Asianet Suvarna News Asianet Suvarna News

ಬ್ರಾಹ್ಮ​ಣರು ವಿದೇ​ಶೀ​ಯ​ರು: ಛತ್ತೀ​ಸ್‌​ಗಢ ಸಿಎಂ ತಂದೆ ವಿವಾ​ದಿತ ಹೇಳಿ​ಕೆ

* ನಂದ ಕುಮಾರ್‌ ಬಾಘೇಲ್‌ ಅವರು ಸಮುದಾಯವೊಂದರ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ

* ಬ್ರಾಹ್ಮ​ಣರು ವಿದೇ​ಶೀ​ಯ​ರು ಛತ್ತೀ​ಸ್‌​ಗಢ ಸಿಎಂ ತಂದೆ ವಿವಾ​ದಿತ ಹೇಳಿ​ಕೆ

FIR registered against Chhattisgarh CM father for anti Brahmin comments pod
Author
Bangalore, First Published Sep 6, 2021, 11:00 AM IST
  • Facebook
  • Twitter
  • Whatsapp

ರಾಯ್ಪುರ(ಫೆ.06): ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಅವರ ತಂದೆ ನಂದ ಕುಮಾರ್‌ ಬಾಘೇಲ್‌ ಅವರು ಸಮುದಾಯವೊಂದರ ಕುರಿತಾಗಿ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಭಾನುವಾರ ಸರ್ವ ಬ್ರಾಹ್ಮಣ ಸಮಾಜದ ದೂರಿನ ಅನ್ವ​ಯ, ನಂದಕುಮಾರ್‌ ವಿರುದ್ಧ ಪೊಲೀ​ಸರು ಪ್ರಕ​ರಣ ದಾಖ​ಲಿ​ಸಿ​ಕೊಂಡಿ​ದ್ದಾ​ರೆ.

 

‘ವಿದೇಶಿಯರಾದ ಬ್ರಾಹ್ಮಣರನ್ನು ಬಹಿಷ್ಕರಿಸಬೇಕು. ಬ್ರಾಹ್ಮಣರನ್ನು ಗ್ರಾಮಗಳಿಗೆ ಬಿಟ್ಟುಕೊಳ್ಳಬಾರದು. ಅಲ್ಲದೆ ಅವರನ್ನು ದೇಶದಿಂದಲೇ ಹೊರಹಾಕಬೇಕು’ ಎಂದು ನಂದ ಕುಮಾರ್‌ ಬಾಘೇಲ್‌(86) ಅವರು ಜನರಿಗೆ ಕರೆ ನೀಡಿದ್ದಾರೆ. ಈ ಕುರಿತ ವಿಡಿ​ಯೋ ಸಾಮಾ​ಜಿಕ ಮಾಧ್ಯ​ಮ​ದ​ಲ್ಲ​ದೆ’ ಎಂದು ಸರ್ವ ಬ್ರಾಹ್ಮಣ ಸಮಾಜ ದೂರಿದೆ.

ಈ ಬಗ್ಗೆ ಸಿಎಂ ಭೂಪೇಶ್‌ ಪ್ರತಿ​ಕ್ರಿ​ಯಿ​ಸಿದ್ದು, ‘ಸಮುದಾಯವೊಂದರ ಕುರಿತಾಗಿ ತಮ್ಮ ತಂದೆ ನೀಡಿದ ಹೇಳಿಕೆಯಿಂದ ನೋವಾಗಿದ್ದು, ಅವರ ವಿರುದ್ಧ ನಮ್ಮ ಸರ್ಕಾರ ಮತ್ತು ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ’ ಎಂದಿ​ದ್ದಾ​ರೆ.

ಭೂಪೇಶ್‌ ಬಾಘೇಲ್‌ ಅವರ ತಂದೆ ಈ ಹಿಂದೆ ಶ್ರೀರಾಮನ ಕುರಿತಾಗಿಯೂ ಇದೇ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

Follow Us:
Download App:
  • android
  • ios