Asianet Suvarna News Asianet Suvarna News

Rafale deal: ಭಾರಿ ಚೌಕಾಶಿ ನಡೆಸಿ ಫ್ರಾನ್ಸ್‌ನಿಂದ ಭಾರತಕ್ಕೆ 26 ರಫೇಲ್‌ ಯುದ್ಧವಿಮಾನ

ಭಾರತವು 26 ಹೊಸ ರಫೇಲ್‌ ಯುದ್ಧವಿಮಾನಗಳನ್ನು ಖರೀದಿಸಲು ಫ್ರಾನ್ಸ್‌ ಜೊತೆ ಮಾತುಕತೆ ನಡೆಸುತ್ತಿದ್ದು, ಬೆಲೆ ಕಡಿತ ಮಾಡಲು ಫ್ರಾನ್ಸ್‌ ಒಪ್ಪಿಕೊಂಡಿದೆ. ವರ್ಷಾಂತ್ಯದಲ್ಲಿ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ.

France Submits Final Price Offer To India for 26 Rafale-M fighter jet deal mrq
Author
First Published Oct 1, 2024, 9:21 AM IST | Last Updated Oct 1, 2024, 9:21 AM IST

ನವದೆಹಲಿ: ಭಾರತ ಹೊಸದಾಗಿ 26 ರಫೇಲ್‌ ಯುದ್ಧವಿಮಾನಗಳ ಖರೀದಿಗೆ ಉದ್ದೇಶಿದ್ದು, ಹಲವಾರು ಸುತ್ತಿನ ಮಾತುಕತೆಗಳ ನಂತರ, ವಿಮಾನದ ಬೆಲೆಗಳನ್ನು ಫ್ರಾನ್ಸ್‌ ಇಳಿಸಿದೆ ಹಾಗೂ ಅಂತಿಮ ಬೆಲೆಯ ಪ್ರಸ್ತಾಪವನ್ನು ಭಾರತಕ್ಕೆ ಸಲ್ಲಿಸಿದೆ.

ಸೋಮವಾರ ಫ್ರಾನ್ಸ್‌ಗೆ ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರವಾಸ ಆರಂಭಿಸಿದ್ದು ಮಹತ್ವದ ರಕ್ಷಣಾ ಮಾತುಕತೆಯಲ್ಲಿ ತೊಡಗಿದ್ದಾರೆ. ಅದಕ್ಕೂ ಮುನ್ನ ಈ ಧನಾತ್ಮಕ ಬೆಳವಣಿಗೆ ನಡೆದಿದೆ.

ಮೇ ತಿಂಗಳಲ್ಲಿ 50 ಸಾವಿರ ಕೋಟಿ ರು. ಮೊತ್ತದಲ್ಲಿ 26 ರಫೇಲ್‌ ಖರೀದಿಗೆ ಭಾರತ ಮಾತುಕತೆ ಆರಂಭಿಸಿತ್ತು. ಬಳಿಕ ಬೆಲೆಗೆ ಸಂಬಂಧಿಸಿದಂತೆ ಭಾರಿ ಚೌಕಾಶಿ ನಡೆದಿತ್ತು. ಕಠಿಣ ಮಾತುಕತೆಗಳ ನಂತರ ಫ್ರಾನ್ಸ್‌ ಗಮನಾರ್ಹವಾಗಿ ಬೆಲೆ ಕಡಿತ ಮಾಡಿದೆ. ವರ್ಷಾಂತ್ಯದಲ್ಲಿ ಒಪ್ಪಂದ ಏರ್ಪಡಲಿದೆ ಎಂದು ಮೂಲಗಳು ಹೇಳಿವೆ. ಆದರೆ ಎಷ್ಟು ಬೆಲೆಗೆ ವಿಮಾನ ಖರೀದಿಸಲಾಗುತ್ತದೆ? ಫ್ರಾನ್ಸ್ ಎಷ್ಟು ಕಡಿತ ಮಾಡಿದೆ ಎಂಬ ವಿವರ ಲಭ್ಯವಿಲ್ಲ.

ಈ ರಫೇಲ್‌ ಯುದ್ಧವಿಮಾನಗಳನ್ನು ಐಎನ್‌ಎಸ್ ವಿಕ್ರಾಂತ್ ವಿಮಾನವಾಹಕ ನೌಕೆ ಹಾಗೂ ವಿವಿಧ ನೆಲೆಗಳಲ್ಲಿ ಮೇಲೆ ಇರಿಸಲಾಗುತ್ತದೆ. ಈ ಹಿಂದೆಯೂ ಭಾರತ 2016ರಲ್ಲಿ 36 ರಫೇಲ್‌ ಯುದ್ಧವಿಮಾನಗಳ ಖರೀದಿ ಒಪ್ಪಂದ ಮಾಡಿಕೊಂಡಿತ್ತು.

Latest Videos
Follow Us:
Download App:
  • android
  • ios