ಬೆಂಗಳೂರು(ಸೆ. 15)  ಶ್ವಾನ ಪ್ರಿಯರು ಈ ಸುದ್ದಿಯನ್ನು ನೋಡಲೇಬೇಕು. ಸಾಂಪ್ರದಾಯಿಕವಾಗಿ ಮುದ್ದು ನಾಯಿಮರಿಯನ್ನು ಮನೆ ತುಂಬಿಸಿಕೊಳ್ಳಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಶ್ವಾನ ಸಂಭ್ರಮದ ವಿಡಿಯೋ ವೈರಲ್ ಆಗಿದ್ದು ಸಾವಿರಾರು ಜನ ಮೆಚ್ಚಿ ಕೊಂಡಾಡಿದ್ದಾರೆ.  ಲಿಟಲ್ ಹನಿ ಡೆವ್ ಎನ್ನುವ ಟ್ವಿಟರ್ ಖಾತೆಯಿಂದ ವಿಡಿಯೋ ಅಪ್ ಲೋಡ್ ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ಮಾಲೀಕನ ನಿಧನ ಅರಗಿಸಿಕೊಳ್ಳಲಾಗದೆ ಪ್ರತಿ ದಿನ ಅಳುವ ಶ್ವಾನಗಳು

ಯುವತಿಯೊಬ್ಬಳು ಶ್ವಾನದ ಮರಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಕುಂಕುಮದ ನೀರಿನಲ್ಲಿ ಶ್ವಾನದ ಪಾದಗಳನ್ನು ಅದ್ದಲಾಗುತ್ತದೆ. ಅದಾದ ಮೇಲೆ ಮನೆ ಒಳಗಿನಿಂದ ಬರುವ ಇನ್ನೊಬ್ಬ ಯುವತಿ ಆರತಿ ಎತ್ತಿ ಶ್ವಾನವನ್ನು ಬರಮಾಡಿಕೊಳ್ಳುತ್ತಾಳೆ.

ಟ್ವಿಟರ್ ನಲ್ಲಿ ಮೆಚ್ಚುಗೆಗಳ ಮಹಾಪೂರ ಹರಿದು ಬಂದಿದ್ದು  519 ಸಾವಿರ ವೀವ್ಸ್ ಕಂಡಿದೆ.   ಇದೇ ರೀತಿಯ ಹಲವು ವಿಡಿಯೋಗಳನ್ನು ಮಾಡಿ ಹರಿಬಿಡಲಾಗಿದೆ.