1947ರ ಬಳಿಕ ಮೊದಲ ಬಾರಿಗೆ ಕಾಶ್ಮೀರ ಗಡಿಯ ಶಾರಾದಾ ದೇಗುಲದಲ್ಲಿ ನವರಾತ್ರಿ ಪೂಜೆ!

ಬರೋಬ್ಬರಿ 75 ವರ್ಷಗಳ ಬಳಿಕ ನೆಲಸಮಗೊಂಡಿದ್ದ ಕಾಶ್ಮೀರದ ಶ್ರೀ ಶಾರಾದಾ ಮಂದಿರದಲ್ಲಿ 1947ರ ಬಳಿಕ ಇದೇ ಮೊದಲ ಬಾರಿಗೆ ನವರಾತ್ರಿ ಪೂಜೆ ನಡೆಯುತ್ತಿದೆ. ಭವ್ಯ ಭಾರತದ ಪರಂಪರೆ ಮತ್ತೆ ಮರುಕಳಿಸುತ್ತಿದೆ.

First time after independence Navratri puja held at Sharada Devi temple Teetwal Kashmir LOC ckm

ಕುಪ್ವಾರ(ಅ.17) ಮೊಘಲರು, ದಾಳಿಕೋರರು, ಭಯೋತ್ರಾದಕರ ದಾಳಿಗೆ ನೆಲಸಮಗೊಂಡಿದ್ದ ಹಲವು ದೇಗುಲಗಳು ಇದೀಗ ಜೀರ್ಣೋದ್ಧಾರಗೊಂಡಿದೆ. ಈ ಪೈಕಿ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿರುವ ಶ್ರೀ ಶಾರಾದ ಮಂದಿರ ಕೂಡ ಒಂದು. ತೀತ್ವಾಲ್ ಗ್ರಾಮದಲ್ಲಿರುವ ಶ್ರೀ ಶಾರಾದಾ ಮಂದಿರವನ್ನು ಮರುಸ್ಥಾಪಿಸಿ ಈ ವರ್ಷದ ಆರಂಭದಲ್ಲಿ ಉದ್ಘಾಟನೆಗೊಂಡಿತ್ತು. ಇದೀಗ ಸ್ವಾತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ ಶ್ರೀ ಶಾರಾದಾ ಮಂದಿರದಲ್ಲಿ ನವರಾತ್ರಿ ಪೂಜೆ ನಡೆಯುತ್ತಿದೆ. ಈ ಮೂಲಕ ಗತವೈಭವ ಮರುಕಳಿಸಿದೆ. 

ಕುಪ್ವಾರ ಜಿಲ್ಲೆಯ ತೀತ್ವಾಲ್ ಗ್ರಾಮದಲ್ಲಿರುವ ಈ ಮಂದಿರ ಪಾಕಿಸ್ತಾನ ಗಡಿ ಸಮೀಪದಲ್ಲೇ ಇದೆ. ನವರಾತ್ರಿ ಹಬ್ಬಕ್ಕೆ ವಿಶೇಷ ಪೂಜೆ ಇಲ್ಲಿ ನಡೆಯುತ್ತದೆ. 1947ರ ಬಳಿಕ ಇದೇ ಮೊದಲ ಬಾರಿಗೆ ತೀತ್ವಾಲ್‌ನ ಶಾರಾದಾ ಮಂದಿರದಲ್ಲಿ ನವರಾತ್ರಿ ಪೂಜೆ ನಡೆಯುತ್ತಿದೆ. ಕಾಶ್ಮೀರಿ ಪಂಡಿತರು, ಹಲವು ಭಕ್ತರು ಈ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಕಾಶ್ಮೀರ ಫೈಲ್ಸ್ ಚಿತ್ರದಲ್ಲಿ ಕಾಣಿಸಿಕೊಂಡು ಜನಮನ್ನಣೆ ಗಳಿಸಿದ್ದ ಎಕೆ ರೈನಾ ಮಂದಿರಕ್ಕೆ ಭೇಟಿ ನೀಡಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಭಕ್ತರು ಮಂದಿರಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. 

ಜಮ್ಮುವಿನಲ್ಲಿ ಶೃಂಗೇರಿ ಶಾರದಾಂಬೆ ವಿಗ್ರಹಕ್ಕೆ ಶ್ರೀಗಳಿಂದ ಪ್ರತಿಷ್ಠಾಪನೆ ಪೂಜೆ

ಸ್ವಾತಂತ್ರ್ಯ ಪೂರ್ವದಲ್ಲಿ ಈ ಮಂದಿರದ ಮೇಲೆ ಹಲವು ದಾಳಿಗಳಾಗಿತ್ತು. ಅಂದಿನ ಕಾಶ್ಮೀರ ರಾಜರು ಈ ದೇವಸ್ಥಾನ ಪುನರ್ ನಿರ್ಮಾಣ ಮಾಡಿದ್ದರು. ಆದರೆ 1947ರಲ್ಲಿ ಪಾಕಿಸ್ತಾನ ಮೂಲಭೂತವಾದಿಗಳು ದೇಗುಲದ ಮೇಲೆ ದಾಳಿ ನಡೆಸಿ ನೆಲಸಮ ಮಾಡಿತ್ತು. ಬಳಿಕ ಈ ದೇಗುಲದ ಪುನರ್ ನಿರ್ಮಾಣ ಆಗಿರಲಿಲ್ಲ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಸಹಯೋಗದಲ್ಲಿ 2023ರಲ್ಲಿ ಪುನರ್ ನಿರ್ಮಾಣ ಮಾಡಿತ್ತು. ಮಾರ್ಚ್ ತಿಂಗಳಲ್ಲಿ ಈ ಮಂದಿರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟನೆ ಮಾಡಿದ್ದರು.

 

 

75 ವರ್ಷಗಳ ಬಳಿಕ ಕಾಶ್ಮೀರಿ ಪಂಡಿತರು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಈ ದೇಗುಲದ ಪುನರ್‌ನಿರ್ಮಾಣ ಕಾರ್ಯ ಕೈಗೊಂಡಿದ್ದರು.ದೇವಾಲಯದಲ್ಲಿ ಪ್ರತಿಷ್ಠಾಪಿಸಲು ಶಾರದೆಯ ಪಂಚಲೋಹದ ವಿಗ್ರಹವನ್ನು ಶೃಂಗೇರಿ ಜಗದ್ಗುರುಗಳ ಸಮ್ಮುಖದಲ್ಲಿ ತಯಾರಿಸಲಾಗಿತ್ತು. ಇದನ್ನು ಜ.24 ರಂದು ಶೃಂಗೇರಿ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದ ನಂತರ ಕಾಶ್ಮೀರಿ ಪಂಡಿತರು ಶೃಂಗೇರಿಯಿಂದ ಸುಮಾರು 4 ಸಾವಿರ ಕಿ.ಮೀ.ದೂರದಲ್ಲಿರುವ ತೀತ್ವಾಲ್‌ಗೆ ಶೃಂಗೇರಿ ಚಿಕ್ಕಮಗಳೂರು, ಬೆಂಗಳೂರು, ಗುಜರಾತ್‌, ಮುಂಬಯಿ, ಪಂಜಾಬ್‌ ಮಾರ್ಗವಾಗಿ ರಥಯಾತ್ರೆ ಮೂಲಕ ಕೊಂಡೊಯ್ದಿದ್ದರು.

 

Sharda Peeth Temple: ಕಾಶ್ಮೀರದಲ್ಲಿ ಶಾರದಾ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ!

Latest Videos
Follow Us:
Download App:
  • android
  • ios