಲು ಸಾಧ್ಯವಿಲ್ಲ: ಪುರಾತತ್ವ ಇಲಾಖೆ!

ವಿಗ್ರಹಗಳನ್ನು ಇರಿಸುವ ಸ್ಥಾನ ಅಗೌರವ ನೀಡಿದಂತಾಗುತ್ತದೆ ಎಂಬ ಹಿನ್ನೆಲೆ ಈ ವರ್ಷದ ಆರಂಭದಲ್ಲಿ, ಕುತುಬ್ ಮಿನಾರ್ ಸಂಕೀರ್ಣದಿಂದ ಗಣೇಶನ ವಿಗ್ರಹಗಳನ್ನು ಹಿಂಪಡೆಯಲು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರವು ಎಎಸ್‌ಐಗೆ ಕೇಳಿಕೊಂಡಿತ್ತು. ಆದರೆ ದೆಹಲಿ ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಎಎಸ್‌ಐಗೆ ಆದೇಶಿಸಿದೆ. ಗಣೇಶ ಮೂರ್ತಿಗಳನ್ನು ತೆಗೆಯುವ ಎಎಸ್‌ಐ ಯೋಜನೆ ವಿರುದ್ಧದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದುವರಿಸಿದೆ.

ಈ 2 ವಿಗ್ರಹಗಳನ್ನು ಉಲ್ಟಾ ಗಣೇಶ ಮತ್ತು ಪಂಜರದಲ್ಲಿರುವ ಗಣೇಶ ಎಂದು ಕರೆಯಲಾಗುತ್ತದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗೊತ್ತುಪಡಿಸಿದ ಸಂಕೀರ್ಣದೊಳಗೆ ಅವು ಕಂಡುಬರುತ್ತವೆ. ಇನ್ನೊಂದೆಡೆ, ಪುರಾತನ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ಹೊರ ಗೋಡೆಯ ಮೇಲೆ ಕಂಡುಬರುವ ಶೃಂಗಾರ್ ಗೌರಿ ಎಂಬ ದೇವತೆಯನ್ನು ಆರಾಧಿಸುವ ಹಕ್ಕನ್ನು ಪಡೆಯಲು ಸಹ ಹಿಂದೂ ಗುಂಪುಗಳು ಸುದೀರ್ಘವಾದ ನ್ಯಾಯಾಲಯದ ಹೋರಾಟವನ್ನು ನಡೆಸುತ್ತಿವೆ.

ಇದನ್ನೂ ಓದಿ: ಜ್ಞಾನವಾಪಿ ಗದ್ದಲದ ಬೆನ್ನಲ್ಲೇ ಕುತುಬ್ ಮಿನಾರ್ ವಿವಾದ, ಉತ್ಖನನ ನಡೆಸಲು ASIಗೆ ಸರ್ಕಾರದ ಆದೇಶ!