ಭಾರತದ ನೆರವಿಗೆ ಧಾವಿಸಿದ ಫ್ರಾನ್ಸ್, ರಾಫೆಲ್ ಯುದ್ಧ ವಿಮಾನ ಜೊತೆಗೆ ಬರುತ್ತಿದೆ ಮೆಡಿಕಲ್ ಕಿಟ್!

ಭಾರತದಲ್ಲಿ ಕೊರೋನಾ ಕೇಕೆ ಹಾಕುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಚಿಕಿತ್ಸೆಗಾಗಿ ಸರ್ಕಾರ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯುತ್ತಿದೆ. ಇದರ ಬೆನ್ನಲ್ಲೇ ಭಾರತಕ್ಕೆ ಇತರ ದೇಶಗಳು ಕೈಜೋಡಿಸಿದೆ.  ಇಸ್ರೇಲ್ ವೆಂಟಿಲೇಟರ್ ನೀಡಿದ ಬೆನ್ನಲ್ಲೇ ಇದೀಗ ಫ್ರಾನ್ಸ್ ಕೂಡ ಭಾರತಕ್ಕೆ ವೆಂಟಿಲೇಟರ್ ನೀಡಿದೆ.

France donate 120 ventilator to India for covid 19 patient

ನವದೆಹಲಿ(ಜು.28);  ಕೊರೋನಾ ವೈರಸ್ ನಿಯಂತ್ರಣಕ್ಕೆ ಇದೀಗ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರಯಲಾಗುತ್ತಿದೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲವು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಭಾರತದ ಕಾರ್ಯಕ್ಕೆ ವಿದೇಶಗಳು ಕೈಜೋಡಿಸಿದೆ. ಕೆಲ ದೇಶಗಳು ಭಾರತಕ್ಕೆ ಮೆಡಿಕಲ್ ಸಲಕರಣೆಯನ್ನು ಉಚಿತವಾಗಿ ನೀಡುತ್ತಿದೆ. ಸೋಂಕಿತರ ಚಿಕಿತ್ಸೆಗೆ ಈಗಾಗಲೇ ಇಸ್ರೇಲ್ ವೆಂಟಿಲೇಟರ್ ನೀಡಿತ್ತು. ಇದರ ಬೆನ್ನಲ್ಲೇ ಫ್ರಾನ್ಸ್ ಕೂಡ ಭಾರತಕ್ಕೆ ವೆಂಟಿಲೇಟರ್ ನೀಡಿದೆ.

ಫ್ರಾನ್ಸ್ ಒಟ್ಟು 120 ವೆಂಟಿಲೇಟರ್‌ನ್ನು ಭಾರತಕ್ಕೆ ನೀಡಿದೆ.  50 ಒಸಿರಿಸ್ 3 ವೆಂಟಿಲೇಟರ್ ಹಾಗೂ 70 ಯುವೆಲ್ 830 ವೆಂಟಿಲೇಟರ್‌ನ್ನು ಫ್ರಾನ್ಸ್ ನೀಡಿದೆ. ವಿಶೇಷ ಅಂದರೆ ಇದು ಫ್ರಾನ್ಸ್ ಉಚಿತವಾಗಿ ಭಾರತಕ್ಕೆ ವೆಂಟಿಲೇಟರ್ ನೀಡಿದೆ. 

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮಾಕ್ರೋನ್ , ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಫ್ರಾನ್ಸ್ ಸಹಕಾರ ನೀಡುವುದಾಗಿ ಹೇಳಿದ್ದರು. ಇಷ್ಟೇ ಅಲ್ಲ ವೆಂಟಿಲೇಟರ್ ನೀಡುವುದಾಗಿ ಘೋಷಿಸಿದ್ದರು. ಇದೀಗ ಒಂದೇ ವಾರದಲ್ಲಿ ಫ್ರಾನ್ಸ್ ವೆಂಟಿಲೇಟರ್ ಭಾರತಕ್ಕೆ ಕಳುಹಿಸಿಕೊಟ್ಟಿದೆ.

ಫ್ರಾನ್ಸ್ ದೇಶದಲ್ಲಿ ಕೊರೋನಾ ಮಿತಿ ಮೀರಿದಾಗ ಭಾರತ ಔಷಧಿಗಳನ್ನೂ ಪೂರೈಸಿತ್ತು. ಸಂಕಷ್ಟದ ಸಮಯದಲ್ಲಿ ಭಾರತ ನಮ್ಮ ಜೊತೆ ನಿಂತಿತ್ತು ಎಂದ ಇಮ್ಯಾನ್ಯುಯೆಲ್ ಹೇಳಿದ್ದಾರೆ.  ಫ್ರಾನ್ಸ್‌ನಿಂದ ಭಾರತ ರಾಫೆಲ್ ಯುದ್ಧವಿಮಾನಗಳನ್ನು ಖರೀದಿಸಿದೆ. ಮೊದಲ ಹಂತದಲ್ಲಿ 6 ಯದ್ಧವಿಮಾನಗಳನ್ನು ಫ್ರಾನ್ಸ್ ಭಾರತಕ್ಕೆ ನೀಡಿದೆ. ಫ್ರಾನ್ಸ್‌ನಿಂದ ಭಾರತೀಯ ವಾಯುಸೇನೆ ಪೈಲೆಟ್‌ಗಳು ಯುದ್ಧವಿಮಾನಗಳನ್ನು ಭಾರತಕ್ಕೆ ತರುತ್ತಿದ್ದಾರೆ. 

ಇಸ್ರೇಲ್ ಕೂಡ ಭಾರತಕ್ಕೆ ವೆಂಟಿಲೇಟರ್ ನೀಡಿದೆ. ಇಷ್ಟೇ ಅಲ್ಲ ಭಾರತ ಹಾಗೂ ಇಸ್ರೇಸ್ ಜಂಟಿಯಾಗಿ 30 ಸೆಕೆಂಡ್‌ನಲ್ಲಿ ಕೊರೋನಾ ವೈರಸ್ ಪರೀಕ್ಷೆ ನಡೆಸುವ ರ್ಯಾಪಿಡ್ ಕಿಟ್ ಅಭಿವೃದ್ಧಿ ಪಡಿಸುತ್ತಿದೆ. ಇದು ಕೊರೋನಾ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಸದ್ಯ ಭಾರತದಲ್ಲಿ ಕೊರೋನಾ ಪರೀಕ್ಷೆ ವರದಿಗಳು ತಡವಾಗಿ ಬರುತ್ತಿದೆ. ಇದರಿಂದ ಸೋಕು ಮತ್ತಷ್ಟು ಹರಡುವ ಸಾಧ್ಯತೆ ಇದೆ. ಆದರೆ ಭಾರತ ಹಾಗೂ ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ನೂತನ ಕಿಟ್ ಸೋಂಕು ಹರುಡವಿಕೆಯನ್ನು ತಡೆಯುವಲ್ಲಿ ಯಶಸ್ವಿಯಾಗಲಿದೆ.

Latest Videos
Follow Us:
Download App:
  • android
  • ios