ಸರಕು ಮತ್ತು ಸೇವಾ ತೆರಿಗೆಯ ಸ್ತರ ಬದಲಾವಣೆಯ ಬಗ್ಗೆ ಪ್ರಕಟಿಸುವ ವೇಳೆ ಬಾಯ್ತಪ್ಪಿನಿಂದ ಕುದುರೆ ರೇಸ್ ಎನ್ನುವ ಬದಲು ಕುದುರೆ ವ್ಯಾಪಾರ ಎಂದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ವಿಪಕ್ಷ ಟೀಕೆ
ನವದೆಹಲಿ(ಜು.1): ಸರಕು ಮತ್ತು ಸೇವಾ ತೆರಿಗೆಯ ಸ್ತರ ಬದಲಾವಣೆಯ ಕುರಿತಾಗಿ ಪ್ರಕಟಿಸುವ ವೇಳೆ ಬಾಯ್ತಪ್ಪಿನಿಂದ ಕುದುರೆ ರೇಸ್ ಎನ್ನುವ ಬದಲು ಕುದುರೆ ವ್ಯಾಪಾರ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ ಘಟನೆ ನಡೆದಿದೆ. ಈ ವಿಡಿಯೋದಲ್ಲಿ ‘ಜಿಎಸ್‌ಟಿ ಕುರಿತಾದ ಮಂತ್ರಿಗಳ ಎರಡನೇ ಸಭೆ, ಬೆಟ್ಟಿಂಗ್, ಗ್ಯಾಂಬ್ಲಿಂಗ್, ಕ್ಯಾಸಿನೋ, ಹಾರ್ಸ್ ಟ್ರೇಡಿಂಗ್ (ಕುದುರೆ ವ್ಯಾಪಾರ)ಕ್ಕೆ ಶೇ.28ರಷ್ಟುಜಿಎಸ್ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ತಕ್ಷಣವೇ ಕುದುರೆ ವ್ಯಾಪಾರ ಎನ್ನುವುದನ್ನು ಕುದುರೆ ರೇಸಿಂಗ್ ಎಂದು ಬದಲಾಯಿಸಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ‘ನಿರ್ಮಲಾ ಸೀತಾರಾಮನ್ ಅವರಿಗೆ ಮಾತ್ರ ಚೌಕಟ್ಟಿನಿಂದಾಚೆಗೆ ಯೋಚಿಸಲು ಸಾಧ್ಯವಿದೆ ಎಂದು ನನಗೆ ಅನ್ನಿಸುತ್ತದೆ. ಹೌದು ನಿರ್ಮಲಾ ಅವರೇ ಕುದುರೆ ವ್ಯಾಪಾರಕ್ಕೆ ಜಿಎಸ್‌ಟಿ ವಿಧಿಸಲೇ ಬೇಕು’ ಎಂದು ವ್ಯಂಗ್ಯ ಮಾಡಿದ್ದಾರೆ.
4ದಿನಕ್ಕೆ ಕೆಲಸ ಕಡಿತ ಸೇರಿದಂತೆ ಜುಲೈ 1 ರಿಂದ ದೇಶದಲ್ಲಿ ಹಲವು ಮಹತ್ವದ ಬದಲಾವಣೆ
ಜಿಎಸ್ ಟಿ ದರ ಪರಿಷ್ಕರಣೆ; ಯಾವುದು ದುಬಾರಿ, ಯಾವುದು ಅಗ್ಗ?: ಸರಕು ಮತ್ತು ಸೇವಾ ತೆರಿಗೆಗಳ ಮಂಡಳಿ (GST Council) 47ನೇ ಸಭೆಯಲ್ಲಿ ಇನ್ನೂ ಹೆಚ್ಚಿನ ಸರಕುಗಳನ್ನು (Goods) ತೆರಿಗೆ (Tax) ವ್ಯಾಪ್ತಿಗೆ ತರುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದು ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ.
ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ನೇತೃತ್ವದಲ್ಲಿ ನಡೆದ ಜಿಎಸ್ ಟಿ ಮಂಡಳಿ (GST Council) ಸಭೆಯಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಧಾನ್ಯಗಳು (Cereals) ಸೇರಿದಂತೆ ಪ್ಯಾಕ್ ಮಾಡಲಾಗದ ವಸ್ತುಗಳಿಗೂ ಇನ್ನು ಮುಂದೆ ಪ್ಯಾಕ್ ಮಾಡಿದಾಗ ವಿಧಿಸಲಾಗುವ ದರದ ಜಿಎಸ್ ಟಿಯೇ ಅನ್ವಯಿಸಲಿದೆ. ಕೆಲವು ವಸ್ತುಗಳ ಮೇಲಿನ ಜಿಎಸ್ ಟಿ ದರದಲ್ಲಿ ಏರಿಕೆ ಮಾಡಲಾಗಿದೆ. ಇನ್ನು ಈ ತನಕ ತೆರಿಗೆ ವಿನಾಯ್ತಿ ಪಡೆದ ವಸ್ತುಗಳಿಗೆ ಶೇ.5ರಷ್ಟು ಜಿಎಸ್ ಟಿ ವಿಧಿಸಲಾಗಿದೆ.
ಜುಲೈ 18ರಿಂದ ಜಾರಿಗೆ
ತೆರಿಗೆ ವಿನಾಯ್ತಿ ಹಾಗೂ ಪರಿಷ್ಕರಣೆಗೆ ಸಂಬಂಧಿಸಿದ ಜಿಎಸ್ ಟಿ ಮಂಡಳಿ ನಿರ್ಧಾರಗಳು ಜುಲೈ 18ರಿಂದ ಜಾರಿಗೆ ಬರಲಿವೆ' ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ತಿಳಿಸಿದ್ದಾರೆ.
ಈ ವಸ್ತುಗಳು ಇನ್ಮುಂದೆ ದುಬಾರಿ
ಪ್ಯಾಕ್ ಮಾಡಿದ ಆಹಾರ ಪದಾರ್ಥಗಳು: ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ಜಿಎಸ್ ಟಿ ವ್ಯಾಪ್ತಿಯೊಳಗೆ ತರುವ ಶಿಫಾರಸ್ಸನ್ನು ಜಿಎಸ್ ಟಿ ಸಮಿತಿ ಸ್ವೀಕರಿಸಿದೆ. ಪ್ಯಾಕ್ ಆಗಿರುವ (Pre-packed) ಹಾಗೂ ಲೇಬಲ್ ಹೊಂದಿರುವ (labelled) ಆಹಾರ ಪದಾರ್ಥಗಳಾದ ಮಾಂಸ (meat), ಮೀನು (fish), ಮೊಸರು (curd), ಪನ್ನೀರ್ (paneer),ಜೇನುತುಪ್ಪ(honey),ಒಣ ದ್ವಿದಳ ಧಾನ್ಯ,ಒಣ ಫಾಕ್ಸ್ ಸೀಡ್ ಅಥವಾ ಮಖಾನ (ತಾವರೆ ಬೀಜ),ಗೋಧಿ ಹಾಗೂ ಇತರ ಧಾನ್ಯಗಳು, ಗೋಧಿ ಹಿಟ್ಟು, ಬೆಲ್ಲ ಮತ್ತು ಮಂಡಕ್ಕಿ ಮೇಲೆ ಶೇ.5ರಷ್ಟು ಜಿಎಸ್ ಟಿ ವಿಧಿಸಲಾಗಿದೆ.
LPG Cylinder Price Cut:ಎಲ್ ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್; ಸಿಲಿಂಡರ್ ಬೆಲೆಯಲ್ಲಿ 198ರೂ
ಬ್ಯಾಂಕ್ ಚೆಕ್ ಪುಸ್ತಕ: ಚೆಕ್ ವಿತರಣೆಗೆ (ಬಿಡಿ ಅಥವಾ ಪುಸ್ತಕ ರೂಪದಲ್ಲಿ) ಬ್ಯಾಂಕುಗಳು ವಿಧಿಸುವ ಶುಲ್ಕದ ಮೇಲೆ ಶೇ.18ರಷ್ಟು ಜಿಎಸ್ ಟಿ (GST) ವಿಧಿಸಲು ಜಿಎಸ್ ಟಿ ಮಂಡಳಿ ನಿರ್ಧರಿಸಿದೆ.
ಹೋಟೆಲ್ ರೂಮ್ ಗಳು: ದಿನವೊಂದಕ್ಕೆ 1,000ರೂ.ಗಿಂತ ಕಡಿಮೆ ಬಾಡಿಗೆ ಹೊಂದಿರುವ ಹೋಟೆಲ್ ರೂಮ್ ಗಳಿಗೂ ಶೇ.12 ಜಿಎಸ್ ಟಿ ( GST) ವಿಧಿಸಲಾಗೋದು.
ಆಸ್ಪತ್ರೆ ಬೆಡ್ ಗಳು: ರೋಗಿಯೊಬ್ಬನಿಗೆ ಆಸ್ಪತ್ರೆ ರೂಮ್ ಬಾಡಿಗೆ ದಿನಕ್ಕೆ 5000ರೂ. ಮೀರಿದ್ರೆ ಆ ಮೊತ್ತಕ್ಕೆ ಶೇ. 5ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಎಲ್ ಇಡಿ ಲೈಟ್ಸ್, ಲ್ಯಾಂಪ್ಸ್: ಎಲ್ ಇಡಿ ಲೈಟ್ ಗಳು, ಲ್ಯಾಂಪ್ ಗಳು, ಫಿಕ್ಸ್ ಚರ್ಸ್ ಗಳ ಮೇಲಿನ ಜಿಎಸ್ ಟಿಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ.
