ಅಮಿತ್ ಶಾ ಬೆನ್ನಲ್ಲೇ  ಮಾಜಿ ರಾಷ್ಟ್ರಪತಿ ಅಮಿತ್ ಶಾಗೂ ಕೊರೋನಾ| ಟ್ವಿಟ್ ಮಾಡಿ ಮಾಹಿತಿ ನೀಡಿದ ಪ್ರಣಬ್ ಮುಖರ್ಜಿ| ಶೀಘ್ರ ಗುಣಮುಖರಾಗುವಂತೆ ಎಚ್‌ಡಿಕೆ ಹಾರೈಕೆ

ನವದೆಹಲಿ(ಆ.10): ಕೊರೋನಾ ಅಟ್ಟಹಾಸ ಭಾರತದಲ್ಲಿ ದಿನೇದಿನೇ ಹೆಚ್ಚಾಗುತ್ತಿದೆ. ಗಣ್ಯರಿಗೂ ಈ ಮಹಾಮಾರಿ ಕಾಡಲಾರಂಭಿಸಿದ್ದು, ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆನ್ನಲ್ಲೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೂ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಸ್ವತಃ ಪ್ರನಭ್ ಮುಖರ್ಜಿಯೆ ಟ್ವಿಟ್ ಮಾಡಿ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

ಈ ಸಂಬಂಧ ಟ್ವಿಟ್ ಮಾಡಿರುವ ಪ್ರಣಬ್ ಮುಖರ್ಜಿ 'ನಾನು ಬೇರೆ ಕಾರಣಕ್ಕಾಗಿ ಆಸ್ಪತ್ರೆಗೆ ಬಂದಿದ್ದೆ. ಆದರೆ ಟೆಸ್ಟ್ ಮಾಡಿದ ಬಳಿಕ ನನಗೆ ಕರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಕಳೆದ ಒಂದು ವಾರದಲ್ಲಿ ನನ್ನ ಸಂಪರ್ಕದಲ್ಲಿರುವ ಜನರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಮತ್ತು ಕ್ವಾರಂಟೈನ್ ನಲ್ಲಿರುವುವಂತೆ ನಾನು ವಿನಂತಿಸುತ್ತೇನೆ' ಎಂದು ಮನವಿ ಮಾಡಿಕೊಂಡಿದ್ದಾರೆ.

Scroll to load tweet…

ಇದರ ಬೆನ್ನಲ್ಲೇ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕೂಡಾ ಟ್ವೀಟ್ ಮಾಡಿ ಪ್ರಣ್ ಮುಖರ್ಜಿಯವರು ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದ್ದಾರೆ.