ಟೊಮೆಟೋ ಮಾರಿ 3 ಕೋಟಿ ಗಳಿಸಿದ ರೈತ..!

ಈಶ್ವರ್‌ ಮೇ ತಿಂಗಳಿನಲ್ಲಿ ಇದೇ ಟೊಮೆಟೋ ಬೆಳೆದು ಭಾರಿ ಪ್ರಮಾಣದ ನಷ್ಟ ಅನುಭವಿಸಿದ್ದರು. ಆದರೆ ಛಲ ಬಿಡದೇ ತಮ್ಮ 12 ಎಕರೆ ಜಮೀನಿನಲ್ಲಿ ಟೊಮೆಟೋವನ್ನೇ ಮುಂದುವರೆಸಿದರ ಪರಿಣಾಮ ಈಗ ಭಾರಿ ಗಳಿಕೆ ಕಂಡಿದ್ದಾರೆ. 

Farmer Who Earned 3 Crores by Selling Tomato at Pune in Maharashtra grg

ಪುಣೆ(ಜು.20):  ದೇಶಾದ್ಯಂತ ಗಗನ ದಿಕ್ಕಿನಲ್ಲಿರುವ ಟೊಮೆಟೊ ಬೆಲೆ ಜನರನ್ನು ತತ್ತರಿಸುವಂತೆ ಮಾಡಿದ್ದರೆ, ಪುಣೆಯ ರೈತರೊಬ್ಬರು ಟೊಮೆಟೋ ಮಾರಿ 2 ತಿಂಗಳಲ್ಲಿ 3 ಕೋಟಿ ರು. ಆದಾಯ ಗಳಿಸಿದ್ದಾರೆ. ಈಶ್ವರ್‌ ಗಾಯ್ಕರ್‌ ಎಂಬ ರೈತರು ಜೂನ್‌ನಿಂದ ಜುಲೈವರೆಗೆ ಮಾರಾಟ ಮಾಡಿದ ಟೊಮೆಟೋದಲ್ಲಿ ಒಟ್ಟು ಇಷ್ಟುಆದಾಯ ಕಂಡಿದ್ದಾರೆ.

ಈಶ್ವರ್‌ ಮೇ ತಿಂಗಳಿನಲ್ಲಿ ಇದೇ ಟೊಮೆಟೋ ಬೆಳೆದು ಭಾರಿ ಪ್ರಮಾಣದ ನಷ್ಟ ಅನುಭವಿಸಿದ್ದರು. ಆದರೆ ಛಲ ಬಿಡದೇ ತಮ್ಮ 12 ಎಕರೆ ಜಮೀನಿನಲ್ಲಿ ಟೊಮೆಟೋವನ್ನೇ ಮುಂದುವರೆಸಿದರ ಪರಿಣಾಮ ಈಗ ಭಾರಿ ಗಳಿಕೆ ಕಂಡಿದ್ದಾರೆ. ಮೇನಲ್ಲಿ ಒಂದು ಕ್ರೇಟಿಗೆ 40 ರು.ಗೆ ಮಾರುತ್ತಿದ್ದ ಟೊಮೆಟೋವನ್ನು ಜೂನ್‌ನಲ್ಲಿ 770 ರು.ಗೆ ಮಾರಿದ್ದರು. ಆಗ 1.5 ಕೋಟಿ ರು. ಆದಾಯ ಬಂದಿತ್ತು. ಬಳಿಕ ಜುಲೈನಲ್ಲಿ ಬರೋಬ್ಬರಿ 2200 ರು.ಗೆ 1 ಕ್ರೇಟ್‌ ಮಾರಿದ್ದಾರೆ. ಇದರಿಂದ ಮತ್ತೆ 1.5 ಕೋಟಿ ರು. ಆದಾಯ ಬಂದಿದೆ.

ಅನೇಕ ರಾಜ್ಯಗಳಲ್ಲಿ ಟೊಮ್ಯಾಟೋ ದರ ಕೆಜಿಗೆ 80ರೂ.ಗೆ ಇಳಿಕೆ; ಬೆಲೆಯೇರಿಕೆ ತಡೆಗೆ ಕೇಂದ್ರದ ಮಹತ್ವದ ಕ್ರಮ

ಈವರೆಗೂ 18,000 ಕ್ರೇಟ್‌ವರೆಗೆ ಮಾರಾಟ ಮಾಡಿದ್ದಾಗಿ ಅವರು ಹೇಳಿದ್ದಾರೆ.

Latest Videos
Follow Us:
Download App:
  • android
  • ios