ಇರೋಡ್‌(ಡಿ.20): ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗಾಂಧಿ ಚಳವಳಿಯ ಹೋರಾಟಗಾರ ಪೆರಿಯಾಸಾಮಿ (47) ಎಂಬಾತನನ್ನು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿದೆ.

ಗಾಂಧಿಯನ್‌ ಮಕ್ಕಳ್‌ ಲಿಯಾಕ್ಕಮ್‌ ಸಂಘಟನೆಯ ಅಧ್ಯಕ್ಷನೂ ಆಗಿರುವ ಪೆರಿಯಾಸಾಮಿ 12 ವರ್ಷದ ಬಾಲಕಿಯನ್ನು ತನ್ನ ಅಂಗಡಿಗೆ ಕರೆಸಿಕೊಂಡು ಲ್ಯಾಪ್‌ಟಾಪ್‌ನಲ್ಲಿದ್ದ ಅಶ್ಲೀಲ ಚಿತ್ರಗಳನ್ನು ತೋರಿಸಿದ್ದ ಹಾಗೂ ಆಕೆಯ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಅಂಗಡಿಯಿಂದ ತಪ್ಪಿಸಿಕೊಂಡು ಓಡಿಬಂದ ಬಾಲಕಿ ಘಟನೆಯ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಳು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಕೇಸ್‌ ದಾಖಲಿಸಿಕೊಂಡಿರುವ ಪೋಲೀಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.