Asianet Suvarna News Asianet Suvarna News

Fun turns to Danger; ತಮಾಷೆಗಾಗಿ ಸಹದ್ಯೋಗಿ ಹಿಡಿದು ಗುದದ್ವಾರಕ್ಕೆ ಏರ್‌ಪಂಪ್, ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು!

  • ಸಹದ್ಯೋಗಿಗಳ ತಮಾಷೆಗೆ ಬಲಿಯಾಯ್ತು ಜೀವ
  • ಕೆಲದ ವೇಳೆ ವ್ಯಕ್ತಿ ಹಿಡಿದು ಗುದದ್ವಾರಕ್ಕೆ ಏರ್‌ಪಂಪ್ 
  • ಲಿವರ್ ಡ್ಯಾಮೇಜ್ ಆಗಿ ವ್ಯಕ್ತಿ ಸಾವು, ಪ್ರಕರಣ ದಾಖಲು
Fun turns to Danger man dies after co workers pump air into his anus in Hooghly west bengal ckm
Author
Bengaluru, First Published Nov 26, 2021, 9:53 PM IST

ಕೋಲ್ಕತಾ(ನ.26): ಹಲವು ತಮಾಷೆಗಳು(Fun) ಅತೀ ದೊಡ್ಡ ದುರಂತದಲ್ಲಿ(Tragic End) ಅಂತ್ಯವಾದ ಹಲವು ಘಟನೆಗಳು ಕಣ್ಣ ಮುಂದಿದೆ. ಇದೀಗ ಅಂತದ್ದೆ ಒಂದು ಘಟನೆ ನಡೆದಿದೆ. ತಮಾಷೆಗಾಗಿ ಸಹದ್ಯೋಗಿಗಳು ವ್ಯಕ್ತಿಯನ್ನು ಹಿಡಿದು ಆತನ ಗುದದ್ವಾರಕ್ಕೆ ಏರ್ ಪಂಪ್ ಮಾಡಿದ್ದಾರೆ. ಪರಿಣಾಮ ವ್ಯಕ್ತಿ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ(West Bengal) ಹೂಗ್ಲಿ ಜಿಲ್ಲೆಯ ಬ್ರೂಕ್ ಜ್ಯೂಟ್ ಮಿಲ್‌ನಲ್ಲಿ ನಡೆದಿದೆ. ಸಹದ್ಯೋಗಿಗಳ ಮೇಲೆ ಪ್ರಕರಣ ದಾಖಲಾಗಿದೆ.

ಬ್ರೂಕ್ ಜ್ಯೂಟ್ ಮಿಲ್‌ನಲ್ಲಿ ನೈಟ್ ಶಿಫ್ಟ್‌ನಲ್ಲಿದ್ದ ರೆಹಮತ್ ಆಲಿ ನವೆಂಬರ್ 16 ರಂದು ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದಾರೆ. ಈ ವೇಳೆ ಗಿರಣಿಯಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಇತರ ಸಹದ್ಯೋಗಿಗಳು ರೆಹಮತ್ ಆಲಿಯನ್ನು ಹಿಡಿದು ಆತನ ಗುದದ್ವಾರಕ್ಕೆ ಏರ್‌ಪಂಪ್(Air Pump) ಇಟ್ಟು ಪಂಪ್ ಮಾಡಿದ್ದಾರೆ. ರೆಹಮತ್ ಆಲಿ ಅದೆಷ್ಟೇ ವಿರೋಧಿಸಿದರು ಆತನನ್ನು ಬಲವಂತವಾಗಿ ಹಿಡಿದ ಸಹದ್ಯೋಗಿಗಳು ತಮಾಷೆಗಾಗಿ ಈ ಕಾರ್ಯ ಮಾಡಿದ್ದಾರೆ.

Bengaluru Crime News : ಹಿನ್ನೆಲೆ ಗಾಯಕಿ ತಂದೆ ಅನುಮಾನಾಸ್ಪದವಾಗಿ ಸಾವು

ಗುದದ್ವಾರಕ್ಕೆ ಏರ್‌ಪಂಪ್ ಮಾಡುತ್ತಿದ್ದಂತೆ ರೆಹಮತ್ ಆಲಿ ಆರೋಗ್ಯದಲ್ಲಿ ಏರುಪೇರಾಗಿದೆ. ಕ್ಷಣದಲ್ಲೇ ರೆಹಮತ್ ಆಲಿ ಕುಸಿದು ಬಿದ್ದಿದ್ದಾರೆ.  ಗಾಬರಿಗೊಂಡ ಸಹದ್ಯೋಗಿಗಳು ಸ್ಥಳೀಯ ಚುಂಚುರಾ ಇಮಾಮ್‌ಬಾರಾ ಆಸ್ಪತ್ರಗೆ(Hospital) ದಾಖಲಿಸಿದ್ದಾರೆ. ಆದರೆ ಆರೋಗ್ಯ ಕ್ಷೀಣಿಸುತ್ತಾ ಸಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮರುದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗುದದ್ವಾರದಿಂದ ಒತ್ತಡವಾಗಿ ಹಾಕಿರುವ ಗಾಳಿಯಿಂದ ರೆಹಮತ್ ಆಲಿ ಲಿವರ್ ಸೇರಿದಂತೆ ಇತರ ಅಂಗಾಗಳು ಡ್ಯಾಮೇಜ್ ಆಗಿದೆ. ಪ್ರಜ್ಞಾಹೀನ ಸ್ಥತಿಯಲ್ಲೇ ಇದ್ದ ರೆಹಮತ್ ಆಲಿಗೆ 10 ದಿನ ಸತತ ಚಿಕಿತ್ಸೆ ನೀಡಲಾಗಿತ್ತು.  ಆದರೆ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ರೆಹಮತ್ ಆಲಿ ಬದುಕು ಉಳಿಯಲಿಲ್ಲ.  ಇತ್ತ ಕುಟುಂಬ ಆಕ್ರಂದನ ಮುಗಿಲು ಮುಟ್ಟಿದೆ.

