ಟೊಮೆಟೊ ಬೆಲೆ ತಗ್ಗಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಸ್ಟರ್ ಪ್ಲ್ಯಾನ್
ದೇಶದಲ್ಲಿ ಕಳೆದೆರಡು ತಿಂಗಳಿಂದ ಉತ್ತುಂಗದಲ್ಲಿರುವ ಟೊಮೆಟೊ ಬೆಲೆಯನ್ನು ತಗ್ಗಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಸ್ಟರ್‌ಪ್ಲ್ಯಾನ್ ಸಿದ್ಧಪಡಿಸಿದ್ದಾರೆ.
ನವದೆಹಲಿ (ಆ.10): ತರಕಾರಿಗಳ ರಾಣಿ ಎಂದೇ ಹೇಳಲಾಗುವ ಕೆಂಪು ಸುಂದರಿ ಟೊಮೆಟೊ ಬೆಲೆ ಇಡೀ ದೇಶದಲ್ಲಿ ಪ್ರತಿ ಕೆ.ಜಿ. ಟೊಮೆಟೊಗೆ 100 ರೂ. ಗಡಿ ದಾಟಿ ಈಗಾಗಲೇ ಎರಡು ತಿಂಗಳು ಕಳೆಯುತ್ತಾ ಬಂದಿದೆ. ಈಗಾಗಲೇ ಸರ್ಕಾರದಿಂದ 80 ರೂ. ಕೆ.ಜಿ ,ಆರಾಟ ಮಾಡುವ ಕೇಂದ್ರಗಳನ್ನು ತೆರೆಯಲಾಗಿದೆ. ಆದರೂ, ಟೊಮೆಟೊ ಬೆಲೆ ನಿಯಂತ್ರಣ ಬಾರದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟೊಮೆಟೊ ಬೆಲೆಯನ್ನು ನಿಯಂತ್ರಣ ಮಾಡಲು ಹೊಸ ಪ್ಲ್ಯಾನ್ ಸಿದ್ಧಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಮಾತ್ರವಲ್ಲದೇ ದೇಶದ ಎಲ್ಲ ರಾಜ್ಯಗಳಲ್ಲಿಯೂ ಟೊಮೆಟೊ ಬೆಲೆ ಗಗನಕ್ಕೇರಿದೆ. ಸೇಬಿ ಹಣ್ಣು ಕೊಂಡು ತಿನ್ನಬಹುದು ಆದರೆ, ಟೊಮೆಟೊ ಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ಟೊಮೆಟೊ ಬೆಲೆ 10 ರೂ.ನಿಂದ 20 ರೂ.ವರೆಗೆ ಮಾರಾಟ ಆಗುತ್ತಿದೆ. ಇನ್ನು ಪ್ರತಿ ಕೆ.ಜಿ. ಟೊಮೆಟೊ ಬೆಲೆ 100 ರೂ.ನಿಂದ 160 ರೂ.ಗೆ ಮಾರಾಟ ಆಗುತ್ತಿದೆ. ಇಷ್ಟೊಂದು ಬೆಲೆ ಏರಿಕೆ ಆಗುವುದಕ್ಕೆ ಕಾರಣವೂ ಎಲ್ಲರಿಗೆ ತಿಳಿದಿರುವ ವಿಚಾರವಾಗಿದೆ. ಅದೇನೆಂದರೆ ಇತ್ತೀಚೆಗೆ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಸುರಿದ ಭಾರಿ ಮಳೆಯಿಂದ ಟೊಮೆಟೊ ಬೆಳೆ ನಷ್ಟವಾಗಿತ್ತು. ಇದರಿಂದ ಕರ್ನಾಟಕ ಸೇರಿ ಎಲ್ಲ ಕಡೆಗಳಿಂದ ಟೊಮೆಟೊಗೆ ಭಾರಿ ಬೇಡಿಕೆ ಉಂಟಾಗಿದ್ದು, ಎರಡು ತಿಂಗಳ ಹಿಂದೆ ಕೇವ 20 ರೂ.ಗೆ ಮಾರಾಟ ಆಗುತ್ತಿದ್ದ ಟೊಮೆಟೊ 200 ರೂ. ಗಡಿಯನ್ನು ದಾಟಿತ್ತು.
