ಕೋವಿಡ್‌ಗೆ ಹೆದರಿ ಕಳೆದ 15 ತಿಂಗಳಿನಿಂದ ಸ್ವಯಂ ಗೃಹಬಂಧನಕ್ಕೆ ಒಳಗಾಗಿದ್ದ  ಮೂವರು ಮಹಿಳೆಯರು ಆಂಧ್ರದ ಪೂರ್ವ ಗೋಧಾವರಿ ಜಿಲ್ಲೆಯ ಕಾಡಲಿ ಗ್ರಾಮದಲಗಲಿ ಘಟನೆ

ಆಂಧ್ರಪ್ರದೇಶ (ಜು.23): ಪೂರ್ವ ಗೋಧಾವರಿ ಜಿಲ್ಲೆಯ ಕಾಡಲಿ ಗ್ರಾಮದ ಕುಟುಂಬವೊಂದರ ಮೂವರು ಮಹಿಳೆಯರು, ಕೋವಿಡ್‌ಗೆ ಹೆದರಿ ಕಳೆದ 15 ತಿಂಗಳಿನಿಂದ ಸ್ವಯಂಗೃಹಬಂಧನಕ್ಕೆ ಒಳಗಾಗಿದ್ದ ಘಟನೆ ಬೆಳಕಿಗೆ ಬಂದಿದೆ. 

ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾಗಿದ್ದ ಮನೆಯ ದಾಖಲಾತಿಗೆ ಸಹಿ ಪಡೆಯಲು ಅಧಿಕಾರಿಯೊಬ್ಬರು ಮನೆಯ ಬಳಿ ಬಂದಾಗ ವಿಷಯ ಬೆಳಕಿಗೆ ಬಂದಿದೆ. 

ಸೋಂಕು ಇಳಿದರೂ ಸಾವು ಇಳಿಯುತ್ತಿಲ್ಲ : ಮರಣ ದರ ಹೆಚ್ಚಳಕ್ಕೆ ಕಾರಣ ಏನು..?

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರು ಮನೆಯ ಬಳಿ ಬಂದು ಅವರನ್ನು ರಕ್ಷಿಸಿದ್ದಾರೆ. 15 ತಿಂಗಳುಗಳ ಕಾಲ ಮನೆಯಿಂದ ಆಚೆ ಬರದೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಹಳ ಕೃಶವಾಗಿದ್ದರು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರುಥಮ್ಮ(45), ಕಾಂತಾಮಣಿ(32) ಮತ್ತು ರಾಣಿ(30) ಎಂಬುವವರೇ ಹೆದರಿ ಮನೆಯಿಂದ ಹೊರಬಾರದೇ ಉಳಿದುಕೊಂಡ ಹೆಂಗಸರು.

 ಮನೆಯ ಯಜಮಾನ ಚಟ್ಟುಲ ಬೆನ್ನಿ (50), ಅವರ ಮಗ ಚಿನ್ನಬಾಬು(28) ಮಾತ್ರ ಮನೆಯಾಚೆ ಬಂದು ಕೆಲಸ ಮಾಡುತ್ತಿದ್ದ ಕಾರಣ ಯಾರಿಗೂ ಅನುಮಾನ ಬಂದಿರಲಿಲ್ಲ. ಕೋವಿಡ್‌ ರೋಗ ಬಂದರೆ ಸಾವು ಖಚಿತ ಎಂದು ನಂಬಿದ ಮನೆಯವರು ಹೊರಗೆ ಬರಲು ನಿರಾಕರಿಸಿ ಮನೆಯಲ್ಲೇ ಉಳಿದುಕೊಂಡಿದ್ದರು ಎಂದು ಅವರ ಮಗ ಹೇಳಿದ್ದಾಗಿ ಪೊಲೀಸರು ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona