ಕೇಂದ್ರದ 3 ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ| ಪಂಜಾಬಲ್ಲಿ ದಾಖಲೆ ಪ್ರಮಾಣದ ಟ್ರ್ಯಾಕ್ಟರ್‌ಗಳ ಸೇಲ್‌!

ನವದೆಹಲಿ(ಜ.27): ಕೇಂದ್ರದ 3 ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ಆರಂಭವಾದ ಬೆನ್ನಲ್ಲೇ, ಪಂಜಾಬ್‌ನಲ್ಲಿ ದಾಖಲೆ ಪ್ರಮಾಣದ ಟ್ರ್ಯಾಕ್ಟರ್‌ಗಳು ಖರೀದಿಯಾಗಿವೆ ಎಂಬ ವಿಚಾರ ಇದೀಗ ಗೊತ್ತಾಗಿದೆ.

ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಗಳಲ್ಲಿ ನವೆಂಬರ್‌ ತಿಂಗಳಲ್ಲಿ ರೈತರ ಪ್ರತಿಭಟನೆ ಆರಂಭವಾಯಿತು. ಡಿಸೆಂಬರ್‌ನಲ್ಲಿ ಟ್ರ್ಯಾಕ್ಟರ್‌ ಖರೀದಿಯಲ್ಲಿ ಭಾರೀ ಏರಿಕೆ ಕಂಡುಬಂದಿತ್ತು ಎನ್ನಲಾಗಿದೆ.

ಈ ಪ್ರಕಾರ ಪಂಜಾಬ್‌ನಲ್ಲಿ ಸೆಪ್ಟೆಂಬರ್‌ನಿಂದ 4 ತಿಂಗಳ ಅವಧಿಯಲ್ಲಿ 8900 ಟ್ರ್ಯಾಕ್ಟರ್‌ಗಳು ಮಾರಾಟವಾಗಿದ್ದು, ಈ ಪೈಕಿ ಡಿಸೆಂಬರ್‌ನಲ್ಲಿ ಹೆಚ್ಚು ಟ್ರ್ಯಾಕ್ಟರ್‌ಗಳು ಮಾರಾಟವಾಗಿವೆ. ಸೆಪ್ಟೆಂಬರ್‌ನಲ್ಲಿ ಶೇ.51.4, ಅಕ್ಟೋಬರ್‌ನಲ್ಲಿ ಶೇ. 13.41, ನವೆಂಬರ್‌ನಲ್ಲಿ ಶೇ.8.03 ಹಾಗೂ ಡಿಸೆಂಬರ್‌ನಲ್ಲಿ ಭರ್ಜರಿ ಶೇ.72ರಷ್ಟುಪ್ರಮಾಣದ ಟ್ರ್ಯಾಕ್ಟರ್‌ಗಳು ಮಾರಾಟವಾಗಿವೆ.