ಬಹು ಅಂಗಾಂಗ ವೈಫಲ್ಯ, ವಯೋಸಹಜ ಖಾಯಿಲೆಯಿಂದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪತಿ ದೇವಿಸಿಂಗ್ ಶೇಖಾವತ್ ಪಾಟೀಲ್ ನಿಧನರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ದೆಹಲಿ(ಫೆ.24): ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟಿಲ್ ಪತಿ ದೇವಿಂಗ್ ಸಿಂಗ್ ಶೇಖಾವತ್ ಇಂದು ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ದೇವಿಂಗ್ ಸಿಂಗ್ ಶೇಖಾವತ್ ಕೆಲ ದಿನಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದರು. 89 ವರ್ಷದ ದೇವಿಸಿಂಗ್ ಕಿಡ್ನಿ ಸೇರಿದಂತೆ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ದೇವಿಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕೆಲ ದಿನಗಳ ಹಿಂದೆ ದೇವಿಸಿಂಗ್ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು.ಕಿಡ್ನಿ ಸಮಸ್ಯೆ, ಅಧಿಕ ರಕ್ತದೊತ್ತಡ ಹಾಗೂ ಇತರೆ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಫೆ.12 ರಂದು ಪುಣೆಯ ಕೆಇಎಂ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ದೇವಿಸಿಂಗ್ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ದಿನದಿಂದ ದಿನಕ್ಕ ಆರೋಕ್ಷ್ಯ ಕ್ಷೀಣಿಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 9.30ಕ್ಕೆ ದೇವಿಸಿಂಗ್ ಶೇಖಾವತ್ ನಿಧನರಾಗಿದ್ದಾರೆ.ಮೃತರು, ಪತ್ನಿ ಪ್ರತಿಭಾ ಪಾಟೀಲ್‌, ಪುತ್ರ ರಾಜೇಂದ್ರ ಸಿಂಗ್‌ ಪಾಟೀಲ್‌ ಶೇಖಾವತ್‌ ಹಾಗೂ ಪುತ್ರಿ ಜ್ಯೋತಿ ರಾಥೋಡ್‌ ಅವರನ್ನು ಅಗಲಿದ್ದಾರೆ.

ಗಾಯಕಿ ವಾಣಿ ಜಯರಾಂ ನಿಧನಕ್ಕೆ ಆಘಾತ, ಸಿಎಂ ಬೊಮ್ಮಾಯಿ, ಜಗನ್ ಸೇರಿ ಗಣ್ಯರ ಸಂತಾಪ!

ದೇವಿಸಿಂಗ್ ಶೇಖಾವತ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ನಾನು ಪ್ರತಿಭಾಸಿಂಗ್ ಪಾಟೀಲ್ ಕುಟುಂಬ ಜೊತೆ ನಿಲ್ಲುತ್ತೇನೆ. ದೇವಿಸಿಂಗ್ ನಿಸ್ವಾರ್ಥ ಸೇವೆ ಮೂಲಕ ಸಮಾಜದಲ್ಲಿ ಛಾಪು ಮೂಡಿಸಿದ್ದಾರೆ. ಓಂ ಶಾಂತಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Scroll to load tweet…

ದೇವಿಸಿಂಗ್ ಶೇಖಾವತ್ ಕಾಂಗ್ರೆಸ್ ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರಾಗಿ ಗುರುತಿಸಿಕೊಂಡಿದ್ದ ದೇವಿಸಿಂಗ್ ಶೇಖಾವತ್ ಹೆಚ್ಚು ಸುದ್ದಿಯಾಗಿದ್ದು. ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾದ ಬಳಿಕ. ಪ್ರತಿಭಾ ಪಾಟೀಲ್ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2007 ರಿಂದ 2012ರ ವರೆಗೆ ಭಾರತದ 12ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. 2004 ರಿಂದ 2007ರಲ್ಲಿ ರಾಜಸ್ಥಾನದ ರಾಜ್ಯಪಾಲರಾಗಿ ಪ್ರತಿಭಾ ಸಿಂಗ್ ಪಾಟೀಲ್ ಸೇವೆ ಸಲ್ಲಿಸಿದ್ದಾರೆ. ನೆಹರು ಹಾಗೂ ಗಾಂಧಿ ಕುಟುಂಬ ನಂಬಿಕಸ್ಥ ನಾಯಕಿಯಾಗಿದ್ದ ಪ್ರತಿಭಾ ಪಾಟೀಲ್‌ಗೆ ಕಾಂಗ್ರೆಸ್ ಹಾಗೂ ಎರಡಂರ ಪಕ್ಷಗಳು 2007ರಲ್ಲಿ ರಾಷ್ಟ್ರಪತಿಯಾಗಿ ಆಯ್ಕೆ ಮಾಡಿತು. 

ಸಿದ್ದೇಶ್ವರ ಶ್ರೀ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ, ಭೇಟಿ ನೆನೆದು ಭಾವುಕ!