ಸಿಬಿಐ ತನಿಖೆ ಭೀತಿ; ಹೊಸ ಮದ್ಯ ನೀತಿ ಕೈಬಿಟ್ಟ ದೆಹಲಿ ಸರ್ಕಾರ!

ಮನೀಶ್ ಸಿಸೋಡಿಯಾ ಅವರು ಮುಂದಿನ ಆರು ತಿಂಗಳ ಅವಧಿಗೆ ಅಬಕಾರಿ ನೀತಿಯಲ್ಲಿ ಹಳೆಯ ಪಾಲಿಸಿಯನ್ನು ಪಾಲನೆ ಮಾಡುವಂತೆ ಇಲಾಖೆಗೆ ಗುರುವಾರ ನಿರ್ದೇಶನ ನೀಡಿದ್ದಾರೆ.
 

Fear of  cbi enquiry Delhi Government To Go Back To Old Policy Of Retail Liquor Sale san

ನವದೆಹಲಿ (ಜುಲೈ 30): ಹೊಸ ಅಬಕಾರಿ ನೀತಿಯ ಅನುಷ್ಠಾನದ ಕುರಿತು ಸಿಬಿಐ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಶಿಫಾರಸು ಮಾಡಿರುವ ಬೆನ್ನಲ್ಲಿಯೇ, ನಗರದಲ್ಲಿ ಚಿಲ್ಲರೆ ಮದ್ಯ ಮಾರಾಟದ ಹಳೆಯ ಪದ್ಧತಿಗೆ ಮರಳಲು ದಿಲ್ಲಿ ಸರಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಮಾರ್ಚ್ 31 ರ ನಂತರ ತಲಾ ಎರಡು ತಿಂಗಳ ಅವಧಿಗೆ ಎರಡು ಬಾರಿ ವಿಸ್ತರಿಸಲಾದ ಅಬಕಾರಿ ನೀತಿ 2021-22 ಜುಲೈ 31 ರಂದು ಕೊನೆಗೊಳ್ಳಲಿದೆ. ಅಬಕಾರಿ ಇಲಾಖೆಯು ಇನ್ನೂ 2022-23 ಅಬಕಾರಿ ನೀತಿಯ ಕುರಿತಾಗಿ ಕೆಲಸ ಮಾಡುತ್ತಿದ್ದು, ಅದು ಇತರ ವಿಷಯಗಳ ಜೊತೆಗೆ, ದೆಹಲಿಯಲ್ಲಿ ಮದ್ಯವನ್ನು ಮನೆ ಬಾಗಿಲಿಗೆ ವಿತರಣೆಯನ್ನು ಶಿಫಾರಸು ಮಾಡುತ್ತದೆ. ಕರಡು ನೀತಿಯನ್ನು ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರ ಅನುಮೋದನೆಗಾಗಿ ಇನ್ನೂ ಕಳುಹಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಹೊಸ ನೀತಿ ಜಾರಿಯಾಗುವವರೆಗೆ ಆರು ತಿಂಗಳ ಅವಧಿಗೆ ಅಬಕಾರಿ ನೀತಿಯಲ್ಲಿ ಹಳೆಯ ಪಾಲಿಸಿಯನ್ನು ಪಾಲನೆ ಮುಂದುವರಿಸುವಂತೆ ಇಲಾಖೆಗೆ ಗುರುವಾರ ನಿರ್ದೇಶನ ನೀಡಿದ್ದಾರೆ. ಅಧಿಕೃತ ದಾಖಲೆಯ ಪ್ರಕಾರ, ಹೊಸ ಅಬಕಾರಿ ನೀತಿಯು 2021ರ ನವೆಂಬರ್ 17 ರಂದು ಜಾರಿಗೆ ಬರುವ ಮೊದಲು ದೆಹಲಿ ಸರ್ಕಾರದ ನಾಲ್ಕು ನಿಗಮಗಳ ಮುಖ್ಯಸ್ಥರೊಂದಿಗೆ ಅವರು ನಡೆಸುತ್ತಿರುವ ಮದ್ಯದ ಮಾರಾಟಗಳ ವಿವರಗಳನ್ನು ಸಮನ್ವಯಗೊಳಿಸುವಂತೆ ಹಣಕಾಸು ಇಲಾಖೆ ಅಬಕಾರಿ ಆಯುಕ್ತರಿಗೆ ನಿರ್ದೇಶನ ನೀಡಿತ್ತು.

ದೆಹಲಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (DSIIDC), ದೆಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ನಿಗಮ (DTTDC), ದೆಹಲಿ ಗ್ರಾಹಕರ ಸಹಕಾರ ಸಗಟು ಅಂಗಡಿ (DCCWS) ಮತ್ತು ದೆಹಲಿ ರಾಜ್ಯ ನಾಗರಿಕ ಸರಬರಾಜು ನಿಗಮ (DSCSC) ಈ ನಾಲ್ಕು ನಿಗಮಗಳು ಬಹುಪಾಲು ಮದ್ಯದ ವ್ಯವಹಾರವನ್ನು ಮೊದಲು ನಡೆಸುತ್ತಿದ್ದವು. ಹೊಸ ಅಬಕಾರಿ ನೀತಿ 2021-22 ರ  ಜಾರಿಗೆ ಬರುವುದರೊಂದಿಗೆ ರಿಟೇಲ್‌ ಮಾರಾಟವನ್ನು ದೆಹಲಿ ಸರ್ಕಾರ ತ್ಯಜಿಸುವುದರೊಂದಿಗೆ ಈ ನಾಲ್ಕು ನಿಗಮಗಳ ಅಧಿಕಾರವೂ ಕೊನೆಗೊಂಡಿತ್ತು.

ಸರ್ಕಾರದ ಅಬಕಾರಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ದೆಹಲಿ LG ಶಿಫಾರಸು!

ಬಿಡ್ಡಿಂಗ್ ಮೂಲಕ ನೀಡಿದ್ದ ಪರವಾನಗಿ: ಹೊಸ ನೀತಿಯ ಅಡಿಯಲ್ಲಿ, 849 ಮದ್ಯ ಮಾರಾಟದ ಪರವಾನಗಿಗಳನ್ನು ಖಾಸಗಿ ಸಂಸ್ಥೆಗಳಿಗೆ ಮುಕ್ತ ಬಿಡ್ಡಿಂಗ್ ಮೂಲಕ ನೀಡಲಾಯಿತು. ನಗರವನ್ನು 32 ವಲಯಗಳಾಗಿ ವಿಂಗಡಿಸಲಾಗಿದೆ ಮತ್ತು ಪ್ರತಿಯೊಂದೂ ಗರಿಷ್ಠ 27 ಮಾರಾಟಗಳನ್ನು ಹೊಂದಿದೆ. ವೈಯಕ್ತಿಕ ಪರವಾನಗಿಗಳ ಬದಲಿಗೆ, ಬಿಡ್ಡಿಂಗ್ ಅನ್ನು ವಲಯವಾರು ರೀತಿಯಲ್ಲಿ ಮತ್ತು ಪ್ರತಿ ಬಿಡ್‌ದಾರರು ಗರಿಷ್ಠ ಎರಡು ವಲಯಗಳಿಗೆ ಬಿಡ್ ಮಾಡಲು ಅವಕಾಶ ನೀಡಲಾಗಿತ್ತು. ಇದಕ್ಕೂ ಮುನ್ನ ದೆಹಲಿಯಲ್ಲಿನ ಒಟ್ಟು 864 ಮದ್ಯದಂಗಡಿಗಳಲ್ಲಿ ನಾಲ್ಕು ಸರ್ಕಾರಿ ನಿಗಮಗಳು 475 ಮದ್ಯದಂಗಡಿಗಳನ್ನು ನಡೆಸುತ್ತಿದ್ದವು. ಖಾಸಗಿ ಅಂಗಡಿಗಳು, ವ್ಯಕ್ತಿಗಳು ಹೊಂದಿರುವ ಪರವಾನಗಿಗಳು, ಸಂಖ್ಯೆ 389 ಆಗಿದ್ದವು.

ಈ ರಾಜ್ಯದಲ್ಲಿ ಮದ್ಯ ಶೇ. 20ರಷ್ಟು ಅಗ್ಗ, ಹೊಸ ನಿಯಮಕ್ಕೆ ಶೀಘ್ರವೇ ಕ್ಯಾಬಿನೆಟ್‌ ಅನುಮತಿ?

ಸಿಬಿಐ ತನಿಖೆಗೆ ಶಿಫಾರಸು: ಹಣಕಾಸು ಇಲಾಖೆಯು ಶುಕ್ರವಾರದೊಳಗೆ ಹಳೆಯ ಮಾರಾಟ ಮಳಿಗೆಗಳ ಸ್ಥಳ, ನಿಯೋಜಿಸಲಾದ ಸಿಬ್ಬಂದಿ ಸಂಖ್ಯೆ, ಬಾಡಿಗೆ ಅಥವಾ ಸರ್ಕಾರಿ ನಿವೇಶನಗಳ ವಿವರಗಳನ್ನು "ಅತ್ಯಂತ ಆದ್ಯತೆ" ವಿಷಯವಾಗಿ ಒದಗಿಸುವಂತೆ ಅಬಕಾರಿ ಇಲಾಖೆಯನ್ನು ಕೇಳಿದ್ದವು. ಈ ತಿಂಗಳ ಆರಂಭದಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರು ಅಬಕಾರಿ ನೀತಿಯ ಅನುಷ್ಠಾನದಲ್ಲಿ ನಿಯಮಗಳ ಉಲ್ಲಂಘನೆ ಮತ್ತು ಕಾರ್ಯವಿಧಾನದ ಲೋಪಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಆಪಾದಿತ ಅಕ್ರಮಗಳಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳ ಪಾತ್ರ ಮತ್ತು ಬಿಡ್ಡಿಂಗ್ ಮೂಲಕ ಚಿಲ್ಲರೆ ಮದ್ಯದ ಪರವಾನಗಿಗಳನ್ನು ನೀಡುವಲ್ಲಿ ಕಾರ್ಟೆಲೈಸೇಶನ್ ದೂರಿನ ಬಗ್ಗೆ ತನಿಖೆ ನಡೆಸುವಂತೆ ಅವರು ದೆಹಲಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದರು.

Latest Videos
Follow Us:
Download App:
  • android
  • ios