ನವದೆಹಲಿ(ಡಿ.05): ಕೃಷಿ ಮಸೂದೆಯನ್ನು ಹಿಂಪಡೆಯಲು ರೈತರು ನಡೆಸುತ್ತಿರುವ ಪ್ರತಿಭಟನೆ ಕಾವು ತಣ್ಣಗಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಇದರ ಸತತ ಮಾತುಕತೆಗಳು ಫಲಪ್ರದವಾಗುತ್ತಿಲ್ಲ. ಪ್ರತಿಭಟನಾ ನಿರತ ರೈತ ಸಂಘಟನೆಗಳು ಡಿಸೆಂಬರ್ 8 ರಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಇದಕ್ಕೆ ಎಡಪಕ್ಷಗಳು ಬೆಂಬಲ ಘೋಷಿಸಿದೆ.

 ಭಾರತ್ ಬಂದ್‌ಗೆ ಕರೆ ನೀಡಿದ ರೈತ ಸಂಘಟನೆ, ದೇಶವ್ಯಾಪಿ ಪ್ರತಿಭಟನೆ ಕಿಚ್ಚು!

ರೈತ ಸಂಘಟನೆ ಕರೆ ನೀಡಿದ ಭಾರತ್ ಬಂದ್‌ಗೆ 5 ಪಕ್ಷಗಳು ಬೆಂಬಲ ನೀಡಿದೆ. ಎಡಪಕ್ಷಗಳಾದ ಅಖಿಲ ಭಾರತ ಸಮಾಜವಾದಿ ಪಕ್ಷ, ಭಾರತೀಯ ಕಮ್ಯುನಿಸ್ಟ್ ಪಕ್ಷ, ಮಾಕ್ಸ್ ವಾದಿ ಭಾರತೀಯ ಕಮ್ಯೂನಿಸ್ಟ್ ಸೇರಿದಂತೆ ಪ್ರಮುಕ 5 ಪಕ್ಷಗಳು ಬಂದ್‌ಗೆ ಬೆಂಬಲ ಘೋಷಿಸಿದೆ. ಇದರ ಜೊತೆ ಕೆಲ ಸಂಘಟನೆಗಳಲ್ಲಿ ಎಡಪಕ್ಷಗಳು ಬೆಂಬಲ ಸೂಚಿಸಲು ಮನವಿ ಮಾಡಿದೆ.

ರೈತರ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ. ಇದು ಕೇಂದ್ರ ಸರ್ಕಾರ ಅಂತ್ಯಕ್ಕೆ ಕಾರಣವಾಗಲಿದೆ. ರೈತರ ಬೇಡಿಕೆಯನ್ನು ಕೇಂದ್ರ ಸರ್ಕಾರ ಪೂರೈಸಬೇಕು. ಇದಕ್ಕಾಗಿ ಡಿಸೆಂಬರ್ 8 ರಂದು ರೈತರ ಭಾರತ್ ಬಂದ್‌ಗೆ ಎಡಪಕ್ಷಗಳು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.