ಊಟ ನೀಡುವ ಅಂಗಡಿಗಳನ್ನು ಜನರಲ್ ಬೋಗಿಗಳು ನಿಲ್ಲುವ ಪ್ಲಾಟ್‌ಫಾರಂನ ಸ್ಥಳದಲ್ಲಿ ನಿರ್ಮಾಣ ಮಾಡಲಾಗುತ್ತದೆ. 2 ಬಗೆಯಲ್ಲಿ ಈ ಊಟವನ್ನು ವಿಭಾಗಿಸಲಾಗಿದ್ದು, 7 ಪೂರಿಗಳು, ಡ್ರೈ ಆಲೂ ಮತ್ತು ಉಪ್ಪಿನಕಾಯಿ ಹೊಂದಿರುವ ಪ್ಯಾಕೆಟ್‌ಗೆ 20 ರು. ಹಾಗೂ 2 ಬಗೆಯ ಊಟ ಹೊಂದಿರುವ ಪ್ಯಾಕೆಟ್‌ಗೆ 50 ರು. ಬೆಲೆ ಇರಲಿದೆ. ಅಲ್ಲದೇ ಅನ್ನ, ರಾಜ್ಮಾ, ಚೋಲೆ, ಕಿಚಡಿ, ಬಟೂರೆ, ಪಾವ್ ಬಾಜಿಗಳು ಇಲ್ಲಿ ದೊರೆಯಲಿವೆ ಎಂದು ರೈಲ್ವೆ ತಿಳಿಸಿದೆ.
ನವದೆಹಲಿ(ಜು.20): ರೈಲಿನ ಜನರಲ್ ಬೋಗಿಗಳಲ್ಲೂ ಕೈಗೆಟುಕುವ ದರದಲ್ಲಿ ಊಟ ಮತ್ತು ಪ್ಯಾಕ್ ಮಾಡಲಾದ ನೀರಿನ ಬಾಟಲ್‌ಗಳನ್ನು ಒದಗಿಸಲು ರೈಲ್ವೆ ನಿರ್ಧರಿಸಿದೆ. ಇದಕ್ಕಾಗಿಯೇ ವಿಶೇಷವಾಗಿ ಇವುಗಳನ್ನು ಉತ್ಪಾದನೆ ಮಾಡಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಊಟವನ್ನು ನೀಡುವ ಅಂಗಡಿಗಳನ್ನು ಜನರಲ್ ಬೋಗಿಗಳು ನಿಲ್ಲುವ ಪ್ಲಾಟ್‌ಫಾರಂನ ಸ್ಥಳದಲ್ಲಿ ನಿರ್ಮಾಣ ಮಾಡಲಾಗುತ್ತದೆ. 2 ಬಗೆಯಲ್ಲಿ ಈ ಊಟವನ್ನು ವಿಭಾಗಿಸಲಾಗಿದ್ದು, 7 ಪೂರಿಗಳು, ಡ್ರೈ ಆಲೂ ಮತ್ತು ಉಪ್ಪಿನಕಾಯಿ ಹೊಂದಿರುವ ಪ್ಯಾಕೆಟ್‌ಗೆ 20 ರು. ಹಾಗೂ 2 ಬಗೆಯ ಊಟ ಹೊಂದಿರುವ ಪ್ಯಾಕೆಟ್‌ಗೆ 50 ರು. ಬೆಲೆ ಇರಲಿದೆ. ಅಲ್ಲದೇ ಅನ್ನ, ರಾಜ್ಮಾ, ಚೋಲೆ, ಕಿಚಡಿ, ಬಟೂರೆ, ಪಾವ್ ಬಾಜಿಗಳು ಇಲ್ಲಿ ದೊರೆಯಲಿವೆ ಎಂದು ರೈಲ್ವೆ ತಿಳಿಸಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೋಚ್‌ನಲ್ಲಿ ಬೆಂಕಿ
ಬಹುತೇಕ ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳು ಕನಿಷ್ಠಪಕ್ಷ 2 ಜನರಲ್ ಬೋಗಿಗಳನ್ನು ಹೊಂದಿರುತ್ತವೆ. ಹಾಗಾಗಿ ಈ ಬೋಗಿಗಳು ನಿಲ್ಲುವ ಕಡೆ ಈ ಅಂಗಡಿಗಳನ್ನು ತೆರೆಯಬೇಕು ಎಂದು ನಿಲ್ದಾಣಗಳಿಗೆ ಸೂಚಿಸಲಾಗಿದೆ. ಅಲ್ಲದೇ 6 ತಿಂಗಳೊಳಗೆ ಇದರ ನಿರ್ಮಾಣ ಪೂರ್ಣವಾಗಬೇಕು ಎಂದು ತಿಳಿಸಲಾಗಿದೆ.
