ನವದೆಹಲಿ[ಜ.18]: ಒಂದೆಡೆ ಇಡೀ ದೇಶವೇ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದೆ. ಹೀಗಿರುವಾಗಲೇ ಹಿರಿಯ ವಕೀಲೆ ಇಂಧಿರಾ ಜೈಸಿಂಗ್ ಬೆಚ್ಚಿ ಬೀಳಿಸುವ ಹೇಳಿಕೆಯೊಂದನ್ನು ನೀಡಿದ್ದಾರೆ. ನಿರ್ಭಯಾ ತಾಯಿ ಬಳಿ ಮನವಿಯೊಂದನ್ನು ಮಾಡಿರಿವ ವಕೀಲೆ ಸೋನಿಯಾ ಗಾಂಧಿಯಂತೆ ನಿರ್ಭಯಾ ಹತ್ಯಾಚಾರಿಗಳನ್ನು ಕ್ಷಮಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

'ನಾನು ಬಾಲಾಪರಾಧಿ': ನೇಣು ತಪ್ಪಿಸಿಕೊಳ್ಳಲು ನಿರ್ಭಯಾ ರೇಪಿಸ್ಟ್ ಪವನ್‌ ಹೊಸ ದಾಳ!

ಈ ಸಂಬಂಧ ಮನವಿ ಮಾಡಿಕೊಂಡಿರುವ ಹಿರಿಯ ವಕೀಲೆ 'ಯಾವ ರೀತಿ ಸೋನಿಯಾ ಗಾಂಧಿ ತನ್ನ ಪತಿ ರಾಜಕೀವ್ ಗಾಂಧಿ ಹಂತಕಿ ನಳಿನಿಯವರನ್ನು ಕ್ಷಮಿಸಿದರೋ, ಅದೇ ರೀತಿ ನಿರ್ಭಯಾ ತಾಯಿ ಕೂಡಾ ದೋಷಿಗಳನ್ನು ಕ್ಷಮಿಸಬೇಕು. ಅವರು ಸೋನಿಯಾ ಗಾಂಧಿ ಉದಾಹರಣೆಯನ್ನು ಅನುಸರಿಸಬೇಕು ಎಂದಿದ್ದಾರೆ.

ಯೋಗ್ಯರಲ್ಲ ನೀವು ಬದುಕಲು: ಫೆ.1ರಂದು ಹತ್ಯಾಚಾರಿಗಳಿಗೆ ಗಲ್ಲು!

ಹಿರಿಯ ವಕೀಲೆ ಇಂಧಿರಾ ಜೈಸಿಂಗ್ ಟ್ವೀಟ್ ಮಾಡಿದ್ದು, 'ಆಶಾ ದೇವಿ ನೋವು ಏನೆಂದು ನನಗೆ ತಿಳಿದಿದೆ. ಆದರೂ ರಾಜೀವ್ ಹಂತಕಿ ನಳಿನಿಯನ್ನು ಕ್ಷಮಿಸಿ, ಮೃತ್ಯುದಂಡ ನೀಡುವುದು ಬೇಡ ಎಂದಿದ್ದ  ಸೋನಿಯಾ ಗಾಂಧಿ ಉದಾಹರಣೆಯನ್ನು ಅನುಸರಿಸಬೇಕೆಂದು ಆಶಾ ಸಿಂಗ್ ಬಳಿ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ. ನಾನು ನಿಮ್ಮೊಂದಿಗಿದ್ದೇನೆ, ಆದರೆ ಗಲ್ಲು ಶಿಕ್ಷೆ ವಿರೋಧಿಸುತ್ತೇನೆ' ಎಂದಿದ್ದಾರೆ.

ಪಟಿಯಾಲಾ ಹೌಸ್ ಕೋರ್ಟ್ ನಿರ್ಭಯಾ ಅತ್ಯಾಚಾರಿಗಳಿಗೆ ಹೊಸ ಡೆತ್ ವಾರಂಟ್ ಹೊರಡಿಸಿದೆ. ಇದರ ಅನ್ವಯ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರೂ ಅಪರಾಧಿಗಳಿಗೆ ಫೆಬ್ರವರಿ 1 ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆಯಾಗಲಿದೆ. ಹೀಗಿದ್ದರೂ ಇದು ಅಂತಿಮ ದಿನಾಂಕ ಎಂದು ಹೇಳಲು ಸಾಧ್ಯವಿಲ್ಲ. ಅಪರಾಧಿಗಳಲ್ಲಿ ಮೂವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಅವಕಾಶವಿದೆ. ಹೀಗಾಘಿ ಗಲ್ಲು ಶಿಕ್ಷೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಫೆ.1ರಂದೂ ಗಲ್ಲು ಶಿಕ್ಷೆ ಅನುಮಾನ, 3 ದೋಷಿಗಳ ಮುಂದಿವೆ ಇನ್ನೂ ಹಲವು ಅವಕಾಶ!