ಇಲ್ಲಿದೆ ನೋಡಿ ಮಾಸ್ಟರ್ ಪ್ಲ್ಯಾನ್: ದೇಶದಲ್ಲಿ ಮೊದಲ ಬಾರಿ ಟಮೋಟಾ ಬೆಲೆ ಏರಿಕೆ ನಿಯಂತ್ರಣಕ್ಕೆ ನೇರವಾಗಿ ಮುಂದಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಟೊಮೆಟೊ ಬೆಲೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳು ಕೈಗೊಳ್ಳಲಾಗಿದೆ ಎಂದು ಲೋಕಸಭೆಯಲ್ಲಿ ತಿಳಿಸಿದ್ದಾರೆ. ನಮ್ಮ ನೆರೆಹೊರೆ ದೇಶದವಾದ ನೇಪಾಳದಿಂದ ಟೊಮೆಟೊವನ್ನು ಆಮದು ಮಾಡಿಕೊಳ್ಳಾಗುತ್ತಿದೆ. ಈಗಾಗಲೇ ಮಾತುಕತೆಯನ್ನೂ ನಡೆಸಲಾಗಿದ್ದು, ಟೊಮೆಟೊ ಸರಬರಾಜಿಗೆ ಒಪ್ಪಂದವೂ ಪೂರ್ಣಗೊಂಡಿದೆ. ನಾಳೆ (ಶುಕ್ರವಾರ) ಸಂಜೆಯೊಳಗೆ ಉತ್ತರ ಪ್ರದೇಶಕ್ಕೆ ಟೊಮೆಟೊ ತಲುಪಲಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ಕೆರೆಗಳ ನೀರನ್ನು ಕುಡಿಯುವುದಕ್ಕೆ ಪೂರೈಸಲು ಜಲಮಂಡಳಿ ಚಿಂತನೆ: ನಿಮ್ಮ ಅಭಿಪ್ರಾಯವೇನು?
ಕೋಲಾರ, ಮಂಡ್ಯ ಮಾರುಕಟ್ಟೆಗಳಿಂದ ಸಗಟು ಬೆಲೆಯಲ್ಲಿ ಖರೀದಿಸಿ ದೆಹಲಿಗೆ ಪೂರೈಕೆ: ಕರ್ನಾಟಕದ ತರಕಾರಿ ಬೆಳೆಯುವ ಪ್ರದೇಶಗಳಾಗಿರುವ ಕೋಲಾರ ಮತ್ತು ಮಂಡ್ಯ ಜಿಲ್ಲೆಗಳಿಂದ ಸಗಟು ದರದಲ್ಲಿ ಟೊಮೆಟೊ ಖರೀದಿ ಮಾಡಿ ದೆಹಲಿಯ ವಿವಿಧ ಭಾಗಗಳಲ್ಲಿ ಮಾರಾಟ ಮಾಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಕರ್ನಾಟಕ ಹಾಗೂ ಆಂಧ್ರ ಪ್ರದೇಶದಲ್ಲಿ ಹೊಸ ಟೊಮೆಟೊ ಬೆಳೆಗಳು ಬಂದಿರುವ ಹಿನ್ನೆಲೆಯಲ್ಲಿ ಟೊಮೆಟೊ ಬೆಲೆಯಲ್ಲಿ ಇಳಿಮುಖ ಕಾಣುತ್ತಿದೆ. ಎಮ್ ಸಿಸಿ ಯಿಂದ ದೆಹಲಿಯಲ್ಲಿ ಕೇವಲ 70 ರೂ ಬೆಲೆಗೆ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.