ಕುಟುಂಬಕ್ಕೆ ಆಧಾರವಾಗಿದ್ದ ರೆಹಮತ್ ಆಲಿ ಸಹದ್ಯೋಗಿಗಳ ತಮಾಷೆಗೆ ಬಲಿಯಾಗಬೇಕಾಗಿ ಬಂದಿರುವುದು ದುರಂತ, ಇತ್ತ ರೆಹಮತ್ ಆಲಿ ಕುಟುಬಂಸ್ಥರು ದೂರು ನೀಡಿದ್ದಾರೆ. ಪರಿಹಾರ ಹಣ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ತಮಾಷೆ ಪ್ರಕರಣದಲ್ಲಿ ಸಹದ್ಯೋಗಿ ಶೆಹಝಾದಾ ಖಾನ್ ಪ್ರಮುಖ ಆರೋಪಿಯಾಗಿದ್ದಾನೆ. ಇವರ ಮೇಲೆ ಕೇಸ್ ದಾಖಲಾಗಿದೆ. 

Mangaluru ಕಣಜ ಹುಳ ದಾಳಿಗೆ ಗೃಹರಕ್ಷಕ ಬಲಿ : ಮಕ್ಕಳನ್ನು ರಕ್ಷಿಸಿ ಪ್ರಾಣ ಬಿಟ್ಟ ವ್ಯಕ್ತಿ

ಸಂಪೂರ್ಣ ಘಟನೆ ಬ್ರೂಕ್ ಜ್ಯೂಟ್ ಮಿಲ್‌ನಲ್ಲಿ ನಡೆದಿದೆ. ಆದರೆ ಮಿಲ್ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಷ್ಟೇ ಅಲ್ಲ ಸಾವನ್ನಪ್ಪಿರುವ ಉದ್ಯೋಗಿ ರೆಹಮತ್ ಆಲಿಗೆ ಯಾವುದೇ ಪರಿಹಾರ ನೀಡುವ ಅಥವಾ ಯಾವುದೇ ಭರವಸೆಯನ್ನೂ ಕಂಪನಿ ನೀಡಿಲ್ಲ. ಇತ್ತ ಸಹದ್ಯೋಗಿಗಳು ರೆಹಮತ್ ಆಲಿಯ ನಿಧನರಾಗುತ್ತಿದ್ದಂತೆ ಪರಾರಿಯಾಗಿದ್ದಾರೆ.

ರೆಹಮತ್ ಆಲಿ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಸಹೋದರ ಅಜ್ಮತ್ ಆಲಿ, ಈ ಘಟನೆಗೆ ಸಹದ್ಯೋಗಿಗಳು ನೇರ ಕಾರಣರಾಗಿದ್ದಾರೆ. ರೆಹಮತ್ ಆಲಿಯನ್ನು ಈ ಹಿಂದೆಯೂ ಸಹದ್ಯೋಗಿಗಳು ಪೀಡಿಸಿದ್ದಾರೆ. ಕೆಲಸದಲ್ಲಿ ಹೆಚ್ಚು ಶಿಸ್ತಿನಿಂದ ಇರುತ್ತಿದ್ದ ರಹೆಮತ್ ಆಲಿಗೆ ಉದ್ದೇಶಪೂರ್ವಕವಾಗಿ ಸಹದ್ಯೋಗಿಗಳುು ಈ ರೀತಿ ಮಾಡಿದ್ದಾರೆ. ಇದು ಆಕಸ್ಮಿಕವಾಗಿ ಸಂಭವಿಸಿದ ಘಟನೆಯಲ್ಲ. ಸಹದ್ಯೋಗಿಗಳಿಗೆ ಈ ತಮಾಷೆಯಿಂದ ಸಾವಾಗಬಹುದು ಅನ್ನೋದು ತಿಳಿದಿಲ್ಲವಾಗಿರಬಹುದು. ಆದರೆ ರಹೆಮತ್ ಆಲಿಯನ್ನು ಹಿಡಿದು ಬಲವಂತವಾಗಿ  ಆತನ ಗುದದ್ವಾರಕ್ಕೆ ಏರ್ ಪಂಪ್ ಮಾಡುವ ತಮಾಷೆ ಮೊದಲೆ ಪ್ಲಾನ್ ಮಾಡಲಾಗಿತ್ತು. ಹೀಗಾಗಿ ಇದು ಪ್ಲಾನ್ ಮಾಡಿ ಮಾಡಿದ ಪ್ರಕರಣವಾಗಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅಜ್ಮತ್ ಆಲಿ ಆಗ್ರಹಿಸಿದ್ದಾರೆ.

ಬ್ರೂಕ್ ಜ್ಯೂಟ್ ಮಿಲ್ ಕೂಡ ಈ ರೀತಿಯ ಮಂದಿಗೆ ಉದ್ಯೋಗ ನೀಡಬಾರದು. ಘಟನೆ ಕುರಿತು ಮಿಲ್ ಕಂಪನಿ ಪ್ರತಿಕ್ರಿಯೆ ನೀಡಬೇಕು. ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ. ರೆಹಮತ್ ಆಲಿ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಡ ಮಾಡುತ್ತೇವೆ ಎಂದು ಅಜ್ಮತ್ ಆಲಿ ಹೇಳಿದ್ದಾರೆ.

Follow Us:
Download App:
  • android
  • ios