ಇಸ್ಲಾಮಾಬಾದ್(ಜೂ.09)‌: ಪಾಕಿಸ್ತಾನದ ಮಾಜಿ ಪ್ರಧಾನಿ ಶಾಹಿದ್‌ ಖಖಾನ್‌ ಅಬ್ಬಾಸಿ ಹಾಗೂ ರೈಲ್ವೆ ಸಚಿವ ಶೇಖ್‌ ರಶೀದ್‌ ಅಹ್ಮದ್‌ ಸೇರಿದಂತೆ ಇನ್ನಿತರರಿಗೆ ಮಹಾಮಾರಿ ಕೊರೋನಾ ವಕ್ಕರಿಸಿಕೊಂಡಿದೆ. ಹೀಗಾಗಿ, ಈ ಇಬ್ಬರು ನಾಯಕರು ಹೋಮ್‌ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚೀನಾ ಹಾದಿಯಲ್ಲಿ ಪಾಕ್: ಕರಾಚಿಯಲ್ಲೇ 3 ಸಾವಿರಕ್ಕೂ ಅಧಿಕ ಶವ!

ಅಲ್ಲದೆ, ಪಾಕಿಸ್ತಾನ ಪೀಪಲ್ಸ್‌ ಪಕ್ಷ(ಪಿಪಿಪಿ)ದ ಮುಖಂಡ ಶಾರ್ಜಿಲ್‌ ಮೆಮನ್‌ ಹಾಗೂ ಪಾಕಿಸ್ತಾನ ತೆಹ್ರೀಕ್‌-ಇ-ಇನ್ಸಾಫ್‌ ಜನಪ್ರತಿನಿಧಿ ಚೌಧರಿ ಅಲಿ ಅಖ್ತರ್‌ ಅವರು ಸಹ ಕೊರೋನಾಕ್ಕೆ ತುತ್ತಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ ಪಾಕಿಸ್ತಾನದಲ್ಲಿ ನಾಲ್ವರು ಜನಪ್ರತಿನಿಧಿಗಳನ್ನು ಈ ಸೋಂಕು ಬಲಿಪಡೆದಿದೆ. ಏತನ್ಮಧ್ಯೆ, ಪಾಕಿಸ್ತಾನದಲ್ಲಿ ಭಾನುವಾರ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದೆ. ಇಲ್ಲಿ ಸದ್ಯ ಪ್ರತಿ ದಿನ 4 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ.