ಮಾಜಿ ಮುಖ್ಯಮಂತ್ರಿ ರಾವತ್‌ಗೆ ಕೊರೋನಾ; ದೆಹಲಿ ಏಮ್ಸ್ ಆಸ್ಪತ್ರೆಗೆ ಶಿಫ್ಟ್!
ದೇಶದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿದೆ. ಒಂದೊಂದೆ ರಾಜ್ಯಗಳು ಕಠಿಣ ನಿರ್ಬಂಧ ಹೇರುತ್ತಿದೆ. ಇದರ ನಡುವೆ ಕೊರೋನಾ ವೈರಸ್ ತಗುಲಿ ಆಸ್ಪತ್ರೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರನ್ನು ಇದೀಗ ದೆಹಲಿಗೆ ಸ್ಥಳಾಂತರಿಸಲಾಗಿದೆ.
ನವದೆಹಲಿ(ಮಾ.25); ಭಾರತದಲ್ಲಿ ಕೊರೋನಾ ಮತ್ತೆ ಆರ್ಭಟ ಆರಂಭಿಸಿದೆ. ಹೊಸ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಲಸಿಕೆ ಅಭಿಯಾನ ಕೂಡ ಚುರುಕುಗೊಂಡಿದೆ. ಇದರ ನಡುವೆ ಕೊರೋನಾ ವೈರಸ್ ತಗುಲಿ ಡೆಹ್ರಡೂನ್‌ನಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದ ಉತ್ತರಖಂಡ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರನ್ನು ದೆಹಲಿಗೆ ಶಿಫ್ಟ್ ಮಾಡಲಾಗಿದೆ.
ದೇಶದಲ್ಲಿ ಅತಿಹೆಚ್ಚು ಕೊರೋನಾ ಕೇಸ್ ಇರೋ ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ 1 ಜಿಲ್ಲೆ
72 ವರ್ಷಗ ಹರೀಶ್ ರಾವತ್ ಅವರಿಗೆ ಡೆಹ್ರಡೂನ್‌ನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆರೋಗ್ಯ ಹದಗೆಟ್ಟ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ರಾವತ್ ಅವರನ್ನು ಏರ್ ಆ್ಯಂಬುಲೆನ್ಸ್ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಇದೀಗ ದೆಹಲಿಯಲ್ಲಿ ರಾವತ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಶುರುವಾಯ್ತು ಕೊರೋನಾ 2ನೇ ಅಲೆ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಬುಧವಾರ(ಮಾ.24) ಹರೀಶ್ ರಾವತ್, ತಮಗೆ ಮಾತ್ರವಲ್ಲ ತಮ್ಮ ಕುಟುಂಬಕ್ಕೂ ಕೊರೋನಾ ತಗುಲಿರುುದು ಖಚಿತಪಡಿಸಿದ್ದರು. ಪತ್ನಿ ಹಾಗೂ ಇಬ್ಬರೂ ಮಕ್ಕಳಿಗೆ ಕೊರೋನಾ ಪಾಸೀಟಿವ್ ವರದಿ ಬಂದಿರುವುದನ್ನು ಖಚಿತಪಡಿಸಿದ್ದರು. ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಕೆ ಇತ್ತು. ಆದರೆ ಸರಿಯಾದ ಸಮಯದಲ್ಲಿ ಪರೀಕ್ಷೆ ಮಾಡಿದ್ದೇನೆ. ಕೊರೋನಾ ಪಾಸಿಟೀವ್ ಆಗಿದೆ ಎಂದು ಹರೀಶ್ ರಾವತ್ ಟ್ವೀಟ್ ಮಾಡಿದ್ದಾರೆ.
ಸೋಮಾವರ ಉತ್ತರಖಂಡ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಕೊರೋನಾ ಕಾಣಿಸಿಕೊಂಡಿದೆ. ಇನ್ನು 2020ರ ಡಿಸೆಂಬರ್ ತಿಂಗಳಲ್ಲಿ ಇತ್ತೀಚೆಗಷ್ಟೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ತ್ರಿವೇಂದ್ರ ಸಿಂಗ್ ರಾವತ್ ಅವರಿಗೂ ಕೊರೋನಾ ಕಾಣಿಸಿಕೊಂಡಿತ್ತು.