ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬೆಂಕಿ ಅವಘಡ ಸಂಭಲಿಸಿದೆ. ತಾತ್ಕಾಲಿಕವಾಗಿ ಹಾಕಿರುವ ಟೆಂಟ್‌ಗೆ ಬೆಂಕ ಹೊತ್ತಿಕೊಂಡಿದೆ. ಹಲವು ಟೆಂಟ್‌ಗಳು ಭಸ್ಮವಾಗಿದೆ.
ಪ್ರಯಾಗ್‌ರಾಜ್(ಜ.19) ವಿಶ್ವವೇ ಅಚ್ಚರಿಪಡುವಂತೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳೆ ಆಯೋಜನೆಗೊಂಡಿದೆ. ಪ್ರತಿ ದಿನ ಕೋಟ್ಯಾಂತರ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ಇದರ ನಡುವೆ ಅವಘಡ ಸಂಭವಿಸಿದೆ. ಪ್ರಯಾಗರಾಜ್‌ಗೆ ಆಗಮಿಸಿರುವ ಭಕ್ತರು, ಸಾಧುಗಳು, ಸಂತರಿಗೆ ತಾತ್ಕಾಲಿಕವಾಗಿ ನಿರ್ಮಿಸಿರುವ ಟೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿಯ ಕೆನ್ನಾಲಗೆ ಹರಡಿ ಹಲವು ಟೆಂಟ್‌ಗಳು ಭಸ್ಮಗೊಂಡಿದೆ. ಬೆಂಕಿಯ ಜ್ವಾಲೆಗೆ ಮಹಾಕುಂಭ ಮೇಳೆದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ತಕ್ಷಣವೇ ಸ್ಥಳದಲ್ಲಿದ್ದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದೆ. ಘಟನೆಯಲ್ಲಿ ಟೆಂಟ್‌ಗಳು ಭಸ್ಮವಾಗಿದೆ. ಆದರೆ ಭಕ್ತರಿಗೆ ಗಾಯವಾಗಿರುವ ಮಾಹಿತಿ ಸದ್ಯಕ್ಕೆ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಮಾಹಿತಿ ಸಿಕ್ಕ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಕರೆ ಮಾಡಿದ್ದಾರೆ. ಘಟನೆಯ ಮಾಹಿತಿ ಪಡೆದಿದ್ದಾರೆ.
ಅಹಿತಕರ ಘಟನೆ ನಡೆಯದಂತೆ ಎಲ್ಲಾ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಮಹಾಕುಂಭ ಮೇಳ ಆರಂಭಕ್ಕೂ ಮೊದಲೇ ನೂರಾರು ಅಗ್ನಿಶಾಮಕ ದಳ ನಿಯೋಜಿಸಲಾಗಿದೆ. ಹೀಗಾಗಿ ತಕ್ಷಣವೇ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಮಹಾಕುಂಭಮೇಳದ ಸೆಕ್ಟರ್ 19ರ ಬಳಿ 2 ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದ ಸಂಜೆ 4.30ರ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಗೆ ಹಲವು ಟೆಂಟ್‌ಗಳಿಗೆ ಹಬ್ಬಿದೆ. ಸ್ಥಳದಿಂದ ಭಕ್ತರನ್ನು ತೆರವುಗೊಳಿಸಲಾಗಿದೆ. ಸ್ಥಳದಲ್ಲೇ ಅಗ್ನಿಶಾಮಕ ದಳಗಳ ಸೇವೆ ಲಭ್ಯವಿದ್ದ ಕಾರಣ ಬೆಂಕಿ ಆರಿಸುವ ಕಾರ್ಯ ನಡೆದಿದೆ ಎಂದು ಪ್ರಯಾಗರಾಜ್ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಹೇಳಿದ್ದಾರೆ.
ಮಹಾಕುಂಭ ಮೇಳದಲ್ಲಿ ಎಲ್ಲರ ಗಮನಸೆಳೆದಿರುವ ರಷ್ಯಾದ 7 ಅಡಿ ಎತ್ತರದ ಮಸ್ಕ್ಯುಲರ್ ಬಾಬ
ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ 15 ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಕಾರ್ಯಾಚರಣೆ ನಡೆಸಿದೆ. 18 ಟೆಂಟ್‌ಗಳು ಅಗ್ನಿಗೆ ಆಹುತಿಯಾಗಿದೆ. ಸದ್ಯ ಸಂಪೂರ್ಣವಾಗಿ ಬೆಂಕಿ ನಂದಿಸಲಾಗಿದೆ ಎಂದು ಮಹಾಕುಂಭಮೇಳದ ಅಗ್ನಿಶಾಮಕ ದಳ ಮುಖ್ಯಸ್ಥ ಪ್ರಮೋದ್ ಶರ್ಮಾ ಹೇಳಿದ್ದಾರೆ. ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಹಾಗೂ ಇತರ ಆಯಾಮಗಳಲ್ಲೂ ತನಿಖೆ ಆರಂಭಗೊಂಡಿದೆ.
ಘಟನೆ ಕುರಿತು ಮಹಾಕುಂಭ ಮೇಳೆ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ಮಹಾಕುಂಭ ಮೇಳ ಸ್ಥಳದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅನಿರೀಕ್ಷಿತ ಬೆಳವಣಿಗೆ ಆತಂಕ ತಂದಿದೆ. ಅಧಿಕಾರಿಗಳ ತಂಡ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಣಾ ಕಾರ್ಯಾಗಳನ್ನು ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ತಾಯಿ ಗಂಗೆ ಎಲ್ಲಾ ಭಕ್ತರನ್ನು ಕಾಪಾಡಲಿ, ಹಾಗೇ ಸುರಕ್ಷಿತವಾಗಿಡಲಿ ಎಂದು ಎಕ್ಸ್ ಖಾತೆಯಲ್ಲಿ ಬೇಡಿಕೊಳ್ಳಲಾಗಿದೆ.
ಮಹಾಕುಂಭ ಮೇಳದಲ್ಲಿ ವಿದೇಶಿ ಪ್ರತಿನಿಧಿಗಳಿಂದ ಪವಿತ್ರ ಸ್ನಾನ, ಸೂಕ್ತ ವ್ಯವಸ್ಥೆಗೆ ಮೆಚ್ಚುಗೆ
