ಮೇ ಆರಂಭದಿಂದ ಲಸಿಕಾ ಅಭಿಯಾನ/ ಎಲ್ಲರಿಗೂ ಲಸಿಕೆ ನೀಡುತ್ತೇವೆ ಎಂದು ತಿಳಿಸಿರುವ ಕೇಂದ್ರ ಸರ್ಕಾರ/ ಲಸಿಕೆ ನೀಡಿಕೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಧೋರಣ ಮಾಡುತ್ತಿದೆ/ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳ ಆರೋಪ
ನವದೆಹಲಿ (ಏ. 26) ನಾವು ಮೇ 1 ರಿಂದ ಕೊರೋನಾ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ ಎಂಧು ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳು ಹೇಳಿವೆ. ನೇರವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿವೆ.
ರಾಜಸ್ಥಾನ, ಪಂಜಾಬ್, ಛತ್ತೀಸ್‌ಘಡ ಮತ್ತು ಜಾರ್ಖಂಡ್ ನ ಸಚಿವರು ಆರೋ ಪ ಮಾಡಿದ್ದು ಕೇಂದ್ರ ಸರ್ಕಾರ ಲಸಿಕೆಯನ್ನು ಹೈಜಾಕ್ ಮಾಡಿ ಇಟ್ಟುಕೊಂಡಿದೆ ಎಂದು ಆರೋಪಿಸಿದ್ದಾರೆ.
ಕೋವಿಶೀಲ್ಡ್ ತಯಾರಿಸುವ ಸೀರಮ್ ಸಂಸ್ಥೆಗೆ ಬಳಿ ಕೇಳಿಕೊಂಡಾಗ ಮೇ 15 ರವರೆಗೆ ಯಾವುದೇ ಲಸಿಕೆಗಳು ಲಭ್ಯವಿಲ್ಲ ಎಂದು ಹೇಳಿದೆ ಎಂಬ ವಿಚಾರವನ್ನು ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಹೇಳಿದ್ದಾರೆ.
ಕರ್ನಾಟಕ ಎರಡು ವಾರ ಲಾಕ್, ಏನಿರುತ್ತೆ? ಏನಿರಲ್ಲ?
ನಾಲ್ಕು ರಾಜ್ಯಗಳ ಆರೋಗ್ಯ ಮಂತ್ರಿಗಳು ಸುದ್ದಿಗೋಷ್ಠಿ ನಡೆಸಿದ್ದಾರೆ. ಪಂಜಾಬ್‌ನ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧು ಮತ್ತು ಜಾರ್ಖಂಡ್‌ನ ಬನ್ನಾ ಗುಪ್ತಾ ಸಹ ಮಾತನಾಡಿದ್ದಾರೆ.
ಸೆರಮ್ ಸಂಸ್ಥೆ ಬಳಿ ಕೇಳಿಕೊಂಡಾಗ ಸ್ಟಾಕ್ ಇಲ್ಲ ಎಂದು ಹೇಳಿದ್ದು ಕೇಂದ್ರ ಸರ್ಕಾರ ಕೊಟ್ಟ ಆರ್ಡರ್ ಪೂರೈಕೆ ಮಾಡುತ್ತಿದ್ದೇವೆ ಎಂದಿದೆ ಎನ್ನುವುದು ಶರ್ಮಾ ಅವರ ಆರೋಪ.
ರಾಜ್ಯಗಳು ನೇರವಾಗಿ ಲಸಿಕೆ ಪಡೆದುಕೊಳ್ಳಲು ಸಾಧ್ಯವೇ? ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ. ನಮ್ಮ ರಾಜ್ಯಗಳಲ್ಲಿ 18-45 ವಯೋಮಾನದವರಲ್ಲಿ ನಾವು 3.13 ಕೋಟಿ ಜನರನ್ನು ಹೊಂದಿದ್ದೇವೆ, ನಾವು ಅವರಿಗೆ ಹೇಗೆ ಲಸಿಕೆ ನೀಡಲು ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ.
ಮೇ ತಿಂಗಳ ಆರಂಭದಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಸಿಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಜ್ಯಗಳು ಕೇಂದ್ರ ಸರ್ಕಾರದಿಂದ ಲಸಿಕೆ ಪಡೆದುಕೊಳ್ಳಬೇಕೆ? ಅಥವಾ ನೇರವಾಗಿ ಕಂಪನಿಯಿಂದ ಪಡೆದುಕೊಳ್ಳಬೇಕೆ? ಎನ್ನುವ ಗೊಂದಲ ಹಾಗೆ ಇರುವುದು ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ.
