ಉದ್ಘಾಟನೆಗೂ ಮುನ್ನವೇ ವಂದೇ ಭಾರತ್‌ಗೆ ಕಲ್ಲು: ಐವರ ಸೆರೆ
ಛತ್ತೀಸ್‌ಗಢದ ದುರ್ಗ್‌ನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣದವರೆಗೆ ಸಂಚರಿಸಲಿರುವ ವಂದೇಭಾರತ್ ಎಕ್ಸ್‌ಪ್ರೆಸ್ ರೈಲು ಸೋಮವಾರ ಉದ್ಘಾಟನೆ ಆಗಲಿದೆ. ಆದರೆ ಉದ್ಘಾಟನೆಗೂ ಮುನ್ನ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
ದುರ್ಗ್ (ಸೆ.15): ಛತ್ತೀಸ್‌ಗಢದ ದುರ್ಗ್‌ನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣದವರೆಗೆ ಸಂಚರಿಸಲಿರುವ ವಂದೇಭಾರತ್ ಎಕ್ಸ್‌ಪ್ರೆಸ್ ರೈಲು ಸೋಮವಾರ ಉದ್ಘಾಟನೆ ಆಗಲಿದೆ. ಆದರೆ ಉದ್ಘಾಟನೆಗೂ ಮುನ್ನ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಈ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಶಿವ ಕುಮಾರ್ ಬಾಘೇಲ್, ದೇವೇಂದ್ರ ಚಂದ್ರಕರ್, ಜಿತು ತಂದಿ, ಲೇಖ್ರಾಜ್ ಸೋನ್ವಾನಿ ಮತ್ತು ಅರ್ಜುನ್ ಯಾದವ್ ಎಂದು ಗುರುತಿಸಲಾಗಿದೆ, ಎಲ್ಲರೂ ಬಾಗ್ಬಹ್ರಾ(Bagbahra) ನಿವಾಸಿಗಳು.
ದುರ್ಗ್‌ನಿಂದ ವಿಶಾಖಪಟ್ಟಣಕ್ಕೆ ಪ್ರಾಯೋಗಿಕ ಪರೀಕ್ಷೆ ನಡೆಸುವ ವೇಳೆ ಶುಕ್ರವಾರ ಬೆಳಗ್ಗೆ ವಿಶಾಖಪಟ್ಟಣದಿಂದ ವಾಪಸಾಗುತ್ತಿದ್ದ ರೈಲಿಗೆ ಬಾಗ್‌ಬಹರಾ ರೈಲು ನಿಲ್ದಾಣದಲ್ಲಿ ಕಿಡಿಗೇಡಿಗಳು ಏಕಾಏಕಿ ಕಲ್ಲು ತೂರಾಟ ನಡೆಸಿದರು. ಈ ಕೃತ್ಯದಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಆದರೆ ಸಿ2-10, ಸಿ4-1 ಹಾಗೂ ಸಿ9-78 ಎಂಬ ಮೂರು ಕೋಚ್‌ಗಳ ಕಿಟಕಿಗಳಿಗೆ ಹಾನಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋದಿ ತವರಲ್ಲಿ ಮೊದಲ 'ವಂದೇ ಮೆಟ್ರೋ' ಚಾಲನೆಗೆ ಕ್ಷಣಗಣನೆ; ಎಷ್ಟು ವೇಗದಲ್ಲಿ ಚಲಿಸುತ್ತೆ ಈ ಟ್ರೈನ್?
ಮಹಾಸಮುಂಡ್‌ನಲ್ಲಿರುವ ರೈಲ್ವೇ ಪ್ರೊಟೆಕ್ಷನ್ ಫೋರ್ಸ್‌ನ (ಆರ್‌ಪಿಎಫ್) ಇನ್ಸ್‌ಪೆಕ್ಟರ್ ಪ್ರವೀಣ್ ಸಿಂಗ್ ಧಕಡ್ ಅವರು ಹೇಳುವ ಪ್ರಕಾರ, ಕಿಡಿಗೇಡಿಗಳ ಕಲ್ಲು ತೂರಾಟದಿಂದ ಮೂರು ಕೋಚ್‌ಗಳ (ಸಿ 2, ಸಿ 4 ಮತ್ತು ಸಿ 9) ಕಿಟಕಿಯ ಗಾಜುಗಳಿಗೆ ಹಾನಿಯನ್ನುಂಟುಮಾಡಿದೆ ಆದರೆ ಯಾವುದೇ ಸಾವು-ನೋವುಗಳಾಗಿಲ್ಲ. ನಾಳೆಯೇ (ಸೆ.16) ದುರ್ಗ್‌ನಿಂದ ನಿಯಮಿತವಾಗಿ ಸಂಚರಿಸಲಿದೆ. ದುರ್ಗ್‌ನಿಂದ ಹೊರಟು ರಾಯ್‌ಪುರದ ಮೂಲಕ ಹಾದು ಮಹಾಮುಂಡ್‌ಗೆ ತಲುಪಿ ಅಲ್ಲಿಂದ ಬೆಳಗ್ಗೆ 7.10ಕ್ಕೆ ತನ್ನ ಪ್ರಯಾಣ ಮುಂದುವರಿಸಲಿದೆ.