ಹಮಾಸ್ ಅನ್ನು 'ಭಯೋತ್ಪಾದಕ' ಗುಂಪು ಎಂದು ಕರೆಯುವುದರಿಂದ ಶಶಿ ತರೂರ್‌ ಹಿಂದೇಟು ಹಾಕ್ತಿದ್ದಾರೆ ಎಂಬ ಅನಿಸಿಕೆ ಸಾಮಾಜಿಕ ಮಾಧ್ಯಮದಲ್ಲಿ ಸೃಷ್ಟಿಯಾದ ಬೆನ್ನಲ್ಲೇ ಇಸ್ರೇಲ್‌ ಮಾಜಿ ರಾಯಭಾರಿ ಟೀಕೆ ಮಾಡಿದ್ದರು. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿ (ಅಕ್ಟೋಬರ್ 12, 2023): ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಹಮಾಸ್ ಕುರಿತು ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ. ಹಮಾಸ್ ಅನ್ನು 'ಭಯೋತ್ಪಾದಕ' ಗುಂಪು ಎಂದು ಕರೆಯುವುದರಿಂದ ಶಶಿ ತರೂರ್‌ ಹಿಂದೇಟು ಹಾಕ್ತಿದ್ದಾರೆ ಎಂಬ ಅನಿಸಿಕೆಯನ್ನು ಇದು ಸಾಮಾಜಿಕ ಮಾಧ್ಯಮದಲ್ಲಿ ಸೃಷ್ಟಿಸಿದೆ. ಈ ಬಗ್ಗೆ ಭಾರತದಲ್ಲಿರುವ ಇಸ್ರೇಲ್‌ನ ಮಾಜಿ ರಾಯಭಾರಿ ಟೀಕೆ ಮಾಡಿದ ಬೆನ್ನಲ್ಲೇ, ಶಶಿ ತರೂರ್‌ ಸ್ಪಷ್ಟನೆ ನೀಡಿದ್ದಾರೆ. 

ಶಶಿ ತರೂರ್‌ ನೀಡಿದ್ದಾರೆ ಎನ್ನಲಾದ ಹೇಳಿಕೆ ಬಗ್ಗೆ ಭಾರತದಲ್ಲಿರುವ ಇಸ್ರೇಲ್‌ನ ಮಾಜಿ ರಾಯಭಾರಿ ಡೇನಿಯಲ್ ಕಾರ್ಮನ್ ಟೀಕೆ ಮಾಡಿದ್ದರು. ಅಲ್ಲದೆ, ಸಂಸದರನ್ನು ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಉತ್ತರಿಸಿದ ಕಾಂಗ್ರೆಸ್ ಸಂಸದರು ಹಮಾಸ್ ಅನ್ನು ಭಾರತ ಎಂದಿಗೂ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿಲ್ಲ ಎಂಬ ಭಾರತದ ಅಧಿಕೃತ ನಿಲುವನ್ನು ಮಾತ್ರ ಹೇಳಿರುವುದಾಗಿ ಸ್ಪಷ್ಟನೆ ನೀಡಿದರು. 

ಇದನ್ನು ಓದಿ: ಇಸ್ರೇಲ್‌ ಮೊದಲ ಗುರಿ; ಮುಂದೆ ಸಂಪೂರ್ಣ ಭೂಮಿಯಲ್ಲೇ ನಮ್ಮ ಕಾನೂನು ಇರುತ್ತೆ: ಹಮಾಸ್‌ ಕಮಾಂಡರ್‌ ಎಚ್ಚರಿಕೆ!

ಇತರರು ಹಮಾಸ್‌ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕರೆದರೂ, ಭಾರತವು ಅಂತಹ ಹೆಸರನ್ನು ನೀಡಿಲ್ಲ ಎಂದು ನಾನು ಹೇಳಿದ್ದೇನೆ. ನಿಸ್ಸಂದೇಹವಾಗಿ ಹಮಾಸ್ ಭಯೋತ್ಪಾದಕ ಕೃತ್ಯಗಳನ್ನು ನಡೆಸಿದೆ, ಅದನ್ನು ನಾನು ಸಂಪೂರ್ಣವಾಗಿ ಖಂಡಿಸಿದ್ದೇನೆ ಎಂದೂ ಶಶಿ ತರೂರ್ ಇಸ್ರೇಲ್‌ನ ಶಾಂತಿ ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸಿದ ಡೇನಿಯಲ್ ಕಾರ್ಮನ್‌ಗೆ ಉತ್ತರಿಸಿದರು.

