ನವದೆಹಲಿ(ಜ.12): ರೈತ ಸಂಘಟನೆಗಳ ಹೋರಾಟ ಉದ್ದೇಶವೇನು? ಈ ಪ್ರಶ್ನೆ ಉದ್ಭವವಾಗಲು ಕಾರಣವಿದೆ. ಸುಪ್ರೀಂ ಕೋರ್ಟ್ ಕೇಂದ್ರದ ಕೃಷಿ ಕಾಯ್ದೆಗೆ ತಡೆ ನೀಡಿದೆ. ಇನ್ನು ಕಾಯ್ದೆ ಕುರಿಚು ಚರ್ಚಿಸಲು ಸಮಿತಿಯೊಂದನ್ನು ರಚಿಸಿದೆ. ಇದೀಗ ರೈತರ ವರಸೆ ಬದಲಾಗಿದೆ. ಸಮಿತಿ ಬೇಡ, ಏನೂ ಬೇಡ, ಕೃಷಿ ಕಾಯ್ದೆ ರದ್ದು ಮಾಡಿ ಎಂದು ಆಗ್ರಹಿಸಿದ್ದಾರೆ. ಇಷ್ಟೇ ಅಲ್ಲ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.

ಕೇಂದ್ರ ಕೃಷಿ ಕಾಯ್ದೆಗೆ ಸುಪ್ರೀಂ ತಡೆ ನೀಡಿದರೂ ನಿಲ್ಲದ ರೈತರ ಹೋರಾಟ!..

ರೈತರ ಆರಂಭದಲ್ಲಿ ಹೇಳಿದಂತೆ ಕೃಷಿ ಕಾಯ್ದೆಗೆ ತಡೆ ಸಿಕ್ಕಿದೆ. ಈ ಕಾಯ್ದೆ ರೈತರಿಗೆ ಮಾರಕವೋ ಅಥವಾ ಪೂರಕವೋ ಅನ್ನೋದು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ವರದಿ ನೀಡಲಿದೆ. ಆದರೆ ಈ ಸಮತಿ ವರದಿ ನೀಡುವುದೇ ಬೇಡ ಎನ್ನುತ್ತಿದೆ ರೈತ ಸಂಘಟನೆಗಳು. ವರದಿ ಬೇಡ, ಕಾಯ್ದೆ ರದ್ದು ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಇದೇ ರೈತ ಸಂಘಟನೆಗಳು 2019ರ ಲೋಕಸಭಾ ಚುನಾವಣೆಗೂ ಮೊದಲು ಮಾಡಿದ ಲೈವ್ ವಿಡಿಯೋ ಇದೀಗ ವೈರಲ್ ಆಗಿದೆ.

 

ಈ ವಿಡಿಯೋದಲ್ಲಿ ಭಾರತೀಯ ಕಿಸಾನ್ ಸಂಘ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾತನಾಡಿದ್ದಾರೆ. 2019ರ ಲೋಕಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಣಾಳಿಕೆ ಹಿಡಿದು ಮಹತ್ವದ ಘೋಷಣೆ ಮಾಡಿದ್ದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಗತ್ಯ ಸರುಗಳ ಕಾಯ್ದೆ ತಿದ್ದುಪಡಿ, ಎಂಪಿಎಂಸಿ ಕಾಯ್ದೆ ರದ್ದು ಸೇರಿದಂತೆ ಪ್ರಮುಖ ಕೃಷಿ ಸುಧಾರಣೆಗಳನ್ನು ಕಾಂಗ್ರೆಸ್ ಹೇಳಿದೆ. 

ಸ್ವತಂತ್ರಾ ಭಾರತದಲ್ಲಿ ಇದು ಮೊತ್ತ ಮೊದಲ ಹಾಗೂ ಮಹತ್ವದ ಬದಲಾಣೆಗೆ ಕಾಂಗ್ರೆಸ್ ಮುಂದಾಗಿದೆ. ಈ ಕಾರಣಕ್ಕಾಗಿ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದು ಬೂಪಿಂದರ್ ಸಿಂಗ್ ಹೇಳಿದ್ದರು. ಇದೀಗ ಇದೇ ಭಾರತೀಯ ಕಿಸಾನ್ ಯೂನಿಯನ್, ಎಂಪಿಎಂಸಿ ಕಾಯ್ದೆ ರದ್ದು ಮಾಡಿದ್ದು ಯಾಕೆ? ಅಗತ್ಯ ಸರಕು ಕಾಯ್ದೆ ತಿದ್ದುಪಡಿ ಮಾಡಿದ್ದೇ ತಪ್ಪು ಎನ್ನುತ್ತಿದೆ.

ಭಾರತೀಯ ಕಿಸಾನ್ ಸಂಘ 2019ರ ಮೇ 11ರಂದು ಪಂಜಾಬ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಬಹಿರಂಗ ಸಮಾವೇಷ ಮಾಡಿತ್ತು. ಈ ಕುರಿತು ಭಾರತೀಯ ಕಿಸಾನ್ ಯೂನಿಯನ್ ಟ್ವೀಟ್ ಮೂಲಕ ಪೋಸ್ಟ್ ಮಾಡಿತ್ತು.