ಕೃಷಿ ಮಸೂದೆ ಬಗ್ಗೆ ಮೋದಿ ಮಾತು: ಮಾರುಕಟ್ಟೆಗಳು ಈ ಹಿಂದಿನಂತೆ ಕಾರ್ಯ ನಿರ್ವಹಿಸಲಿವೆ!

ಕೃಷಿ ಮಸೂದೆಗೆ ಭಾರೀ ವಿರೋಧ| ಮಸೂದೆ ಮಂಡನೆ ಬೆನ್ನಲ್ಲೇ ಕೃಷಿ ಮಸೂದೆ ಬಗ್ಗೆ ಪಿಎಂ ಮೋದಿ ಮಾತು| ಮಾರುಕಟ್ಟೆಗಳು ಈ ಹಿಂದಿನಂತೆ ಕಾರ್ಯ ನಿರ್ವಹಿಸಲಿವೆ

Farm bills will empower farmers says PM Modi amid opposition protests pod

ನವದೆಹಲಿ(ಸೆ.21): ಬಿಹಾರ ವಿಧಾನಸಭಾ ಚುನಾವಣೆ 2020 ರ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಪ್ರಧಾನ ಮಂತ್ರಿ 14,258 ಕೋಟಿ ರೂಪಾಯಿ 9 ಹೆದ್ದಾರಿ ಯೋಜನೆಗಳಿಗೆ ಶಿಲಾಬನ್ಯಾಸ ನೆರವೇರಿಸಿದ್ದಾರೆ. ಅಲ್ಲದೇ 45,945 ಹಳ್ಳಿಗಿಗೆ ಆಪ್ಟಿಕಲ್ ಫೈಬರ್ ಇಂಟರ್ನೆಟ್ ಸೇವೆಗಳ ಜಾರಿಗೊಳಿಸಲು 'ಘರ್‌ ತಕ್ ಫೈಬರ್' ಎಂಬ ಯೋಜನೆಯನ್ನೂ ಉದ್ಘಾಟಿಸಿದ್ದಾರೆ. 

"

ಇನ್ನು ಈ ಕಾರ್ಯಕ್ರಮದ ವೇಳೆ ಪಿಎ ಮೋದಿ ಕೃಷಿ ಬಿಲ್ ಸಂಬಂಧ ತಮ್ಮ ಅಭಿಪ್ರಾಯವನ್ನೂ ತಿಳಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು ನಾನು ದೇಶದ ಪ್ರತಿಯೊಬ್ಬ ರೈತನಿಗೂ MSP ವ್ಯವಸ್ಥೆ ಈ ಹಿಂದೆ ಹೇಗೆ ಜಾರಿಯಲ್ಲಿತ್ತೋ ಅದೇ ರೀತಿ ಮುಂದುವರೆಯುತ್ತದೆ ಎಂಬ ವಿಶ್ವಾಸ ನೀಡುತ್ತೇನೆ. ಈ ವರ್ಷ ರಬಿಯಲ್ಲಿ ಗೋಧಿ, ಧಾನ್ಯ, ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳನ್ನು ಸೇರಿಸಿ ರೈತರಿಗೆ ಒಂದು ಲಕ್ಷ 13 ಸಾವಿರ ಕೋಟಿ ರೂಪಾಯಿ MSPಯಲ್ಲಿ ನೀಡಲಾಗಿದೆ. ಈ ಮೊತ್ತವೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 30ಕ್ಕಿಂತ ಹೆಚ್ಚು ಎಂದಿದ್ದಾರೆ.

ಇನ್ಮುಂದೆ ದೇಶದ ರೈತರು ದೊಡ್ಡ ದೊಡ್ಡ ಉಗ್ರಾಣಗಳಲ್ಲಿ, ಕೋಲ್ಡ್‌ ಸ್ಟೋರೇಜ್‌ನಲ್ಲಿ ಇದನ್ನು ಸುಲಭವಾಗಿ ಶೇಖರಿಸಿಡಬಹುದು. ಇದಕ್ಕೆ ಸಂಬಂಧಿಸಿದ ಕಾನೂನಾತ್ಮಕ ಸಮಸ್ಯೆಗಳು ದೂರವಾದಾಗ ನಮ್ಮ ದೇಶದಲ್ಲಿ ಕೋಲ್ಡ್‌ ಸ್ಟೋರೇಜ್‌ನ ನೆಟ್ವರ್ಕ್‌ ಇನ್ನಷ್ಟು ಅಭಿವೃದ್ಧಿ ಕಾಣಲಿದೆ ಹಾಗೂ ಮತ್ತಷ್ಟ ವಿಸ್ತರಿಸಲಿದೆ ಎಂದಿದ್ದಾರೆ.

ಕೃಷಿ ಮಾರುಕಟ್ಟೆಗಳ ಕಚೇರಿಯಲ್ಲಿ ಸರಿಪಡಿಸಲು ಅಲ್ಲಿನ ಕಂಪ್ಯೂಟರೈಸೇಷನ್ ಮಾಡಲು ಕಳೆದ  5-6 ವರ್ಷದಿಂದ ಬಹುದೊಡಡ ಅಭಿಯಾನ ನಡೆಯುತ್ತಿದೆ. ಹೀಗಾಗಿ ಹೊಸ ಕೃಷಿ ಸುಧಾರಣೆ ಜಾರಿಗೊಂಡ ಬಳಿಕ ಮಾರುಕಟ್ಟೆಗಳು ಕೊನೆಯಾಗುತ್ತವೆ ಎಂದು ಯಾರು ಹೇಳುತ್ತಾರೋ ಅವರೆಲ್ಲರೂ ರೈತರಿಗೆ ಸುಳ್ಳು ಹೇಳುತ್ತಿದ್ದಾರೆ. ಹೀಗಾಗಿ ಜಾರಿಗೊಳ್ಳುವ ಸುಧಾರಣೆ ಕೃಷಿ ಮಾರುಕಟ್ಟೆಗೆ ಹಾನಿಯುಂಟು ಮಾಡುವುದಿಲ್ಲ. ಕೃಷಿ ಮಾರುಕಟ್ಟೆಗಳಲ್ಲಿ ಈ ಹಿಂದೆ ಹೇಗೆ ವಹಿವಾಟು ನಡೆಯುತ್ತಿತ್ತೋ ಹಾಗೇ ಕಾರ್ಯ ನಿರ್ವಹಿಸಲಿದೆ. ನಮ್ಮ ಎನ್‌ಡಿಎ ಸರ್ಕಾರವೇ ದೇಶದ ಎಲ್ಲಾ ಕೃಷಿ ಮಾರುಕಟ್ಟೆಗಳನ್ನು ಆಧುನೀಕರಣಗೊಳಿಸಲು ನಿರಂತರವಾಘಿ ಶ್ರಮಿಸಿದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios