ನವದೆಹಲಿ(ಡಿ.18): ಲವ್ ಜಿಹಾದ್ ಇದೀಗ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಒಂದೆಡೆ ಲವ್ ಜಿಹಾದ್ ರೀತಿಯ ಹಲವು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದೆ. ಇದನ್ನು ನಿಗ್ರಹಿಸುವ ಸಲುವಾಗಿ ಉತ್ತರ ಪ್ರದೇಶ  ಸರ್ಕಾರ ಲವ್ ಜಿಹಾದ್ ನಿಯಂತ್ರಿಸಲು ಕಾನೂನು ತಂದಿದೆ. ಇದು ಪರ ವಿರೋಧಕ್ಕೂ ಕಾರಣವಾಗಿದೆ. ಇದೀಗ ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಪಿ ಶಾ, ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಪೋಷಕರ ಒಪ್ಪಿಗೆ ಮೇರೆಗೆ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಮದುವೆ ನಿಲ್ಲಿಸಿದ ಪೊಲೀಸ್!..

ಮತಾಂತರ ವಿರೋಧಿ ಹಾಗೂ ಲವ್ ಜಿಹಾದ್ ಕಾನೂನು ಪಂಚಾಯತ್ ತತ್ವ ಸಿದ್ದಾಂತಗಳನ್ನು ಪ್ರತಿಬಿಂಬಿಸುತ್ತಿದೆ. ಈ ಕಾನೂನಿಂದ ಸಾರ್ವಜನಿಕ ಕಿಡಿಗೇಡಿತನ ಹೆಚ್ಚಳವಾಗುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ಇದು ಧರ್ಮದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತಿದೆ. ಸಂವಿದಾನದ ಅಡಿಯಲ್ಲಿರುವ ಜೀವನದ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಈ ಕಾನೂನು ಕಸಿದುಕೊಳ್ಳುತ್ತದೆ ಎಂದು ಎಪಿ ಶಾ ಅಭಿಪ್ರಾಯಪಟ್ಟಿದ್ದಾರೆ.

ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕಾನೂನು ತರಲಾಗಿದೆ ಅನ್ನೋದು ಒಂದು ಕ್ಷಣ ನಂಬಲು ಸಾಧ್ಯವಾಗಿಲ್ಲ. ಲವ್ ಜಿಹಾದ್ ವಿರುದ್ಧ ತಂದಿರುವ ಕಾನೂನು ಆರ್ಟಿಕಲ್ 25 ವಿಧಿಯನ್ನು ಉಲ್ಲಂಘಿಸುತ್ತದೆ. ಧರ್ಮದಲ್ಲಿರುವ ಮೂಲಭೂತ ಹಕ್ಕನ್ನು, ಹಾಗೂ ಜೀವನ ಹಕ್ಕು, ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ. 

ಆರ್ಡಿನೆನ್ಸ್ನ ಹಲವಾರು ನಿಬಂಧನೆಗಳು 25 ನೇ ವಿಧಿಯಿಂದ ಖಾತರಿಪಡಿಸಿದಂತೆ ಧರ್ಮವನ್ನು ಅಭ್ಯಾಸ ಮಾಡುವ ಮೂಲಭೂತ ಹಕ್ಕನ್ನು ಗಂಭೀರವಾಗಿ ಉಲ್ಲಂಘಿಸುತ್ತದೆ ಮತ್ತು 25 ನೇ ವಿಧಿಯಿಂದ ಖಾತರಿಪಡಿಸಿದ ಜೀವನ ಹಕ್ಕು ಮತ್ತು ಸ್ವಾತಂತ್ರ್ಯದ ಮೂಲದಲ್ಲಿ ಮುಷ್ಕರ ಮಾಡುತ್ತದೆ ಎಂದು ಎಪಿ ಶಾ ಹೇಳಿದ್ದಾರೆ.