ಅಮೆರಿಕದ ಅಧ್ಯಕ್ಷರಾದ ಬಳಿಕ ಡೊನಾಲ್ಡ್ ಟ್ರಂಪ್‌ಗೆ ಭಾರೀ ಹಿನ್ನಡೆಯಾಗಿದೆ. ಸಮಾನತೆಯ ತತ್ವವನ್ನು ಉಲ್ಲೇಖಿಸಿ ಫೆಡರಲ್ ನ್ಯಾಯಾಧೀಶರು ಟ್ರಂಪ್ ಆಡಳಿತದ ಆದೇಶವನ್ನು ತಡೆದಿದ್ದಾರೆ.
USA News: ಅಮೆರಿಕದ ಅಧ್ಯಕ್ಷರಾದ ಬಳಿಕ ಡೊನಾಲ್ಡ್ ಟ್ರಂಪ್ ಹಲವು ವಿವಾದಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಈಗ ಡೊನಾಲ್ಡ್ ಟ್ರಂಪ್‌ಗೆ ಹಿನ್ನಡೆಯಾಗಿದೆ. ಅಮೆರಿಕದ ಸೇನೆಯಲ್ಲಿ ತೃತೀಯ ಲಿಂಗಿ ಸಮುದಾಯದ ನೇಮಕಾತಿಯನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದರು. ಆದಾಗ್ಯೂ, ಮಂಗಳವಾರ (ಮಾರ್ಚ್ 18) ಫೆಡರಲ್ ನ್ಯಾಯಾಧೀಶರು ಟ್ರಂಪ್ ಆಡಳಿತದ ನಿಷೇಧವನ್ನು ತಡೆಹಿಡಿದು, ಸಮಾನತೆಯ ತತ್ವವನ್ನು ಉಲ್ಲೇಖಿಸಿ, ಆ ಮೂಲಕ ಆದೇಶವನ್ನು ಅಮಾನತುಗೊಳಿಸಿದ್ದಾರೆ..
ಅಮೆರಿಕದ ಸ್ವಾತಂತ್ರ್ಯ ಘೋಷಣೆಯನ್ನು ಉಲ್ಲೇಖಿಸಿದ ನ್ಯಾಯಾಧೀಶರು. ಎಲ್ಲ ಮಾನವರನ್ನು ಸಮಾನರಾಗಿ ಸೃಷ್ಟಿಸಲ್ಪಟ್ಟಿದೆ. ಈ ರೀತಿಯ ಜನಾಂಗೀಯ ಆಧಾರದ ಮೇಲೆ ನಿಷೇಧ ಸರಿಯಲ್ಲವೆಂದು ಜನವರಿ ಅಂತ್ಯದಲ್ಲಿ ಅಧ್ಯಕ್ಷ ಟ್ರಂಪ್ ನೀಡಿದ್ದ ಆದೇಶಕ್ಕೆ ನ್ಯಾಯಾಧೀಶರು ತಡೆ ನೀಡಿದ್ದಾರೆ.
ನ್ಯಾಯಾಲಯ ಹೀಗೆ ಹೇಳಿದೆ?
ಮಂಗಳವಾರ ಅಮೆರಿಕದ ಜಿಲ್ಲಾ ನ್ಯಾಯಾಧೀಶೆ ಅನಾ ರೆಯೆಸ್ ಅವರು ಟಾಲ್ಬೋಟ್ ವಿರುದ್ಧ ಟ್ರಂಪ್ ಪ್ರಕರಣದಲ್ಲಿ ತಮ್ಮ ತೀರ್ಪು ಪ್ರಕಟಿಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು, ಸರ್ಕಾರದ ಈ ನೀತಿಯು ಟ್ರಾನ್ಸ್ಜೆಂಡರ್ ಸಮುದಾಯದ ಸೇವಾ ಸದಸ್ಯರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಅಂತಹ ನಿಷೇಧವನ್ನು ವಿಧಿಸುವುದರಿಂದ ಯಾವುದೇ ಕಾನೂನುಬದ್ಧ ಮಿಲಿಟರಿ ಉದ್ದೇಶ ಈಡೇರುತ್ತದೆ ಎಂಬುದನ್ನು ಸಾಬೀತುಪಡಿಸುವಲ್ಲಿ ಸರ್ಕಾರ ಯಶಸ್ವಿಯಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಟ್ರಂಪ್ ಆಡಳಿತದಿಂದ ಹೊಸ ಪ್ರಯಾಣ ನಿಷೇಧ? ಈ ಮುಸ್ಲಿಂ ರಾಷ್ಟ್ರಗಳಿಗೆ ಸಂಪೂರ್ಣ ನಿಷೇಧ, ಇಲ್ಲಿವೆ 41 ದೇಶಗಳ ಪಟ್ಟಿ!
ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದೇಕೆ?
20 ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಪರವಾಗಿ GLAD ಲಾ ಮತ್ತು ರಾಷ್ಟ್ರೀಯ ಲೆಸ್ಬಿಯನ್ ಹಕ್ಕುಗಳ ಕೇಂದ್ರವು ಈ ಪ್ರಕರಣವನ್ನು ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು ಎಂದು ದಿ ಅಡ್ವೋಕೇಟ್ ವರದಿ ಮಾಡಿದೆ. ಈ 20 ಜನರು ಈಗಾಗಲೇ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಅಥವಾ ಅದಕ್ಕೆ ಸೇರಲು ತಯಾರಿ ನಡೆಸುತ್ತಿದ್ದರು. ಈ ನ್ಯಾಯಾಲಯದ ತೀರ್ಪು, ಸೈನ್ಯದಿಂದ ಟ್ರಾನ್ಸ್ಜೆಂಡರ್ ಸೈನಿಕರನ್ನು ತೆಗೆದುಹಾಕುವ ಟ್ರಂಪ್ ಆಡಳಿತದ ಪ್ರಯತ್ನಗಳಿಗೆ ದೊಡ್ಡ ಹಿನ್ನಡೆಯಾಗಿದೆ ಮಿಲಿಟರಿ ಸನ್ನದ್ಧತೆ, ಘಟಕ ಒಗ್ಗಟ್ಟು ಮತ್ತು ವೆಚ್ಚವನ್ನು ಕಡಿಮೆ ಮಾಡಲು ನಿಷೇಧ ಅಗತ್ಯ ಎಂದು ಟ್ರಂಪ್ ಆಡಳಿತ ವಾದಿಸಿತು. ಆದರೆ ನ್ಯಾಯಾಧೀಶೆ ಅನಾ ರೇಯಸ್ ಈ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದರು.
2016 ರಲ್ಲಿ ತೃತೀಯ ಲಿಂಗಿ ಸೈನಿಕರಿಗೆ ಸೇವೆ ಸಲ್ಲಿಸಲು ಅವಕಾಶ
2016 ರಲ್ಲಿ, ರಕ್ಷಣಾ ಇಲಾಖೆಯ ನೀತಿಯು ತೃತೀಯ ಲಿಂಗಿ ಸೈನಿಕರಿಗೆ ಬಹಿರಂಗವಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು. ಆದಾಗ್ಯೂ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯಲ್ಲಿ, ಅವರು ತೃತೀಯ ಲಿಂಗಿ ಸೈನಿಕರನ್ನು ನಿಷೇಧಿಸಿದರು, ನಂತರ ಸುಪ್ರೀಂ ಕೋರ್ಟ್ ಅನುಮೋದಿಸಿತು. ಇದರ ನಂತರ, ಅಧ್ಯಕ್ಷ ಜೋ ಬಿಡೆನ್ ಅಧಿಕಾರ ವಹಿಸಿಕೊಂಡ ತಕ್ಷಣ ಈ ನಿಷೇಧವನ್ನು ತೆಗೆದುಹಾಕಿದ್ದರು. ಇದೀಗ ಮತ್ತೆ ಟ್ರಂಪ್ ನಿರ್ಧಾರವನ್ನು ನ್ಯಾಯದೀಶರು ತಡೆಹಿಡಿದಿದ್ದಾರೆ.
