ಆಕಾಶದಲ್ಲಿ ಯುದ್ಧ ವಿಮಾನ 'ತೇಜಸ್' ಸಾಹಸ ಅಸ್ತ್ರ ಕ್ಷಿಪಣಿ ಪರೀಕ್ಷೆ ಯಶಸ್ವಿ: ವಿಡಿಯೋ
ಸ್ವದೇಶಿ ನಿರ್ಮಿತ ‘ತೇಜಸ್’ ಯುದ್ಧ ವಿಮಾನ ‘ಅಸ್ತ್ರ’ ಕ್ಷಿಪಣಿಯ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆ ನಡೆದಿಸಿದೆ ಆಗಸದಿಂದ ಆಗಸಕ್ಕೆ ಹಾರುವ ಈ ಕ್ಷಿಪಣಿಯನ್ನು ಯುದ್ಧವಿಮಾನದಿಂದ ಚಿಮ್ಮಿಸಿ 20 ಸಾವಿರ ಅಡಿ ಎತ್ತರದ ಮೇಲೆ ಹಾರಿಸಲಾಯಿತು.
ನವದೆಹಲಿ: ಸ್ವದೇಶಿ ನಿರ್ಮಿತ ‘ತೇಜಸ್’ ಯುದ್ಧ ವಿಮಾನ ‘ಅಸ್ತ್ರ’ ಕ್ಷಿಪಣಿಯ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆ ನಡೆದಿಸಿದೆ ಆಗಸದಿಂದ ಆಗಸಕ್ಕೆ ಹಾರುವ ಈ ಕ್ಷಿಪಣಿಯನ್ನು ಯುದ್ಧವಿಮಾನದಿಂದ ಚಿಮ್ಮಿಸಿ 20 ಸಾವಿರ ಅಡಿ ಎತ್ತರದ ಮೇಲೆ ಹಾರಿಸಲಾಯಿತು. ಗೋವಾ ಕರಾವಳಿಯಲ್ಲಿ ನಿನ್ನೆ ಈ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಡಿಆರ್‌ಡಿಒ, ಎಚ್‌ಎಎಲ್ ಸೇರಿದಂತೆ ರಕ್ಷಣಾ ಸಚಿವಾಲಯದ ವಿವಿಧ ಘಟಕಗಳು ಪರೀಕ್ಷೆಯ ಮೇಲುಸ್ತುವಾರಿ ವಹಿಸಿದ್ದವು. ಈ ಯಶಸ್ಸಿನಿಂದ ತೇಜಸ್ ಸಮರ ಶಕ್ತಿ ಇನ್ನಷ್ಟು ಹೆಚ್ಚಲಿದೆ ಎಂದು ಅದು ಹರ್ಷಿಸಿದೆ.