ನವದೆಹಲಿ, (ಫೆ.13): ವಿಶ್ವ ಪ್ರಸಿದ್ಧ ಹವಾಮಾನ ತಜ್ಞ ಡಾ.ಆರ್.ಕೆ.ಪಚೌರಿ ಅವರು ಇಂದು (ಗುರುವಾರ) ನಿಧನರಾಗಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಆರ್​​.ಕೆ.ಪಚೌರಿ (79)  ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ನವದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೆಕ್ಸಿಕೋದಲ್ಲಿದ್ದಾಗ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಅಲ್ಲದೇ ಇವರಿಗೆ ಓಪನ್ ಹಾರ್ಟ್ ಸಂರ್ಜರಿ ಮಾಡಲಾಗಿತ್ತು.

 ದಿ ಎನರ್ಜಿ ಆ್ಯಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್‌(TERI) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ ವಿಶ್ವವಿಖ್ಯಾತ ಹವಾಮಾನ ವಿಜ್ಞಾನಿ ಎಂದೇ ಆರ್. ಕೆ. ಪಚೌರಿ ಹೆಸರು ವಾಸಿಯಾಗಿದ್ದರು.

2015ರಲ್ಲಿ  ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ  ಡಾ.ಆರ್.ಕೆ.ಪಚೌರಿ ಅವರನ್ನು ಇಂಧನ ಮತ್ತು ಭಾರತೀಯ ಸಂಶೋಧನಾ ಸಂಸ್ಥೆ(ಟಿಇಆರ್‌ಐ)ಯ ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸಲಾಗಿತ್ತು.

ಈ ಆರೋಪದಿಂದ ಮುಕ್ತರಾಗಲು ಡಾ.ಆರ್.ಕೆ.ಪಚೌರಿ ಹಲವು ವರ್ಷಗಳ ಕಾಲ ಕಾನೂನು  ಹೋರಾಟ ಮಾಡಿದ್ದರು.