Asianet Suvarna News Asianet Suvarna News

Controversial Law AFSPA: ನಾಗಲ್ಯಾಂಡ್‌ನಿಂದ ಎಫ್‌ಎಸ್‌ಪಿಎ ಹಿಂಪಡೆಯುವ ಬಗ್ಗೆ ನಿರ್ಧರಿಸಲು ಸಮಿತಿ

  • ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA)
  • AFSPA ಹಿಂಪಡೆಯುವ ಬಗ್ಗೆ ನಿರ್ಧರಿಸಲು ಸಮಿತಿ
  • ಕೇಂದ್ರ ಗೃಹ ಸಚಿವರೊಂದಿಗೆ ನಾಗಲ್ಯಾಂಡ್‌ ಸಿಎಂ ಮಾತುಕತೆ
Form a Panel To Decide On Withdrawing Controversial Law AFSPA From Nagaland akb
Author
Bangalore, First Published Dec 26, 2021, 4:16 PM IST

ಕೊಹಿಮಾ(ಡಿ.26):  ನಾಗಾಲ್ಯಾಂಡ್‌ನಲ್ಲಿ ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) ಯನ್ನು ಹಿಂಪಡೆಯಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ನೆಫಿಯು ರಿಯೊ( Neiphiu Rio)ಹೇಳಿದ್ದಾರೆ. ಅವರು ಇಂದು((ಡಿ.26)) ಮಧ್ಯಾಹ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah)ಅವರನ್ನು ಭೇಟಿಯಾದ ನಂತರ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಸೇನೆಯು ಉಗ್ರರೆಂದು ತಿಳಿದು ನಡೆಸಿದ ಕಾರ್ಯಾಚರಣೆಯ ವೇಳೆ 14 ನಾಗರಿಕರು ಸಾವನ್ನಪ್ಪಿದ್ದರು. ನಂತರ ನಾಗಲ್ಯಾಂಡ್‌ನ ಮೋನ್‌ ಜಿಲ್ಲೆ (Mon district) ಯಲ್ಲಿ ನಡೆದ ಪ್ರತೀಕಾರದ ಹಿಂಸಾಚಾರದ ನಂತರ ವಿವಾದಾತ್ಮಕ ಕಾನೂನನ್ನು ಹಿಂತೆಗೆದುಕೊಳ್ಳುವ ಬಗ್ಗೆ  ರಾಜ್ಯದಲ್ಲಿ ಬೇಡಿಕೆ ಹೆಚ್ಚಾಗಿತ್ತು. 

ಕೇಂದ್ರ  ಗೃಹ ಸಚಿವಾಲಯ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದ ಬಗ್ಗೆ ಮಾಧ್ಯಮಗಳಿಗೆ  ಮಾಹಿತಿ ನೀಡಿದ ಅವರು, ಅಮಿತ್‌ ಷಾ ಅಧ್ಯಕ್ಷತೆಯಲ್ಲಿ ಡಿ.23ರಂದು ದೆಹಲಿಯಲ್ಲಿ ಈ ಬಗ್ಗೆ ಸಭೆ ನಡೆದಿತ್ತು. ನಾಗಲ್ಯಾಂಡ್‌ನಲ್ಲಿ ಸೇನೆಗೆ ನೀಡಿರುವ  ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಹಿಂಪಡೆಯುವ ವಿಚಾರವಾಗಿ ಸಭೆ ನಡೆದಿದ್ದು,  ಇದನ್ನು ಅಮಿತ್‌ ಷಾ ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ. ಇದಕ್ಕೆ ಅಮಿತ್ ಶಾ ಜಿ( Amith shah) ಅವರಿಗೆ ಕೃತಜ್ಞರಾಗಿರಬೇಕು. ನಾಗಲ್ಯಾಂಡ್‌ ರಾಜ್ಯ ಸರ್ಕಾರವೂ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯ ವಾತಾವರಣ ನಿರ್ಮಿಸಲು ಎಲ್ಲಾ ವಿಭಾಗಕ್ಕೂ ಮನವಿ ಮಾಡುತ್ತಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. 

