Asianet Suvarna News Asianet Suvarna News

ಐಟಿ ನಿಯ​ಮ ಪಾಲ​ನೆ ಕಡ್ಡಾಯ: ಫೇಸ್‌ಬು​ಕ್‌, ಗೂಗ​ಲ್‌ಗೆ ಕೇಂದ್ರ ಸೂಚ​ನೆ!

* ಸಾಮಾ​ಜಿಕ ಜಾಲ​ತಾ​ಣ​ಗಳ ದುರು​ಪ​ಯೋಗ ವಿಚಾ​ರ

* ಐಟಿ ನಿಯ​ಮ ಪಾಲ​ನೆ ಕಡ್ಡಾಯ: ಫೇಸ್‌ಬು​ಕ್‌, ಗೂಗ​ಲ್‌ಗೆ ಕೇಂದ್ರ ಸೂಚ​ನೆ

* ವಿಚಾರಣೆಗೆ ಕರೆದಾಗಲೆಲ್ಲ ಖುದ್ದು ಹಾಜರಾಗಬೇಕು. ಸಂಸದೀಯ ಸಚಿವಾಲಯವು ವರ್ಚುವಲ್‌ ಸಭೆಗೆ ಅವಕಾಶ ನೀಡುವುದಿಲ್ಲ

Follow India Rules House IT Panel Tells Facebook Google Officials pod
Author
Bangalore, First Published Jun 30, 2021, 9:08 AM IST

ನವ​ದೆ​ಹ​ಲಿ(ಜೂ.30): ಸಾಮಾ​ಜಿಕ ಜಾಲ​ತಾ​ಣ​ಗಳ ದುರು​ಪ​ಯೋಗ ವಿಚಾ​ರಕ್ಕೆ ಸಂಬಂಧಿ​ಸಿ​ದಂತೆ ಫೇಸ್‌ಬುಕ್‌ ಮತ್ತು ಗೂಗಲ್‌ ಅಧಿ​ಕಾ​ರಿ​ಗ​ಳನ್ನು ಐ.ಟಿ ಇಲಾ​ಖೆಗೆ ಸಂಬಂಧಿ​ಸಿದ ಸಂಸ​ದೀಯ ಸ್ಥಾಯಿ ಸಮಿತಿ ವಿಚಾ​ರ​ಣೆ​ಗೊ​ಳ​ಪ​ಡಿ​ಸಿತು.

ಈ ವೇಳೆ ಸಾಮಾ​ಜಿಕ ಜಾಲ​ತಾ​ಣ​ಗಳ ದುರು​ಪ​ಯೋಗ ತಡೆ ಮತ್ತು ನಾಗ​ರಿ​ಕರ ಹಕ್ಕು​ಗಳ ರಕ್ಷ​ಣೆಗೆ ಭಾರತ ಸರ್ಕಾರ ರೂಪಿ​ಸಿದ ನೂತನ ಕಾನೂ​ನು​ಗ​ಳನ್ನು, ಸರ್ಕಾರದ ಸೂಚನೆ ಹಾಗೂ ಕೋರ್ಟ್‌ ಆದೇಶ ಪಾಲಿ​ಸ​ಲೇ​ಬೇಕು ಎಂದು ಶಶಿ ತರೂರ್‌ ನೇತೃತ್ವದ ಸಮಿತಿ ಸೂಚನೆ ನೀಡಿತು.

ಅಲ್ಲದೆ, ವಿಚಾರಣೆಗೆ ಕರೆದಾಗಲೆಲ್ಲ ಖುದ್ದು ಹಾಜರಾಗಬೇಕು. ಸಂಸದೀಯ ಸಚಿವಾಲಯವು ವರ್ಚುವಲ್‌ ಸಭೆಗೆ ಅವಕಾಶ ನೀಡುವುದಿಲ್ಲ ಎಂದು ಸಮಿತಿ ಹೇಳಿತು. ಈ ಮೂಲಕ ವರ್ಚುವಲ್‌ ಆಗಿ ಸಭೆಗೆ ಬರಲಾಗುವುದು ಎಂಬ ಫೇಸ್‌ಬುಕ್‌ ಕೋರಿಕೆ ತಳ್ಳಿಹಾಕಿತು.

Follow Us:
Download App:
  • android
  • ios