ನವದೆಹಲಿ(ಡಿ.25): 2021ರ ಜ.1ರಿಂದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯವಾಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಗುರುವಾರ ಹೇಳಿದ್ದಾರೆ. ವರ್ಚುವಲ್‌ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಜ.1ರಿಂದ ಫಾಸ್ಟ್‌ಟ್ಯಾಗ್‌ ಅನ್ನು ಕಡ್ಡಾಯಗೊಳಿಸಲಾಗುವುದು.

ಇದರಿಂದ ಟೋಲ್‌ ಪ್ಲಾಜಾಗಳಲ್ಲಿ ವಾಹನವನ್ನು ನಿಲ್ಲಿಸಿ ಹಣಪಾತಿಸಬೇಕಾದ ಅಗತ್ಯವಿಲ್ಲ. ಜೊತೆಗೆ ಸಮಯ ಮತ್ತು ಇಂಧನದ ಉಳಿತಾಯ ಆಗಲಿದೆ ಎಂದು ಹೇಳಿದ್ದಾರೆ. ಫಾಸ್ಟ್‌ಟ್ಯಾಗ್‌ ಅನ್ನು 2016ರಲ್ಲಿ ಬಿಡುಗಡೆ ಮಾಡಲಾಗಿತ್ತು.

ವಾಹನ ಮಾಲೀಕರೇ ಗಮನಿಸಿ: ಫಾಸ್ಟ್ಯಾಗ್‌ ಸ್ಟಿಕ್ಕರ್‌ ಫ್ರೀ

2019ರ ಅಕ್ಟೋಬರ್‌ 1ರಿಂದ ನ್ಯಾಷನಲ್‌ ಪರ್ಮಿಟ್‌ ಇರುವ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಅನ್ನು ಕಡ್ಡಾಯಗೊಳಿಸಲಾಗಿತ್ತು. ಅದೇ ರೀತಿ ಹೊಸದಾಗಿ ಥರ್ಡ್‌ ಪಾರ್ಟಿ ವಿಮೆ ಪಡೆಯಲು ಫಾಸ್ಟ್‌ಟ್ಯಾಗ್‌ ಅನ್ನು ಕಡ್ಡಾಯಗೊಳಿಸಲಾಗಿದ್ದು, ಈ ನಿಯಮ 2021ರ ಏಪ್ರಿಲ್‌ನಿಂದ ಜಾರಿಗೆ ಬರಲಿದೆ.

ಫಾಸ್ಟ್ ಟ್ಯಾಗ್ ಇಲ್ಲದ ಸವಾರರಿಗೆ ಕೊಂಚ ರಿಲೀಫ್ ನೀಡಿದ್ದ ಕೇಂದ್ರ ರಸ್ತೆ ಸಾರಿಗೆ ಇಲಾಖೆ,  ಫಾಸ್ಟ್ ಟ್ಯಾಗ್ ಅಳವಡಿಕೆಗೆ ಜ.15ವರೆಗೆ ಕಾಲಾವಕಾಶ ನೀಡಿತ್ತು.