ನವದೆಹಲಿ(ಅ. 30) ಸೋಶಿಯಲ್ ಮೀಡಿಯಾದಲ್ಲಿ  ಇದ್ದಕ್ಕಿದ್ದಂತೆ ಕೆಲವರಿಗೆ ಸ್ಟಾರ್ ಪಟ್ಟ ಸಿಕ್ಕಿಬಿಡುತ್ತದೆ. ಅದಕ್ಕೆ ಕೆಲವರು ಅರ್ಹರಾಗಿರುತ್ತಾರೆ ಕೂಡ. ಈ ಬಾಲಕಿಗೂ ಈಗ ಸ್ಟಾರ್ ಪಟ್ಟ  ಒಲಿದು ಬಂದಿದೆ.

ನೆಟ್ಟಿಗರು ಈ ಕಂದನ ಹಾಡನ್ನು ಕೇಳಿ ಆನಂದದಿಂದ ವಾಹ್ ಎಂದಿದ್ದಾರೆ. ಮುದ್ದಾದ ಪುಟಾಣಿ ದೇಶಭಕ್ತಿಯ ಹೊಸ ರೂಪದಂತೆ ಕಂಡಿದ್ದಾಳೆ. ಮಿಜೋರಾಂನ ನಾಲ್ಕು ವರ್ಷದ ಪುಟಾಣಿ ಇಂಟರ್‌ನೆಟ್‌ನಲ್ಲಿ ಸ್ಟಾರ್ ಆಗಿ ಹೊರಹೊಮ್ಮಿದ್ದಾಳೆ. ಅವಳ ಗೀತೆಯನ್ನು ಆಸ್ವಾದಿಸುವುದೇ ಒಂದು ಆನಂದ.

ದೇವರ ಜಾಗದ ಫಾಲ್ಸ್ ನಲ್ಲಿ ಬಿಜಿನಿ ಪೋಟೋ ಶೂಟ್ ಆಯಿತು ವೈರಲ್

ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಅವರಿಗೆ ಹೆಸರು ತಂದುಕೊಟ್ಟ `ಮಾ ತುಜೆ ಸಲಾಂ'  ಹಾಡಿನ ಹೊಸ ಅವತಾರಕ್ಕೆ ಪುಟಾಣಿ ತನ್ನದೇ ಆದ ಟಚ್ ಕೊಟ್ಟಿದ್ದಾರೆ. ನಾಲ್ಕು ವರ್ಷದ ಎಸ್ತರ್ ಹಮ್ಟೆ ಎಂಬ ಮುದ್ದು ಬಾಲಕಿಯ ದನಿಯಲ್ಲಿ ಮೂಡಿ ಬಂದಿರುವ ಗೀತೆ ಹೊಸ ಅಲೆ ಸೃಷ್ಟಿ ಮಾಡಿದೆ.

ತ್ರಿವರ್ಣ ಧ್ವಜ ಹಿಡಿದು ಬಾಲಕಿ ಅಭಿನಯ ಮಾಡಿದ್ದಾಳೆ. ಕೆಲ ನೃತ್ಯಗಾರರ ಸಾಥ್ ಪಡೆದುಕೊಂಡಿದ್ದಾಳೆ. ಎಸ್ತರ್ ಹಮ್ಟೆಯ ಯುಟ್ಯೂಬ್ ಚಾನೆಲ್ ಕೂಡಾ ಇದೆ. ಇದರಲ್ಲಿ ಮಿಜೋ, ಹಿಂದಿ ಮತ್ತು ಇಂಗ್ಲೀಷ್ ಹಾಡುಗಳನ್ನು ಈ ಪುಟಾಣಿ ಅಪ್ಲೋಡ್ ಮಾಡುತ್ತಿದ್ದಾಳೆ. ನೀವು ಒಮ್ಮೆ ಸುಶ್ರಾವ್ಯ ಗೀತೆ ಕೇಳಿಕೊಂಡು ಬನ್ನಿ