"ಗಂಭೀರವಾಗಿ, @ಶಶಿತರೂರ್, ನಿಮಗೆ ಸಾಧ್ಯವಿಲ್ಲವೇ? ನನ್ನ ಜನರ ವಿರುದ್ಧ ದಶಕಗಳ ಭಯೋತ್ಪಾದನೆಯ ಬಳಿಕ, ಪ್ಯಾಲೆಸ್ತೀನ್ ಪ್ರಾಧಿಕಾರಕ್ಕೆ ಸವಾಲು ಹಾಕುವ ಮೂಲಕ, ವಿಶೇಷವಾಗಿ ಈ ವಾರದ ಸಾವಿರಕ್ಕೂ ಹೆಚ್ಚು ಶಾಂತಿಯುತ ಮಾನವರ ಘೋರ ಹತ್ಯೆಯ ನಂತರವೂ, ಹಮಾಸ್ ಅನ್ನು ಭಯೋತ್ಪಾದಕರು ಎಂದು ನೀವು ಹೇಳುವುದಿಲ್ಲವೇ? ನಾನು ಆಘಾತಕ್ಕೊಳಗಾಗಿದ್ದೇನೆ," ಎಂದು ದೂರದರ್ಶನ ಚಾನೆಲ್‌ಗೆ ಶಶಿ ತರೂರ್ ಸಂದರ್ಶನದ ಕ್ಲಿಪ್ ಅನ್ನು ಹಂಚಿಕೊಂಡ ಡೇನಿಯಲ್ ಕಾರ್ಮನ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲೇ ಪ್ಲ್ಯಾನ್‌ ಆಗಿತ್ತಾ ಹಮಾಸ್‌ ಉಗ್ರರ ದಾಳಿ? ಈಜಿಪ್ಟ್‌ ಎಚ್ಚರಿಕೆಯನ್ನೂ ನಿರ್ಲಕ್ಷ್ಯ ಮಾಡಿದ್ದ ಇಸ್ರೇಲ್‌!

"ಭಯೋತ್ಪಾದಕ ಸಂಘಟನೆಯ ಹಣೆಪಟ್ಟಿಯು ಈ ವಿಷಯದಲ್ಲಿ ಇತರ ದೇಶಗಳ ದಾರಿಗಳನ್ನು ಅನುಸರಿಸದಂತೆ ಬಹಳ ಜಾಗರೂಕರಾಗಿರಬೇಕು. ಅಮೆರಿಕ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸುತ್ತದೆ, ಹಾಗೆಯೇ ಇಸ್ರೇಲ್ ಕೂಡಾ. ಭಾರತವು ಅಂತಹ ಯಾವುದೇ ವರ್ಗೀಕರಣವನ್ನು ಮಾಡಿಲ್ಲ ಮತ್ತು ನಾನು ಭಾರತದ ನಿಲುವಿಗೆ ಬದ್ಧವಾಗಿರಲಿದ್ದೇನೆ’’ ಎಂದು ಶಶಿ ತರೂರ್ ದೂರದರ್ಶನ ಸಂದರ್ಶನದಲ್ಲಿ ಹೇಳಿದರು.

Scroll to load tweet…

"ನನ್ನ ಮಾತುಗಳನ್ನು ತಿರುಚಲು ಪ್ರಯತ್ನಿಸುತ್ತಿರುವ ಹೆಡ್‌ಲೈನ್‌ಗಳಿಂದ ದಾರಿತಪ್ಪಬೇಡಿ @danielocarmon. ಈ ಕಷ್ಟದ ಸಮಯದಲ್ಲಿ ನಾನು ನಿಮಗಾಗಿ ಮತ್ತು ಇಸ್ರೇಲ್‌ನಲ್ಲಿರುವ ಇತರ ಸ್ನೇಹಿತರ ಬಗ್ಗೆ ಬೇಸರ ವ್ಯಕ್ತಪಡಿಸುತ್ತೇನೆ ಮತ್ತು ನಿಮ್ಮ ಮುಂದುವರಿದ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದೂ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಇನ್ನೊಂದೆಡೆ, ಇಸ್ರೇಲ್‌ಗೆ ಬೆಂಬಲ ವ್ಯಕ್ತಪಸಿರುವ ಪ್ರಧಾನಿ ಮೋದಿ ಹೇಳಿಕೆ ಅಪೂರ್ಣವಾಗಿದೆ ಎಂದು ಕಾಂಗ್ರೆಸ್‌ ಸಂಸದ ಹೇಳಿದರು.

ಇದನ್ನೂ ಓದಿ: ಸಂಕಷ್ಟದ ಸಮಯದಲ್ಲಿ ಭಾರತ ಇಸ್ರೇಲ್ ಜತೆ ದೃಢವಾಗಿ ನಿಂತಿದೆ: ಇಸ್ರೇಲ್‌ ಪ್ರಧಾನಿಗೆ ಮೋದಿ ಅಭಯ

ಇಸ್ರೇಲ್-ಪ್ಯಾಲೆಸ್ತೀನ್ ವಿಚಾರದಲ್ಲಿ ಕಾಂಗ್ರೆಸ್ ನಿಲುವೇನು?
ಇಸ್ರೇಲ್ ಜನರ ಮೇಲಿನ ಕ್ರೂರ ದಾಳಿಯನ್ನು ಕಾಂಗ್ರೆಸ್ ಭಾನುವಾರ ಖಂಡಿಸಿದೆ ಮತ್ತು ಪ್ಯಾಲೆಸ್ತೀನ್ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಸಂವಾದಗಳ ಮೂಲಕ ಈಡೇರಿಸಬೇಕು ಎಂದು ಪಕ್ಷ ಯಾವಾಗಲೂ ನಂಬುತ್ತದೆ ಎಂದೂ ಹೇಳಿದೆ. 

ಇದನ್ನು ಓದಿ: ಪ್ಯಾಲೆಸ್ತೀನ್‌ ಪರ ನಿಂತ ಮಾಜಿ ನೀಲಿ ತಾರೆ ಕೆಲಸಕ್ಕೇ ಬಂತು ಕುತ್ತು!