3 ಕೋವಿಡ್‌ ಯೋಧರ ಕರ್ತವ್ಯ ಪ್ರಜ್ಞೆಗೆ ಬಹುಪರಾಕ್‌| ಕೊರೋನಾ ಪೀಡಿತರ ಶುಶ್ರೂಷೆಯಲ್ಲಿ ಗರ್ಭಿಣಿ| ರಜೆ ಇಲ್ಲದೆ ಠಾಣೆಯಲ್ಲೇ ಅರಿಶಿಣ ಶಾಸ್ತ್ರ!

ಸೂರತ್‌(ಏ.25): ಕೋವಿಡ್‌ಗೆ ಅಂಜಿ ಜನರು ಮನೆಯೊಳಗೆ ಸೇರಿಕೊಳ್ಳುತ್ತಿರುವ ಹೊತ್ತಿನಲ್ಲೇ ಸರ್ಕಾರಿ ಹುದ್ದೆಯಲ್ಲಿರುವ ಇಬ್ಬರು ಗರ್ಭಿಣಿಯರು ಕರ್ತವ್ಯಕ್ಕೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಗುಜರಾತ್‌ನ ಸೂರತ್‌ನಲ್ಲಿರುವ ವೃತ್ತಿಯಲ್ಲಿ ದಾದಿಯಾಗಿರುವ ನ್ಯಾನ್ಸಿ ಆಯೇಷಾ ಮಿಸ್ತ್ರಿ 4 ತಿಂಗಳ ಗರ್ಭಿಣಿ. ಪವಿತ್ರ ರಂಜಾನ್‌ ಮಾಸದಲ್ಲಿ ಉಪವಾಸ, ಹೊಟ್ಟೆಯಲ್ಲಿ ಮಗುವನ್ನು ಹೊತ್ತಿರುವ ಹೊರತಾಗಿಯೂ ಅವರು ಕೋವಿಡ್‌ ಸೋಂಕಿತರ ಶುಶ್ರೂಷೆಯಲ್ಲಿ ಭಾಗಿಯಾಗಿದ್ದಾರೆ.

Scroll to load tweet…

ಲಾಠಿ ಹಿಡಿದು ಬೀದಿಗೆ ಬಂದ ಗರ್ಭಿನಿ ಡಿಎಸ್‌ಪಿ

ಇತ್ತ ಛತ್ತೀಸ್‌ಗಢದಲ್ಲಿ ಡಿಎಸ್‌ಪಿಯಾಗಿರುವ ಶಿಲ್ಪಾ ಸಾಹು ಕೂಡಾ ಗರ್ಭಿಣಿ. ಆದರೂ ಅವರು ಮುಖಕ್ಕೆ ಮಾಸ್ಕ್‌ ಧರಿಸಿ, ಕೈಯಲ್ಲಿ ಲಾಠಿ ಹಿಡಿದು ರಸ್ತೆಯಲ್ಲಿ ಜನರ ನಿಯಂತ್ರಣ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ರಜೆ ಇಲ್ಲದೆ ಠಾಣೆಯಲ್ಲೇ ಅರಿಶಿಣ ಶಾಸ್ತ್ರ!

ಅತ್ತ ಕೊರೋನಾ ಕಾರಣದಿಂದಾಗಿ ರಜೆ ಸಿಗದ ಹಿನ್ನೆಲೆಯಲ್ಲಿ ರಾಜಸ್ಥಾನದ ಡುಂಗರ್‌ಪುರ ಪೊಲೀಸ್‌ ಠಾಣೆಯ ಮಹಿಳಾ ಕಾನ್‌ಸ್ಟೇಬಲ್‌ವೊಬ್ಬರು ಠಾಣೆಯಲ್ಲೇ ಅರಿಶಿನ ಶಾಸ್ತ್ರ ಮಾಡಿಸಿಕೊಂಡ ಶನಿವಾರ ನಡೆದಿದೆ. ಈ ಕುರಿತ ಫೋಟೋ ಮತ್ತು ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ವಿಡಿಯೋದಲ್ಲಿ ವಧುವಿಗೆ ಸಹೋದ್ಯೋಗಿ ಪೊಲೀಸ್‌ ಸಿಬ್ಬಂದಿಗಳೇ ಅರಿಶಿಣ ಹಚ್ಚುವ ಮತ್ತು ಸಾಂಪ್ರದಾಯಿಕ ಹಾಡುಗಳನ್ನು ಹಾಡುವ ದೃಶ್ಯವಿದೆ. ವಿಶೇಷ ಅಂದರೆ ಸಿಬ್ಬಂದಿಗಳೆಲ್ಲರೂ ಪೊಲೀಸ್‌ ಸಮವಸ್ತ್ರ ಹಾಗೂ ಮಾಸ್ಕ್‌ ಧರಿಸಿಯೇ ಶಾಸ್ತ್ರ ಮಾಡಿದ್ದಾರೆ.