ನವದೆಹಲಿ(ಸೆ. 17) ಪ್ರಧಾನಿ ನರೇಂದ್ರ ಮೋದಿ ಜನ್ಮದಿನಕ್ಕೆ ಗಣ್ಯರು, ನಾಯಕರು, ಸಿನಿಮಾ ತಾರೆಯರು, ಅಭಿಮಾನಿಗಳು ಶುಭಕೋರಿದ್ದಾರೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮೋದಿ ಅವರಿಗೆ ಶುಭಾಶಯ ತಿಳಿಸಿದ್ದು ಪ್ರಧಾನಿ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.ಹುಟ್ಟು ಹಬ್ಬದ ಶುಭಾಶಯ ಕೋರಿದ್ದ ದೇವೇಗೌಡರಿಗೆ ಧನ್ಯವಾದಗಳನ್ನು ತಿಳಿಸಿದ ಪ್ರಧಾನಿ ಮೋದಿ.

ನಿಮ್ಮ ಶುಭಾಶಯ ಗಳನ್ನು ಸ್ವೀಕರಿಸಲು ಸಂತೋಷ ವಾಗುತ್ತದೆ. ದೇಶದೆಡೆಗೆ ನಿಮ್ಮ ಕಾಳಜಿ, ಕೊಡುಗೆ ಅನನ್ಯವಾದುದು ಎಂದು ಟ್ವೀಟ್ ಮೂಲಕವೇ ಮೋದಿ ಧನ್ಯವಾದ ತಿಳಿಸಿದ್ದಾರೆ.  ಮೋದಿ 70 ರ ಸಂಭ್ರಮಕ್ಕೆ ಇಡೀ ದೇಶ ಸಾಕ್ಷಿಯಾಗಿದೆ.

ನಮೋ 70; ಅಲೆಮಾರಿ ಬ್ರಹ್ಮಚಾರಿಯ ಅವಮಾನದ ಬದುಕು

ಇನ್ನೊಂದು ಕಡೆ ವಿಪಕ್ಷಗಳು ಮೋದಿ ಜನ್ಮದಿನವನ್ನು ನಿರುದ್ಯೋಗಿಗಳ ದಿನ ಎಂದು ಟೀಕೆ ಮಾಡಿದ್ದಾರೆ.  ಮೋದಿ ವಿರುದ್ಧ ಸದಾ ವಾಗ್ದಾಳಿ ಮಾಡುವ ರಾಹುಲ್ ಗಾಂಧಿ ಸಹ ಜನ್ಮದಿನದ ಶುಭಾಶಯ ಕೋರಿದ್ದಾರೆ.