 

ಕಳೆದ ವಾರ, ನಾಗಾಲ್ಯಾಂಡ್ ವಿಧಾನಸಭೆಯೂ  ಈಶಾನ್ಯ ಭಾರತದಿಂದ  ವಿಶೇಷವಾಗಿ ನಾಗಲ್ಯಾಂಡ್‌ ರಾಜ್ಯದಿಂದ AFSPA ವನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತು. ಈ ನಿರ್ಣಯವನ್ನು ಅಂಗೀಕರಿಸಿದ ವಿಧಾನಸಭೆಯ ವಿಶೇಷ ಅಧಿವೇಶನವನ್ನು ನಾಗಲ್ಯಾಂಡ್‌ ಮುಖ್ಯಮಂತ್ರಿ ನೆಫಿಯೋ ರಿಯೋ ಮುನ್ನಡೆಸಿದ್ದರು. 

Nagaland Civilian Killings :ನಾಗಾಲ್ಯಾಂಡ್‌ನಲ್ಲಿ ಉಗ್ರಗಾಮಿಗಳೆಂದು ಭದ್ರತಾ ಪಡೆಗಳಿಂದಲೇ 13 ನಾಗರಿಕರ ಹತ್ಯೆ 

ಆಂತರಿಕ ಗಲಭೆಗಳು, ಅಡ್ಡಿಗಳನ್ನು ನಿಭಾಯಿಸಲು ಸಮರ್ಥವಲ್ಲದ ರಾಜ್ಯ ಸರ್ಕಾರಗಳಿಗೆ ನೆರವು ನೀಡುವ ಉದ್ದೇಶದಿಂದ ಎಎಫ್‌ಎಸ್‌ಪಿಎ ಯನ್ನು ಜಾರಿಗೆ ತರಲಾಗಿತ್ತು. ಸರ್ಕಾರವು 'ಗೊಂದಲಪೀಡಿತ' ಎಂದು ಗುರುತಿಸಿದ ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿದಾರಿಗೆ ತರಲು ಎಎಫ್‌ಎಸ್‌ಪಿಎ ಕಾಯ್ದೆಯು ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಹಾಗೂ ಕಾನೂನಿನ ರಕ್ಷಣೆಯನ್ನು ನೀಡುತ್ತದೆ. ತೊಂದರೆಗೊಳಗಾದ ಪ್ರದೇಶಗಳ (ವಿಶೇಷ ನ್ಯಾಯಾಲಯಗಳು) ಕಾಯ್ದೆ 1976ರ ಅಡಿ ಸಮಸ್ಯೆಗೆ ಒಳಗಾಗಿರುವ ಎಂದು ಸರ್ಕಾರ ಗುರುತಿಸಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆ, ವಾಯುಪಡೆ ಹಾಗೂ ಕೇಂದ್ರ ಅರೆಸೇನಾ ಪಡೆಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅಧಿಕಾರ ನೀಡುವ ಸಂಸತ್ತಿನ ಕಾಯ್ದೆ ಇದು.

ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುವ ಯಾರ ಮೇಲೆಯಾದರೂ ಗುಂಡು ಹಾರಿಸುವ ಅಧಿಕಾರವನ್ನು ಈ ಕಾಯ್ದೆ ನೀಡುತ್ತದೆ. ಯಾರನ್ನೇ ಆದರೂ ವಾರಂಟ್ ಇಲ್ಲದೆ ಬಂಧಿಸಲು, ಯಾವುದೇ ವಾಹನ ತಡೆಯಲು ಮತ್ತು ಪರಿಶೀಲಿಸಲು ಹಾಗೂ ಐದು ಅಥವಾ ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡದಂತೆ ನಿಷೇಧಿಸುವುದು ಸೇರಿದಂತೆ ಈ ಕಾಯ್ದೆಯ ಹಲವು  ವಿಶೇಷ ಅಧಿಕಾರವನ್ನು ಹೊಂದಿದೆ.

Follow Us:
Download App:
  • android
  • ios