ಚಾಕುಗಳು: ಕಟ್ಟಿಂಗ್ ಬ್ಲೇಡ್ ಗಳನ್ನು ಹೊಂದಿರುವ ಚಾಕುಗಳು, ಪೇಪರ್ ಕತ್ತರಿಸುವ ಚಾಕುಗಳು, ಪೆನ್ಸಿಲ್ ಶಾರ್ಪನರ್, ಬ್ಲೇಡ್ಸ್, ಸ್ಪೂನ್ಸ್, ಫೋರ್ಕ್ಸ್, ಲೋಟಗಳು, ಸ್ಕಿಮ್ಮರ್, ಕೇಕ್ ಸರ್ವರ್ ಇತ್ಯಾದಿಗಳ ಮೇಲಿನ ಜಿಎಸ್ ಟಿ ಕೂಡ ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ.
ಪಂಪ್ಸ್ ಹಾಗೂ ಯಂತ್ರಗಳು: ನೀರೆತ್ತುವ ಪಂಪು, ಕೊಳವೆ ಬಾವಿ ಪಂಪ್, ಸಬ್ ಮರ್ಸಿಬಲ್ ಪಂಪ್ಸ್, ಬೈಸೈಕಲ್ ಪಂಪ್ಸ್ ಮೇಲಿನ ಜಿಎಸ್ ಟಿಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. ಬೀಜಗಳು, ಧಾನ್ಯಗಳನ್ನು ಸ್ವಚ್ಛಗೊಳಿಸುವ, ಬೇರ್ಪಡಿಸುವ ಅಥವಾ ವರ್ಗೀಕರಿಸುವ ಯಂತ್ರಗಳು, ಧಾನ್ಯಗಳನ್ನು ಹಿಟ್ಟು ಮಾಡಲು ಮಿಲ್ಲುಗಳಲ್ಲಿ ಬಳಸುವ ಯಂತ್ರಗಳ ಮೇಲಿನ ಜಿಎಸ್ ಟಿಯನ್ನು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ.
ಅಗ್ಗವಾದ ವಸ್ತುಗಳು
ರೋಪ್ ವೇ ರೈಡ್ಸ್: ರೋಪ್ ವೇಗಳ ಮೂಲಕ ಸರಕುಗಳು ಹಾಗೂ ಪ್ರಯಾಣಿಕರನ್ನು ಸಾಗಣೆ ಮಾಡುವ ಸಾರಿಗೆ ಮೇಲಿನ ಜಿಎಸ್ ಟಿ ದರಗಳನ್ನು ಜಿಎಸ್ ಟಿ ಮಂಡಳಿ ಶೇ.18ರಿಂದ ಶೇ.5ಕ್ಕೆ ಇಳಿಕೆ ಮಾಡಿದೆ.
ಸರಕು ಸಾಗಣೆ ಬಾಡಿಗೆ: ಅಟೋ, ಗೂಡ್ಸ್ ಸೇರಿದಂತೆ ಸರಕು ಸಾಗಣೆ ವಾಹನಗಳ ಬಾಡಿಗೆ ಮೇಲಿನ ಜಿಎಸ್ ಟಿಯನ್ನು ಶೇ.18ರಿಂದ ಶೇ.12ಕ್ಕೆ ಇಳಿಸಲಾಗಿದೆ.
ಮೂಳೆ ಚಿಕಿತ್ಸೆ ಉಪಕರಣಗಳು: ಸ್ಪ್ಲಿಂಟ್ ಗಳು ಹಾಗೂ ಮೂಳೆ ಮುರಿತದ ಚಿಕಿತ್ಸೆಗೆ ಬಳಸುವ ಇತರ ಉಪಕರಣಗಳ ಮೇಲಿನ ಜಿಎಸ್ ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿದೆ.
ರಕ್ಷಣಾ ಸಲಕರಣೆಗಳು: ಖಾಸಗಿ ಸಂಸ್ಥೆಗಳು/ ಮಾರಾಟಗಾರರಿಂದ ಆಮದು ಮಾಡಿಕೊಂಡ ನಿರ್ದಿಷ್ಟ ರಕ್ಷಣಾ ವಸ್ತುಗಳ ಮೇಲೆ ಜಿಎಸ್ ಟಿ ವಿನಾಯಿತಿ ನೀಡಲಾಗಿದೆ.
