Festivals

ತಿತ್ವಾಲ್ ನಲ್ಲಿ ಶ್ರೀಗಳು

ಜಮ್ಮು ಕಾಶ್ಮೀರದ ತಿತ್ವಾಲ್‌ನಲ್ಲಿರುವ ಶೃಂಗೇರಿ ಶಾರದಾಂಬೆ ದೇಗುಲ ಶೃಂಗೇರಿ ಜಗದ್ಗುರು ವಿಧುಶೇಖರ ಶ್ರೀಗಳಿಂದ ಪೂಜೆ.

Image credits: our own

ದೇಗುಲಕ್ಕೆ ಮರುಜೀವ

1948ರಲ್ಲಿ ಪಾಕಿಸ್ತಾನದ ಮೂಲಭೂತವಾದಿಗಳ ಆಕ್ರಮಣದಿಂದ ಸಂಪೂರ್ಣ ಹಾನಿಗೊಳಗಾಗಿದ್ದ ಶಾರದಾ ದೇಗುಲಕ್ಕೆ ಮರುಜೀವ
 

Image credits: our own

ಜಗದ್ಗುರುಗಳಿಂದ ಪೂಜೆ

ಸಂವಿಧಾನದ 370ನೇ ವಿಧಿ ನಂತರ ಪುನರ್‌ ನಿರ್ಮಾಣಗೊಂಡು ಯುಗಾದಿಯಂದು ಲೋಕಾರ್ಪಣೆಗೊಂಡಿದ್ದ ಶಾರದಾ ಮಂದಿರಕ್ಕೆ ಶೃಂಗೇರಿ ಜಗದ್ಗುರುಗಳಿಂದ ಇಂದು ಪೂಜೆ.

Image credits: our own

ಕಾಶ್ಮೀರದಲ್ಲಿ ಶ್ರೀಗಳು

ವಿಶೇಷ ವಿಮಾನದಲ್ಲಿ ಕಾಶ್ಮೀರ ತಲುಪಿ, ತಿತ್ವಾಲ್ ಗೆ ಭೇಟಿ ನೀಡಿದ ವಿಧುಶೇಖರ ಶ್ರೀಗಳು. ಶೃಂಗೇರಿಯಿಂದ 4000 ಕಿ.ಮೀ. ದೂರದಲ್ಲಿರುವ ತಿತ್ವಾಲ್.

Image credits: our own

ಶಂಕರಾಚಾರ್ಯರ ನಂಟು

ಶತಮಾನಗಳ ಹಿಂದೆ ಶಂಕರಾಚಾರ್ಯರು ಕಾಶ್ಮೀರದ ತಿತ್ವಾಲ್‌ನಲ್ಲಿ ಸ್ಥಾಪಿಸಿದ್ದ ಶೃಂಗೇರಿ ಶಾರದಾಂಬೆ ದೇಗುಲ 1948ರಲ್ಲಿ ಸಂಪೂರ್ಣ ಹದಗೆಟ್ಟಿತ್ತು.

Image credits: our own

ಕಾಶ್ಮೀರಿ ಪಂಡಿತರು

ಕಾಶ್ಮೀರಿ ಪಂಡಿತರು ಹಲವು ಬಾರಿ ಶೃಂಗೇರಿಗೆ ಭೇಟಿ ನೀಡಿ, ಕಾಶ್ಮೀರದ ದೇಗುಲವನ್ನು ಪುನರ್ ಪ್ರತಿಷ್ಠಾಪಿಸಲು ಸಹಕರಿಸುವಂತೆ ನೀಡುವಂತೆ ಮನವಿ ಮಾಡಿದ್ದರು.

Image credits: our own
Find Next One